Home ವಿಶೇಷ 25 ಪುಸ್ತಕಗಳ ಲೋಕಾರ್ಪಣೆ, ಬೆರಗು ಪ್ರಶಸ್ತಿ ಪ್ರದಾನ ಕಾರ್ಯಕ್ರಮ 26ರಂದು

25 ಪುಸ್ತಕಗಳ ಲೋಕಾರ್ಪಣೆ, ಬೆರಗು ಪ್ರಶಸ್ತಿ ಪ್ರದಾನ ಕಾರ್ಯಕ್ರಮ 26ರಂದು

by vegadhut@gmail.com.
0 comments

ಸಿಂದಗಿ : ಕಡಣಿ ಗ್ರಾಮದ ಬೆರಗು ಪ್ರಕಾಶನ ಸಂಸ್ಥೆ ವತಿಯಿಂದ ಫೆ.26ರಂದು ಬೆಳಿಗ್ಗೆ 10.00 ಗಂಟೆಗೆ ತಾಲ್ಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ.ಪಿಯು ಕಾಲೇಜಿನಲ್ಲಿ ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ಸ್ಮರಣೆಗಾಗಿ 25 ಪುಸ್ತಕಗಳ ಬಿಡುಗಡೆಯಾಗಲಿವೆ. ಇದೇ ಸಂದರ್ಭದಲ್ಲಿ ಬೆರಗು ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವೂ ನಡೆಯಲಿದೆ.

ಕಾರ್ಯಕ್ರಮವನ್ನು ಶಾಸಕ ಅಶೋಕ ಮನಗೂಳಿ ಉದ್ಘಾಟಿಸಲಿದ್ದಾರೆ. ವಿಜಯಪುರದ ಮಹಿಳಾ ವಿಶ್ವವಿದ್ಯಾಲಯ ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟರ ಪ್ರಶಸ್ತಿ ಪ್ರದಾನ ಮಾಡುವರು.
ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರಿನ ಆಧ್ಯಕ್ಷರಾದ ಡಾ. ಮಾನಸ ೨೫ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಹಾಗೂ ಪ್ರಶಸ್ತಿ ಪುರಸ್ಕೃತ ಕೃತಿಗಳನ್ನು ಧಾರವಾಡದ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಬಿಡುಗಡೆ ಮಾಡಲಿದ್ದಾರೆ. ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ.ಪೋತ ಅಧ್ಯಕ್ಷತೆ ವಹಿಸುವರು. ವಿಜಯಪುರದ ಸಾಹಿತಿ ಶಂಕರ ಬೈಚಬಾಳ ಅವರು ಪುಸ್ತಕಗಳ ವಿಸ್ತಾರ ಕಾರ್ಯ ನಡೆಸಿಕೊಡುವರು. ಬೆರಗು ಪ್ರಕಾಶನ ಸಂಸ್ಥೆಯ ಅಧ್ಯಕ್ಷೆ ವಿಜಯಲಕ್ಷ್ಮಿ ಕತ್ತಿ, ಪ್ರಾಚಾರ್ಯ ಎ.ಆ‌ರ್.ಹೆಗ್ಗನದೊಡ್ಡಿ ಉಪಸ್ಥಿತರಿರುವರು.

ಪ್ರಶಸ್ತಿ ಪುರಸ್ಕೃತರು : ಎಂ.ಸಿ.ಮನಗೂಳಿ ಸ್ಮರಣಾರ್ಥ ದತ್ತಿ 2025ರ ಸಾಲಿನ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ (25ಸಾವಿರ ನಗದು
ಮತ್ತು ಪ್ರಶಸ್ತಿ ಫಲಕ), ಬೆಂಗಳೂರಿನ ಅಂಕಿತ ಪುಸ್ತಕ ಪ್ರಕಾಶನಕ್ಕೆ , ಬೆರಗು ಸಮಗ್ರ ಸಾಹಿತ್ಯ ಪ್ರಶಸ್ತಿಯನ್ನು ಕಲಬುರಗಿಯ ಡಾ.ಶ್ರೀಶೈಲ ನಾಗರಾಳ ಅವರಿಗೆ ಹತ್ತು ಸಾವಿರ ರೂ ಮತ್ತು ಫಲಕ, ಪ್ರೊ.ಎಚ್.ಟಿ.ಪೋತೆ ಹಸ್ತಪ್ರತಿ ಪುರಸ್ಕಾರ ಪ್ರಶಸ್ತಿಯನ್ನು ಸಿಂದಗಿಯ ದೇವೂ ಮಾಕೊಂಡ ಅವರ ಯುದ್ಧ ಮೃದಂಗ ಅನುವಾದಿತ ಕೃತಿಗೆ ೧೦ ಸಾವಿರ ರೂ. ಮತ್ತು ಪುಸ್ತಕ ಪ್ರಕಟಣೆ, ಸೃಜನಶೀಲ ಸಾಹಿತ್ಯ ವಿಭಾಗದಲ್ಲಿ ಡಾ.ಸುಜಾತ ಚಲವಾದಿ ಅವರಿಗೆ,
ದಿ.ಯಮುನಾಬಾಯಿ ರಾಜಣ್ಣ ಭೋವಿ ಸ್ಮರಣಾರ್ಥ ದತ್ತಿ 202೪ರ ಸಾಲಿನ ರಾಜ್ಯಮಟ್ಟದ ಬೆರಗು ಪುಸ್ತಕ ಪ್ರಶಸ್ತಿಯನ್ನು ತುಮಕೂರಿನ ಅನಂತ ಕುಣಿಗಲ್ ಅವರ ಅಪ್ಪನ ಆಟೋಗ್ರಾಫ್ ಕೃತಿಗೆ ಹಾಗೂ ಶಂಕರ ಬೈಚಬಾಳ ರಾಜಮಟ್ಟದ ಸೃಜನೇತರ ಸಾಹಿತ್ಯ ಪ್ರಶಸ್ತಿಯನ್ನು ಬೆಂಗಳೂರಿನ ಡಾ.ಪದ್ಮಿನಿ ನಾಗರಾಜು, ಬಾಗಲಕೋಟೆಯ ಮಹಾದೇವ ಬಸರಕೋಡ ಅವರಿಗೆ ರೂ.೫ಸಾವಿರ ಫಲಕದೊಂದಿಗೆ ಪ್ರದಾನ ಮಾಡಲಾಗುವುದು ಎಂದು ಬೆರಗು ಪ್ರಕಾಶನದ ಸಂಚಾಲಕ ಡಾ. ರಮೇಶ ಎಸ್, ಕತ್ತಿ ತಿಳಿಸಿದ್ದಾರೆ.

banner

ಲೋಕಾರ್ಪಣೆಗೊಳ್ಳಲಿರುವ ೨೫ ಪುಸ್ತಕಗಳು

  • ಲೋಕಾರ್ಪಣೆಯಾಗಲಿರುವ ಪುಸ್ತಕಗಳು:
    ೧.ಕಲ್ಲೆದೆಯನ್ನೊಮ್ಮೆ ಕರಗಿಸು, ಲೇ: ಇಸ್ಮಾಯಿಲ್ ಮೋರಟಗಿ
    ೨.ರಂಗ ಸಂಕಥನ ಲೇ: ಅನುಸೂಯ ಯತೀಶ್ ,
    ೩.ಅಶ್ವಿನಿ ನಕ್ಷತ್ರ, ಲೇ : ದಾನಮ್ಮ ನಂದಿಕೋಲ,
    ೪ .ಹನಿ ಹೈಕು, ಲೇ: ಡಾ.ಗುರುಲಿಂಗಪ್ಪ ಧಬಾಲೆ, ೫. ಕವಲೊಡೆದ ಕಣ್ಮಣಿ, ಲೇ: ರವಿ ಸಿ. ಕುರವಳ್ಳಿ , ೬ .ಮುಸುಕಿದಿ ಮಬ್ಬಿನಲಿ, ಲೇ: ಪದ್ಮಜಾ ಜೋಯಿಸ್, ೭. ಯುದ್ಧ ಮೃದಂಗ, ಲೇ: ದೇವು ಮಾಕೊಂಡ, ೮. ಒಂದು ಆನೆಯ ಸ್ವಗತ ಲೇ: ಡಾ. ಮಹನಂದಾ ಪಾಟೀಲ, ೯. ಬದುಕಿನ ಕಿಟಕಿಯಿಂದ, ಲೇ: ಬಸವರಾಜ ಚಿತ್ತಾಪುರ, ೧೦.ನೋವಿನೆಳೆಯ ನೂಲು, ಲೇ: ಡಾ. ಗುಂಡಣ್ಣ ಕಲಬುರಗಿ, ೧೧ ಹಳ್ಳಿ ಹುಡುಗನ ಕಾಲುದಾರಿ, ಲೇ: ಡಾ. ಗುಂಡಣ್ಣ ಕಲಬುರಗಿ,೧೨. ಹೊಳೆದದ್ದೆ ತಾರೆ, ಲೇ: ಹರೀಶ್ ಟಿ.ಜಿ, ೧೩: ಚೇತನ ಭಾರತಿ, ಲೇ: ಭಾರತಿ ವಸ್ತ್ರದ, ೧೪. ಮಿದು ಮಾತು, ಲೇ: ರಶ್ಮಿ .ಎಸ್,
    ೧೫.ಜ್ಞಾನ ಭಿಕ್ಷು ರಾವ್ ಬಹದ್ದೂರ್ ವಾರದ ಮಲ್ಲಪ್ಪ, ಲೇ: ರಾಜಕುಮಾರ ಬಡಿಗೇರ, ೧೬. ಮಧು ಬಟ್ಟಲ ಮೋಹ ಲೇ : ಅನುಸೂಯ ಯತೀಶ್ ,೧೭. ಮಂಥನ , ಲೇ: ಕಾಳಿಂಗ ಆರ್. ತಳವಾರ, ೧೮. ಸತ್ಪಥವ ಅರಸಿ- ಲೇ:ಮಿಟ್ಟೇಸಾ ಮುಲ್ಲಾ, ೧೯ ಬಿತ್ತಿದಂತೆ ಬೆಳೆ, ಲೇ: ಡಾ.ಸಂಜೀವಕುಮಾರ ಪೋತೆ, ೨೦. ಜೇನಹನಿ, ಲೇ:ಎನ್.ಟಿ.ಯರ್ರಿಸ್ವಾಮಿ, ೨೧ ಕಾಯಕಾರ್ಥ ಕ್ರಾಂತಿ, ಲೇ: ಬಸವರಾಜ ಸಾದರ, ೨೨ ಕಾಲಾಗಿನ ಕಲ್ಲ ಅದರಾವೊ, ಲೇ: ಅಜೀತ ಪಾತ್ರೋಟ,೨೩ ಅಜ್ಮೀರಕ್ಕೆ ಆತ್ಮಯಾನ, ಡಾ.ಮಿರಾಜ‌ಪಾಶಾ ಹಸನಲ್ಲಿ, ೨೪ ಸಂತೆ ಗಾಂಧಾರಿ ಲೇ: ರವಿ ಶಿವರಾಯಗೋಳ, 25 ಇಕೋ ಪ್ರಾಂ ಮೈ ಜಾರ್ ಲೇ: ಅರ್ನಿ

ಇದೇ ಸಂದರ್ಭದಲ್ಲಿ ಬೆರಗು ಪ್ರಕಾಶನ ಪ್ರಕಟಿಸಿದ ಪುಸ್ತಕಗಳ ಪ್ರದರ್ಶನ ಮತ್ತು ರಿಯಾಯಿತಿ ದರದಲ್ಲಿ ಮಾರಾಟದ ವ್ಯವಸ್ಥೆ ಇರುತ್ತದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news