Sunday, 25 October 2026 — ವೇಗದೂತ
BREAKING NEWS
News ಅಥಣಿ: ಮಾಜಿ ಪೊಲೀಸ್ ಅಧಿಕಾರಿ ಬಸವರಾಜ ಬಿಸನಕೊಪ್ಪ, ಶಶಿಕಾಂತ ಪಡಸಲಗಿ ಸೇರಿ ಮೂವರ ವಿರುದ್ಧ ಚುನಾವಣಾ ಆಯೋಗದ ಆದೇಶ Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಅಥಣಿ: ಮಾಜಿ ಪೊಲೀಸ್ ಅಧಿಕಾರಿ ಬಸವರಾಜ ಬಿಸನಕೊಪ್ಪ, ಶಶಿಕಾಂತ ಪಡಸಲಗಿ ಸೇರಿ ಮೂವರ ವಿರುದ್ಧ ಚುನಾವಣಾ ಆಯೋಗದ ಆದೇಶ Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ.
News

ಕರ್ನಾಟಕದಲ್ಲಿ ಬಿಕ್ಷಾಟನೆ ನಿರ್ಮೂಲನೆ ಮಾಡಲು ಪಣ: ಬಸವರಾಜ ನಾಯಕ

ವಿಜಯಪುರ : ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷರಾದ ಬಸವರಾಜ್ ನಾಯಕ ಅವರು ಇತ್ತೀಚೆಗೆ ವಿಜಯಪುರ ಜಿಲ್ಲೆಗೆ ಭೇಟಿ ನೀಡಿ ವಿಜಯಪುರ ಜಿಲ್ಲೆಯಲ್ಲಿ ಬಿಕ್ಷಾಟಣೆಯ ನಿರ್ಮೂಲನೆಯ ಕ್ರಮಗಳನ್ನು ಪರಿಶೀಲಿಸಿದರು. ಸ್ಥಳೀಯ ನಿರಾಶ್ರಿತರ ಪರಿಹಾರ ಕೇಂದ್ರ ಅಫ್ಜಲ್‌ಪುರ ಟಕ್ಕೆ ವಿಜಯಪುರ ಕಚೇರಿಗೆ ಭೇಟಿ ನೀಡಿ…
ವಿಜಯಪುರ : ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷರಾದ ಬಸವರಾಜ್ ನಾಯಕ ಅವರು ಇತ್ತೀಚೆಗೆ ವಿಜಯಪುರ ಜಿಲ್ಲೆಗೆ ಭೇಟಿ ನೀಡಿ ವಿಜಯಪುರ ಜಿಲ್ಲೆಯಲ್ಲಿ ಬಿಕ್ಷಾಟಣೆಯ ನಿರ್ಮೂಲನೆಯ ಕ್ರಮಗಳನ್ನು ಪರಿಶೀಲಿಸಿದರು. ಸ್ಥಳೀಯ ನಿರಾಶ್ರಿತರ ಪರಿಹಾರ ಕೇಂದ್ರ ಅಫ್ಜಲ್‌ಪುರ ಟಕ್ಕೆ ವಿಜಯಪುರ ಕಚೇರಿಗೆ ಭೇಟಿ ನೀಡಿ ತಪಾಸಣೆ ನಡೆಸಿದರು.
ಅಧ್ಯಕ್ಷರ ಸಮ್ಮುಖದಲ್ಲಿ ಸ್ಥಳೀಯ ನಿರಾಶ್ರಿತರ ಪರಿಹಾರ ಕೇಂದ್ರದ ಅಧೀಕ್ಷಕರಾದ ಬಸವರಾಜ್ ಎಸ್ ನಾಟಿಕರ್ ಮತ್ತು ಸಿಬ್ಬಂದಿಯು ಕಾರ್ಯಾಚರಣೆಗಿಳಿದರು. ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣ ಮತ್ತು ವಿವಿಧ ಸ್ಥಳಗಳಲ್ಲಿ ರಾತ್ರಿ 9 ಗಂಟೆಯವರೆಗೆ ಸಂಚಾರ ನಡೆಸಿ ಭಿಕ್ಷಾಟನೆ ಮಾಡುತ್ತಿರುವವರನ್ನು ಬಂಧಿಸಿ ನಿರ್ಮಲನಾ ಕೇಂದ್ರಕ್ಕೆ ಕರೆತಂದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷರು, ಬಿಕ್ಷಾಟನೆಯನ್ನು ಸಂಪೂರ್ಣ ನಿರ್ಮೂಲನೆ ಮಾಡಬೇಕು ಎಂಬುದರ ಬಗ್ಗೆ ಇತ್ತೀಚೆಗೆ ನಡೆದ ಅಧಿವೇಶನದಲ್ಲಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷರಾದ ತಾವುಗಳು, ವಿಜಯಪುರ ಜಿಲ್ಲೆ ಸೇರಿದಂತೆ ವಿವಿಧೆಡೆ ಸಂಚರಿಸಿ ಬಿಕ್ಷಾಟನೆ ನಿರ್ಮೂಲನೆಯ ಕ್ರಮಗಳನ್ನು ಪರಿಶೀಲಿಸುತ್ತಿರುವೆ ಎಂದು ತಿಳಿಸಿದರು.
ಮೈಸೂರು ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡ ವೇಳೆಯಲ್ಲಿ, ಬಿಕ್ಷಾಟನೆಯಲ್ಲಿ ತೊಡಗಿದವರನ್ನು ಹಿಡಿದು ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಬಿಟ್ಟಿದ್ದೇವೆ. ಅದೇ ರಿತಿ ವಿಜಯಪುರದಲ್ಲಿ ಸಹ 4 ಜನರನ್ನು ಹಿಡಿದು ಅವರನ್ನು ಸಹ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಕಳುಹಿಸಿದ್ದೇವೆ.

ರಾಜ್ಯದಲ್ಲಿ ಒಟ್ಟು 14 ಸ್ಥಳೀಯ ನಿರಾಶ್ರಿತರ ಪರಿಹಾರ ಕೇಂದ್ರಗಳಿವೆ. ಇನ್ನು 5 ಕಡೆಗಳಲ್ಲಿ ಜಾಗ ಗುರುತಿಸುವ ಕಾರ್ಯ ಪ್ರಕ್ರಿಯೆ ನಡೆಯುತ್ತಿದೆ. ರಾಜ್ಯದ 25 ಜಿಲ್ಲೆಗಳಲ್ಲಿ ಸಹ ನಿರಾಶ್ರಿತರ ಪರಿಹಾರ ಕೇಂದ್ರ ಸ್ಥಾಪನೆಯ ಕಾರ್ಯ ಮಾಡಲು ಯೋಜಿಸಲಾಗಿದೆ. ಈ ಕೇಂದ್ರಗಳಿಗೆ ಅವಶ್ಯಕವಿರುವ ಎಲ್ಲವನ್ನು ಕೂಡಲೇ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು. ಇಂತಹ ಕಾರ್ಯದ ಮೂಲಕ ನೀವು ನಿರಾಶ್ರೀತರಲ್ಲ, ಆಶ್ರಿತರು ಎಂದು ಅವರಲ್ಲಿ ಧೈರ್ಯ ತುಂಬುತ್ತಿದ್ದೇವೆ. ಎಷ್ಟೇ ಮನವರಿಕೆ ಮಾಡಿದರೂ ಕೆಲವು ನಿರಾಶ್ರಿತರ ಮಕ್ಕಳು, ಪಾಲಕರು ಬಾರದೇ ಇರುವುದರಿಂದ ಅಂತಹ ನಿರಾಶ್ರಿತರನ್ನು ನಾವೇ ನೋಡಿಕೊಳ್ಳುತ್ತಿದ್ದೇವೆ. ಅವರು ಏನು ಕೆಲಸ ಮಾಡುತ್ತಾರೋ ಆ ಕೆಲಸವನ್ನು ದಿನಗೂಲಿ ಮೇಲೆ ನೀಡಿ ಅವರಿಗೆ ಕೂಲಿ ಹಣ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯದಲ್ಲಿ ಬಿಕ್ಷಾಟನೆಯನ್ನು ಸಂಪೂರ್ಣ ನಿರ್ಮೂಲನೆ ಮಾಡಲು ನಾವು ಸೇರಿದಂತೆ ನಮ್ಮ ಅಧಿಕಾರಿಗಳು ಮತ್ತು ಸಿಬ್ಬಂದಿ ಪಣ ತೊಟ್ಟಿದ್ದೇವೆ. ನಮ್ಮ ಈ ಜನಪರ ಕಾರ್ಯಕ್ಕೆ ನಮ್ಮ ಸಚಿವರು ಎಲ್ಲ ರೀತಿಯ ಸಹಕಾರ, ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಸ್ಥಳೀಯ ನಿರಾಶ್ರಿತರ ಪರಿಹಾರ ಕೇಂದ್ರ ವಿಜಯಪುರದಲ್ಲಿ ಮಹಿಳಾ ವಸತಿ ಗೃಹವು ಹಳೆಯದಾಗಿದೆ. ಇದನ್ನು 1.50 ಕೋಟಿ ರೂ.ವೆಚ್ಚದಲಿ ಹೊಸದಾಗಿ ನಿರ್ಮಾಣ ಮಾಡಲು ಕೂಡಲೇ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

vegadhut@gmail.com.

Leave a comment