ಸಿಂದಗಿ : ತಾಲೂಕಿನ ಬ್ಯಾಕೋಡ ಗ್ರಾಮದ ರೈತ ಪ್ರಶಾಂತ ಗಿರಿಮಲ್ಲ ಹಳಗೊಂಡ ಸಾಲಬಾಧೆಯಿಂದ ನೇಣು ಹಾಕಿಕೊಂಡು ಅವರದೆ ತೋಟದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ್ತನಿಗೆ ಒಟ್ಟು 2ಎ.37ಗುಂಟೆ ಜಮಿನಿದ್ದು ಪಿ.ಕೆ.ಪಿ.ಎಸ್ ಬ್ಯಾಕೋಡ ಬ್ಯಾಂಕಿನಲ್ಲಿ ಎರಡು ಲಕ್ಷ ಎಂಬತ್ತು ಸಾವಿರ ಸಾಲವಿತ್ತು.
ಮೃತ್ತನ ಮಡದಿ ಶೀವಲೀಲಾ ಹಾಗೂ ಕಿರಿಯ ಸುಪುತ್ರ ಬಸವರಾಜ ನಾಲ್ಕು ದಿನದ ಹಿಂದೆ ಯುಗಾದಿ ಹಬ್ಬಕೆಂದು ಊರಿಗೆ ಹೋಗಿದ್ದರು. ನಿನ್ನೆ ಸಾಯಂಕಾಲ ಹೊಲದಲ್ಲಿ ರೂಟರ್ ಹೊಡೆಸುವುದಾಗಿ ಹೇಳಿ ಬಂದಿದ್ದರು. ಇಂದು ಬೆಳಗ್ಗೆ ನಾನು ಬರುವಷ್ಟರಲ್ಲಿ ನೇಣು ಹಾಕಿಕೊಂಡು ಮೃತ್ತರಾಗಿದ್ದರು ಎಂದು ಸುಪುತ್ರ ಆಕಾಶ ತಿಳಿಸಿದ್ದಾನೆ.
ಸಿಂದಗಿ ಪೊಲೀಸ್ ಠಾಣಾ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
