ಸಿಂದಗಿ, ಆ.21: ಸಿಂದಗಿ ಪಟ್ಟಣದ ಮೊರಟಗಿ ರಸ್ತೆಯಲ್ಲಿರುವ ಗುಂದಗಿ ಫಂಕ್ಷನ್ ಹಾಲ್‌ನಲ್ಲಿ ಆ.23ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ ಎಂದು ಕಾರ್ಯಕ್ರಮದ ಅಧ್ಯಕ್ಷ ರಾಯಪ್ಪ ಇವಣಗಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾರ್ಯಕ್ರಮಕ್ಕೆ ಪೂಜ್ಯಶ್ರೀ ಬಸವರಾಜ ದೇವರು ಮನಸೂರು, ರೇವಣಸಿದ್ದೇಶ್ವರ ಮಠ, ಧಾರವಾಡ ಸೇರಿದಂತೆ ಐವರು ಪೂಜ್ಯರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ರಾಜ್ಯ ಸರ್ಕಾರದ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸ್ಥಳೀಯ ಶಾಸಕ ಅಶೋಕ ಮನಗೂಳಿ ಜ್ಯೋತಿ ಬೆಳಗಿಸಲಿದ್ದಾರೆ ಎಂದರು.
ಸಮಾಜದ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮತ್ತು ಬಂಡೆಪ್ಪ ಖಾಶೆಂಪೂರ ಅವರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಲಿದ್ದಾರೆ. ವರ್ತೂರು ಪ್ರಕಾಶ್ ಹಾಗೂ ಶರಣಪ್ಪ ಸುಣಗಾರ ಅವರು ಪುಷ್ಪಾರ್ಚನೆ ಮೂಲಕ ಗೌರವ ಸಮರ್ಪಿಸಲಿದ್ದಾರೆ. ಮಾಜಿ ಶಾಸಕ ರಮೇಶ ಭೂಸನೂರ ಅವರು ಭವ್ಯ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ನಾಗಲಕ್ಷ್ಮೀ ಚೌದರಿ ಹಾಗೂ ಜಿ.ಬಿ. ವಿನಯಕುಮಾರ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಬೆಳಿಗ್ಗೆಯಿಂದಲೇ ವಿವಿಧ ಕಲಾ ತಂಡಗಳ ವಾದ್ಯ-ವೈಭವದೊಂದಿಗೆ ಭವ್ಯ ಮೆರವಣಿಗೆ ನಡೆಯಲಿದ್ದು, ಸಂಜೆವರೆಗೂ ವಿವಿಧ ಅರ್ಥಪೂರ್ಣ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸಲಾಗುವುದು. ಆದ್ದರಿಂದ ಅಖಂಡ ಸಿಂದಗಿ ತಾಲೂಕಿನ ಸಮಸ್ತ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ರಾಯಪ್ಪ ಇವಣಗಿ ಮನವಿ ಮಾಡಿದರು.
ಪ್ರೊ. ಎ.ಆರ್. ಹೆಗ್ಗಣದೊಡ್ಡಿ ಮಾತನಾಡಿ, ಕಾರ್ಯಕ್ರಮವು ವಿವಿಧ ವಿಶೇಷ ಹಾಗೂ ವಿಭಿನ್ನ ಕಲಾ ತಂಡಗಳ ಆಕರ್ಷಕ ಪ್ರದರ್ಶನದೊಂದಿಗೆ ಅದ್ಧೂರಿಯಾಗಿ ನಡೆಯಲಿದ್ದು, ಬೆಳಿಗ್ಗೆ ನಡೆಯುವ ಭವ್ಯ ಮೆರವಣಿಗೆಯಿಂದ ಆರಂಭವಾಗಿ ಸಂಜೆವರೆಗೆ ನಿರಂತರವಾಗಿ ಕಾರ್ಯಕ್ರಮಗಳು ಜರುಗಲಿವೆ ಎಂದು ಹೇಳಿದರು. ಸಿದ್ದು ಬುಳ್ಳಾ ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ನಾಗಪ್ಪ ಶಿವೂರ, ಮಲ್ಲಿಕಾರ್ಜುನ ಸಾವಳಸಂಗ, ಕೆಂಚಪ್ಪ ಕತ್ನಳ್ಳಿ, ನಿಂಗಣ್ಣ ಬುಳ್ಳಾ,ಮಡ್ಡಪ್ಪ ಸೊನ್ನದ,ಎಲ್ ಎಸ್ ಪರಮಾನಂದ,ಪಿ ಎಸ್ ಹಚ್ಯಾಳ,ಎಸ್ಎಸ್ ಕುರನಳ್ಳಿ,ಎಸ್ ಕೆ ಪೂಜಾರಿ,ಪ್ರಕಾಶ ಅಡವಿ,ಪ್ರಕಾಶ ಹಿರೆಕುರುಬರ,ಶಿವಾನಂದ ಗಣಿಯಾರ,ಅಮೋಗಿ ಹರವಾಳ,ಶ್ರೀನಿವಾಸ ಉಕ್ಕಲಿ,ಗಂಗಾಧರ ಮಲ್ಲಾಡ,ಮಾಳಪ್ಪ ಕರೆಕ್ಕಿ,ಗಂಗಾಧರ ತಾವರಖೇಡ,ಬಸವರಾಜ ನಾಗರಾಳ,ಜಿ ಎನ್ ನಡಕೂರ,ರೇವಣಸಿದ್ದ ಹೂಗಾರ,ಮಹಾಂತೇಶ ಗುಂದಗಿ,ಲಗಮಣ್ಣ ಹೂಗಾರ,ಬೀರಪ್ಪ ಬ್ಯಾಕೋಡ,ವಿಠ್ಠಲ ಉಡಚಾಣ,ಎಂ ಬಿ ಮಾಕೊಂಡ,ಹಿರಗಪ್ಪ ಪೂಜಾರಿ,ಸಿದ್ದಪ್ಪ ಗಡೇದ,ರಮೇಶ ಅಡವಿ,ರೇವಣಸಿದ್ಧ ಪೂಜಾರಿ,ಸುಭಾಷ್ಚಂದ್ರ ಸುಂಬಡ ಇದ್ದರು
