ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಸರ್ಕಾರ ದೇಶದಲ್ಲಿ ಸಾಲ ಮಾಡಿ ಎರಡನೇ ಸ್ಥಾನದಲ್ಲಿರುವುದು ರಾಜ್ಯ ಕಾಂಗ್ರೆಸ್ ದಾಖಲೆ ಸೃಷ್ಟಿಸಿದೆ. ಸಾಲ ಮಾಡಿ ಸೊರಗುತ್ತಿದೆ ಕಾಂಗ್ರೆಸ್ ಎಂದು ಹೇಳಿದರು.
ಸಿಂದಗಿ : ಪಟ್ಟಣದ ಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ನಡೆದ ಮಂಡಲ ಕಾರ್ಯಾಕಾರಿಣಿ ಸಭೆಯನ್ನುದೇಶಿಸಿ ಮಾತನಾಡಿದ ಮಾಜಿ ಶಾಸಕ ರಮೇಶ ಭೂಸನೂರ ಹಗರಣಗಳು, ಜನಸಾಮಾನ್ಯರ ಮೇಲೆ ತೆರಿಗೆ ಹಾಕಿರುವುದು ಕಾಂಗ್ರೆಸ್ ನ ಪಕ್ಕಾ ಗ್ಯಾರಂಟಿಗಳಾಗಿವೆ. ಪ್ರಜಾಪ್ರಭುತ್ವದ ದೇಶದಲ್ಲಿ ಶಾಸಕರ ವಿರುದ್ಧ ಪ್ರಶ್ನಿಸಿದ್ದಲ್ಲಿ ಅಧಿಕಾರಿಗಳೇ ಹೆದರಿಸುವ ಹಂತಕ್ಕೆ ತಲುಪಿರುವುದು ದುರ್ದ್ಯವ.
ಕಾರ್ಯಕಾರಿಣಿ ಸಭೆಗೆ ಆಗಮಿಸಿರುವ ನೀವು ಬೂತ್ ಗೆಲ್ಲುವ ನೀಟ್ಟಿನಲ್ಲಿ ಮಾತ್ರ ಕಾರ್ಯ ಪ್ರವೃತ್ತಿಯಲ್ಲಿ ತೊಡಗಿದಾಗ ಮಾತ್ರ ಪಕ್ಷಕ್ಕೆ ಗೆಲುವು ಸಿಗುವುದು. ಅಧಿಕಾರದ ಭಂಡ ತನವನ್ನು ಮೇಟ್ಟಿ ಕೆಲಸ ಮಾಡಬೇಕಿದೆ, ಶಾಸಕರ ತಾಳಕ್ಕೆ ತಕ್ಕಂತೆ ಅಧಿಕಾರಿಗಳು ಕುಣಿಯುತ್ತಿರುವುದರಿಂದ ಪ್ರಜಾಪ್ರಭುತ್ವದ ಹಕ್ಕನ್ನು ಪಡೆಯಲು ಹೋರಾಟ ಮಾಡ ಬೇಕಿದೆ. ಒಗ್ಗಟ್ಟಾಗಿ ಶ್ರಮಿಸೋಣಾ ನಿಮ್ಮೊಂದಿಗೆ ನಾವು ಇರುತ್ತೇವೆ ಎಂದು ಹೇಳಿದರು.
ನಂತರ ಮಾತನಾಡಿದ ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಈರಣ್ಣ ರಾವೂರ ರಮೇಶ ಭೂಸನೂರ ಮರು ಆಯ್ಕೆಗೆ ಕಾರ್ಯಕರ್ತರ ಪರಿಶ್ರಮ ಬಹಳ ಬೇಕಿದೆ. ಜಿಲ್ಲೆಯ ಎಂಟು ಮತಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಸಿಂದಗಿ ಯ ರಮೇಶ ಭೂಸನೂರ ವಿಜಯ ಪತಾಕೆಯೊಂದಿಗೆ ಶುಭಾರಂಭ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿಂದಗಿ ಉಸ್ತುವಾರಿ ಮಾಳುಗೌಡ ಪಾಟೀಲ, ಮಂಡಲ ಅಧ್ಯಕ್ಷ ಸಂತೋಷ ಪಾಟೀಳ ಡಂಬಳ ಮಾತನಾಡಿದರು.
ಹಿಂದುಳಿದ ಮೋರ್ಚಾದ ರಾಜ್ಯ ಉಪಾದ್ಯಕ್ಷ ವಿವೇಕ ಡಬ್ಬಿ, ಬಿ.ಎಚ್,ಬಿರಾದಾರ, ಅಶೋಕ ಅಲ್ಲಾಪುರ, ಸಿದ್ದು ಬುಳ್ಳಾ, ಶ್ರೀಶೈಲಗೌಡ ಮಾಗಣಗೇರಿ, ಶಂಕರ ಬಗಲಿ, ಮಲ್ಲಿಕಾರ್ಜುನ ಜೋಗುರ, ಎನ್.ಎಸ್.ಮಠ, ಪೀರು ಕೆರೂರು, ಗುರು ತಳವಾರ ಪ್ರಶಾಂತ ಕದ್ದರಕಿ, ಶ್ರೀಕಾಂತ ಬಿಜಾಪುರ, ಶಮಿ ಬಿಜಾಪುರ, ಸೇರಿದಂತೆ ಬೂತ್ ಮಟ್ಟದ ಅಧ್ಯಕ್ಷರು ಉಪಸ್ಥಿತರಿದ್ದರು.
