
ವಿಜಯಪುರ: 2022-23ನೇ ಸಾಲಿನ ಕಬ್ಬು ಬೆಳೆದ ರೈತರ ಕಬ್ಬಿಗೆ ನ್ಯಾಯಯುತವಾದ ವೈಜ್ಞಾನಿಕ ಬೆಲೆ ನೀಡಬೇಕೆಂದು ವಿಜಯಪುರದ ಕಬ್ಬು ಬೆಳಗಾರರ ಸಂಘ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಅವರಿಗೆ ಮನವಿ ಸಲ್ಲಿಸಿದರು.
ಕಬ್ಬು ಬೆಳಗಾರರ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀಮಂತ ದುದ್ದಗಿ ಮಾತನಾಡಿ ಮುಂದಿನ ಎರಡು ವಾರಗಳಲ್ಲಿ ಕಬ್ಬು ನುರಿಸುವ ಹಂಗಾಮವನ್ನು ಪ್ರಾರಂಭಮಾಡಲು ತಯಾರಿ ಮಾಡಿಕೋಳ್ಳುತ್ತಿರುವ ಸಕ್ಕರೆ ಕಾರ್ಖಾನೆಗಳು ಮೊದಲು 2022-23ನೇ ಸಾಲಿಗೆ ಕಬ್ಬಿನ ವೈಜ್ಞಾನಿಕ ಬೆಲೆ ಮೊದಲು ನಿಗದಿಪಡಿಸಲಿ ಆಮೇಲೆ ನಿರುಸಲಿಕೆ ಪ್ರಾರಂಬಿಸಲಿ ದರ ನಿಗದಿ ಮಾಡದೆ ಮಾಡುತ್ತಿರುವುದು ರೈತರು ಖಂಡಿಸುತ್ತಾರೆ ಎಂದು ಹೇಳಿದರು.
ಕಾಂಗ್ರೇಸ್ ಮುಖಂಡ ಅಶೋಕ ಮನಗೂಳಿ, ಕಬ್ಬು ಬೆಳಗಾರರ ಸಂಘದ ಉಪಾ ಅಧ್ಯಕ್ಷ ಗುರುಪಾದ ಬಾಸಗಿ, ಕಾರ್ಯದರ್ಶಿ ಬಾಬು ಕೊತಂಬರಿ, ರೈತ ಮುಖಂಡ ಶ್ರೀಶೈಲ ನಂದೂರ ಹಾಗೂ ಹಲವು ರೈತರು ಉಪಸ್ಥಿತರಿದ್ದರು.
