Home ಯುವ ನೋಟ ಕನ್ನಡವೆಂದರೆ ಕೇವಲ ನುಡಿ, ಭಾಷೆಯಲ್ಲ ನಾವಾಡುವ ಪ್ರತಿ ಭಾವನೆಯಾಗಿದೆ.

ಕನ್ನಡವೆಂದರೆ ಕೇವಲ ನುಡಿ, ಭಾಷೆಯಲ್ಲ ನಾವಾಡುವ ಪ್ರತಿ ಭಾವನೆಯಾಗಿದೆ.

ಪ್ರಾಧ್ಯಾಪಕ ಡಾ. ನಾಗರಾಜ ಮುರಗೋಡ

by vegadhut@gmail.com.
0 comments

ಕನ್ನಡ ಭಾಷೆ ಕೇವಲ ಒಂದು ಭಾಷೆಯಲ್ಲ ಅದು ನಮ್ಮ ಬದುಕು ಮತ್ತು ನಮ್ಮ ಅಸ್ಮಿತೆಯಾಗಿದೆ ಎಂದು ಸಿಂದಗಿಯ ಜಿ.ಪಿ.ಪೋರವಾಲ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ನಾಗರಾಜ ಮುರಗೋಡ ಹೇಳಿದರು.

ಸಿಂದಗಿ : ಸ್ಥಳಿಯ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧುವಾರ ಹಮ್ಮಿಕೊಂಡ ಕನ್ನಡ ಸಂಘದ ಚಟುವಟಿಕೆಗಳ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಜಗತ್ತಿನಲ್ಲಿ ಸುಮಾರು 6000 ಕ್ಕೂ ಅಧಿಕ ಭಾಷೆಗಳಿದ್ದು ಅವುಗಳಲ್ಲಿ 2500 ಕ್ಕೂ ಹೆಚ್ಚು ಭಾಷೆಗಳು ಭಾರತದಲ್ಲಿವೆ. ಇನ್ನು ಕೇಲವು ಭಾಷೆಗಳು ಅಳಿವಿನಂಚಿನಲ್ಲಿವೆ. ಇವುಗಳ ಮಧ್ಯದಲ್ಲಿ ಸಾವಿಲ್ಲದ,ಕೊನೆಯಿಲ್ಲದ ಭಾಷೆ ಎಂದರೆ ಅದು ನಮ್ಮ ಕನ್ನಡ ಭಾಷೆ. ಹಲವು ಭಾಷೆಗಳಿಗೆ ಇನ್ನು ತಮ್ಮದೆ ಆದ ಸ್ವ:ತ ಲಿಪಿಗಳಿಲ್ಲ ಆದರೆ ಕನ್ನಡ ಭಾಷೆ ಶ್ರೇಷ್ಠವಾದ ಲಿಪಿ ಇದೆ. ಕನ್ನಡವೆಂದರೆ ಕೇವಲ ನುಡಿ, ಭಾಷೆಯಲ್ಲ ನಾವಾಡುವ ಪ್ರತಿ ಭಾವನೆಯಾಗಿದೆ.

ಉದ್ಯೋಗಕ್ಕಾಗಿ ಅನ್ಯ ಭಾಷೆಗಳನ್ನು ಕಲಿಯಿರಿ ಆದರೆ ಮನೆ ಮಾತು ಶಿಕ್ಷಣದ ಮಾಧ್ಯಮ ಕನ್ನಡವಾಗಿರಲಿ. ಇಡಿ ವಿಶ್ವಸಾಹಿತ್ಯಕ್ಕೆ ಶ್ರೇಷ್ಠ ಕಾಣಿಕೆ ಕೊಟ್ಟಿದ್ದು ಅದು ವಚನ ಸಾಹಿತ್ಯವಾಗಿದೆ. ಬೇರೆ ಭಾಷೆಗಳ ಕನ್ನಡದ ಮೇಲೆ ಪ್ರಭಾವ ಬಿರುತ್ತಿದ್ದರು ಕೇಲವೊಂದು ಶಬ್ದಗಳು ಕನ್ನಡದಲ್ಲಿ ಬೇರೆತುಕೊಂಡಿದ್ದರು ಕನ್ನಡ ಭಾಷೆ ತನ್ನ ಅಸ್ಥಿತ್ವ ಕಳೆದುಕೊಂಡಿಲ್ಲ ಹಾಗಾಗಿ ಕನ್ನಡ ಮಾತನಾಡಿ, ಬೆಳಸಿ, ಉಳಿಸಿ ಪ್ರೋತ್ಸಾಹಿಸಿ ಎಂದರು.

ಈ ವೇಳೆ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿದ ಕಲಬುರಗಿಯ ಸರ್ಕಾರಿ ಪಪೂ ಕಾಲೇಜಿನ ಉಪನ್ಯಾಸಕ ಡಾ. ಶಿವುಕುಮಾರ ಹುಣಚಾಳ ಮಾತನಾಡಿ, ಕನ್ನಡ ಭಾಷೆ ನಮಗೇಲ್ಲ ಅನ್ನ ಕೊಡುವ ಭಾಷೆ ನನ್ನ ಹೆತ್ತ ತಾಯಿಯಷ್ಠೇ ಶ್ರೇಷ್ಠ. ಕನ್ನಡದ ಬಗ್ಗೆ ಯಾರಿಗೂ ತಾತ್ಸಾರ ಬೇಡ ಕನ್ನಡ ಆಡಳಿತ ಭಾಷೆ ಮತ್ತು ಮನೆಯ ಭಾಷೆಯಾಗಬೇಕು. ಇಂತಹ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕನ್ನಡ ಸಂಘದ ಮೂಲಕ ಕಾರ್ಯಚಟುವಟಿಕೆ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

banner

ಈ ವೇಳೆ ಸಾರಂಗಮಠದ ಉತ್ತರಾಧಿಕಾರಿಗಳಾದ ಪೂಜ್ಯ ಶ್ರೀ ಡಾ. ವಿಶ್ವಪ್ರಭುದೇವ ಶಿವಾಚಾರ್ಯರು ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ, ಬೇರೆ ಭಾಷೆಯ ಮೋಹವಿರಲಿ ಆದರೆ ಮಾತೃ ಭಾಷೆಗೆ ನಿಮ್ಮದೆ ಆದ ಗೌರವವಿರಲಿ. ಭಾಷೆ ಬದಲಾದರು ಬಾವ ಬದಲಾಗದು. ಕನ್ನಡ ಶ್ರೀಮಂತಿಕೆ ಬೆಳೆಯಬೇಕಾದರೆ ಅದು ಹೆಚ್ಚು ಉಪಯೋಗಿಸಿದಾಗ ಮಾತ್ರ ಸಾಧ್ಯವಿದೆ ಎಂದರು.

ಈ ವೇಳೆ ಸಮಾರಂಭದ ಕಾಲೇಜಿನ ಪ್ರಾಚಾರ್ಯೆ ಜೆ.ಸಿ.ನಂದಿಕೋಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆ ಮೇಲೆ ಕನ್ನಡ ಸಂಘದ ಅಧ್ಯಕ್ಷ ದಾನಯ್ಯ ಮಠಪತಿ ಹಾಗೂ ಕಾರ್ಯದರ್ಶಿ ಪುಂಡಲಿಕ ದೊಡಮನಿ ಇದ್ದರು.

ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಿ.ಎಂ.ಸರಶೆಟ್ಟಿ, ಡಾ. ಶಿವಲಿಂಗಪ್ಪ ಬಂಡಾರಿ, ಡಾ. ಶರಣಬಸವ ಜೋಗೂರ, ಎನ್.ಬಿ.ಪೂಜಾರಿ, ಪಿ.ವ್ಹಿ. ಮಹಲಿನಮಠ, ಸುಧಾಕರ ಚವ್ಹಾಣ, ಪ್ರಶಾಂತ ಕುಲಕರ್ಣಿ, ಆರ್.ಎ.ಹಾಲಕೇರಿ, ಭಾಗ್ಯಜ್ಯೋತಿ ದಸ್ಮಾ, ನಾಜೀಯಾ ಮುಲ್ಲಾ, ಚನ್ನ ಕತ್ತಿ, ಅರುಣಾ ಹಿರೇಮಠ, ಶ್ವೇತಾ ರೆಬಿನಾಳ ಸೇರಿದಂತೆ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news