Home State ಸಿ.ಸಿ ಕ್ಯಾಮರಾ ಒಬ್ಬ ಸೆಕ್ಯೂರಿಟ್ ಗಾರ್ಡ್ ಇದ್ದಂತೆ ; ಆರೀಪ್ ಮುಶಾಪುರಿ ಪಿ.ಎಸ್.ಐ ಸಿಂದಗಿ

ಸಿ.ಸಿ ಕ್ಯಾಮರಾ ಒಬ್ಬ ಸೆಕ್ಯೂರಿಟ್ ಗಾರ್ಡ್ ಇದ್ದಂತೆ ; ಆರೀಪ್ ಮುಶಾಪುರಿ ಪಿ.ಎಸ್.ಐ ಸಿಂದಗಿ

ಸೈಬರ್ ಕ್ರೈಂ ಬಗ್ಗೆ ಎಚ್ಚರವಹಿಸಿ | ಜನ ಸಾಮಾನ್ಯರಿಗೆ ಜಾಗೃತ್ತಿ ನೀಡಿದ ಪೊಲೀಸ ಇಲಾಖೆ

by vegadhut@gmail.com.
0 comments

ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಮನೆಗಳು ಕಟ್ಟಿರುತ್ತೀರಿ ಮನೆಯ ಮುಂದೆ ರಸ್ತೆ ಹಾಗೂ ನಿಮ್ಮ ಮನೆಗಳು ಕಾಣುವಂತೆ ಸಿ.ಸಿ ಕ್ಯಾಮರಾ ಅಳವಡಿಸಿಕೋಳ್ಳಿ ಎಂದು ಸಿಂದಗಿ ಪಿ.ಎಸ್.ಐ  ಆರೀಪ ಮುಶಾಪುರಿ ಹೇಳಿದರು. 

ಸಿಂದಗಿ :  ಪಟ್ಟಣದ ಸಾಲು ಮರದ ತಿಮ್ಮಕ್ಕ ಟ್ರೀ ಪಾರ್ಕನಲ್ಲಿ ವಾಯು ವಿಹಾರಕ್ಕೆ  ಬರುವ ಜನರಿಗೆ ಕಾನೂನು ಜಾಗೃತ್ತಿ ಮೂಡಿಸಿ ಮಾತನಾಡಿದ ಅವರು ಮುಖ್ಯವಾಗಿ ಇಂಟಿರಿಯಲ್ ಮನೆಗಳು, ಒಂಟಿ ಮನೆಗಳು ಅಂತಹವರು ಗುಣ್ಣಮಟ್ಟದ ಸಿಸಿ ಕ್ಯಾಮರಾ ಅಳವಡಿಸಿಕೊಂಡರೆ  ಅಪರಾಧ ಗಳನ್ನು ತಡೆಗಟ್ಟುವಲ್ಲಿ ಸಹಾಯಕಾರಿ ಯಾಗುತ್ತದೆ ಮತ್ತು ಅಪರಾಧಗಳು ಆದರೆ ಅದನ್ನು ಪತ್ತೇ ಹಚ್ಚಲು ಪೋಲಿಸರಿಗೆ ಸಹಾಯಕಾರಿಯಾಗುತ್ತದೆ. 

ನಮ್ಮ ಇಲಾಖೆಯಲ್ಲಿ  ಅಪರಾಧ ವಾಗುವ ಮುಂಚಿತವಾಗಿ  ನಾವು ಅಪರಾಧವಾಗದ ಹಾಗೆ ಎಚ್ಚರಿಕೆ ವಹಿಸುವುದು  ಸೂಕ್ತ.  ಶಕ್ತಿ ಉಳ್ಳವರು  ಗುಣ್ಣಮಟ್ಟದ ಕನಿಷ್ಠ ಮೂರು ತಿಂಗಳು ಬ್ಯಾಕಪ್ ಸಾಮಾರ್ಥ್ಯ ಹೊಂದಿದ ಸಿಸಿ ಕ್ಯಾಮರಾ ಅಳವಡಿಸಿ ಎಂದರು. 

ಮುಖ್ಯ ರಸ್ತೆಯಲ್ಲಿರುವ  ಅಂಗಡಿಗಳಿಗೆ  ಸಿಸಿ ಕ್ಯಾಮರಾ ಕಡ್ಡಾಯ

banner

ನಗರದ ಪ್ರಮುಖ ರಸ್ತೆಯಲ್ಲಿರುವ ಪೇಟ್ರೋಲ್ ಬಂಕ್, ಹೋಟೆಲ್, ಲಾಡ್ಜ, ವೈನ್ ಶಾಪ್  ಮತ್ತು ದೊಡ್ಡ ಅಂಗಡಿಗಳ ಮುಂದೆ ಸಿಸಿ ಕ್ಯಾಮರಾ ಅಳವಡಿಸಲು ಕಾನೂನು ಇದೆ ಇಗಾಗಲೇ  ಸಿಂದಗಿ ನಗರದಲ್ಲಿ ಆರುನೂರು ಕ್ಯಾಮರಾ ಅಳವಡಿಸಲಾಗಿದೆ. ನಮ್ಮ ಆಪ್ ನಲ್ಲಿ ಜೀಯೋ ಮ್ಯಾಪಿಂಗ್ ಮಾಡಲಾಗಿದೆ ಮತ್ತು ಸಿಸಿ ಕ್ಯಾಮರಾ ಅಳಿವಡಿಸದೆ ಇರುವ  ಅಂಗಡಿಗಳಿಗೆ ನೋಟಿಸ್ ನೀಡಲಾಗುತ್ತಿದೆ ಎಂದರು. 

ಸೈಬರ್ ಕ್ರೈಂ ಬಗ್ಗೆ ಎಚ್ಚರವಿರಲ್ಲಿ!

ವಾಟ್ಸಪ್, ಪೇಸ್ ಬುಕ್, ಇನಸ್ತಾಗ್ರಾಮ್  ಗಳಲ್ಲಿ ಹುದ್ದೆ ನೀಡಲಾಗುವುದೆಂದು ಅಥವಾ ಹಣ ಇಟ್ಟರೆ  ಡಬಲ್ ಹಣ ನೀಡುವುದಾಗಿಯು ಆಮಿಷ ನೀಡಲಾಗುತ್ತದೆ. ಹತ್ತು ಸಾವಿರ ಹಾಕಿದರೆ ಇಪ್ಪುತ್ತು ಸಾವಿರ ಹಾಕುತ್ತಾರೆ ನಿಮ್ಮ ಹಣ ದೊಡ್ಡದಾಗಿ ಹಣ ಹಾಕಿದಾಗ ನೀವು ಮೋಸ ಹೋಗುತ್ತಿರಿ ಆವಾಗ ಅವರ ಪೋನ್ಗಳು ಬಂದ್ ಮಾಡಿ ಬೀಡುತ್ತಾರೆ.  ಜೀಲ್ಲೆಯ ಹಲವು ಕಡೆಗಳಲ್ಲಿ ಕೊಟ್ಯಾಂತರ ರೂಪಾಯಿ ಮೋಸ ಹೋಗಿರುವುದು ಇದೆ ಕಾರಣ ಅಂತಹ ಸಂದೇಶದ ಬಗ್ಗೆ ಎಚ್ಚರಿಕೆ ಇರಲಿ. 

ಸೈಬರ್ ಕ್ರೈಂ ಕೇವಲ ದುಡ್ಡಿಗೆ ಸಂಬಂದಿಸಿರುವುದಲ್ಲ? 

ಸಾಮಾಜಿಕ ಜಾಲತಾಣಗಳಲ್ಲಿಒಂದು ಧರ್ಮ, ಜಾತಿಗೆ ಅಪಮಾನ ಮಾಡುವ ಸಂದೇಶಗಳು ಪೋಸ್ಟ ಹಾಕುವುದು ಹಾಗೂ ಅದನ್ನು ಶೇರ್ ಮಾಡುವುದು ಅಪರಾಧ ವಾಗಿದೆ. ಎಲ್ಲೋ ಕುಳಿತು ಮಾಡಿರುವ ಸಂದೇಶಗಳನ್ನ ಹಂಚಿಕೋಳ್ಳುವ ಮೋದಲು ಯೋಚಿಸಿ ಹಲವು ಜನರು ಜೈಲಿಗೆ ಆಹುತಿ ಯಾಗಿದ್ದಾರೆ. 

ವಯಸ್ಕರರನ್ನು   ಒಂಟಿಯಾಗಿ ಬ್ಯಾಂಕ್ ಗಳಿಗೆ ಕಳುಹಿಸಬೇಡಿ .

ಕಳ್ಳರ ಪ್ರಮುಖ ಟಾರ್ಗೆಟ್ ಬ್ಯಾಂಕಿಗೆ ಬರುವ ವಯಸ್ಕರರು, ಒಂಟಿಯಾಗು ಬರುವ ವಯಸ್ಕರರು ಗಮನ ಬೆರೇಡೆ ಸೆಳೆದು  ಹಣ ದೋಚಿ ಅವರು ಕೈ ಚಳಕ ತೋರಿಸುತ್ತಾರೆ. ಆದ್ದರಿಂದ ನಿಮ್ಮ ಮನೆಗಳಲ್ಲಿರುವ ಹಿರಿಯರು ಬ್ಯಾಂಕಿನಿಂದ ಹಣ ತರಲು ಹೋದರೆ ಜೊತೆಗೆ ಒಬ್ಬರು ಹೋಗಿ. 

ಮನೆಯಲ್ಲಿ ಜಾಸ್ತಿ ಹಣ ಹಾಗೂ ಚಿನ್ನಗಳು ಇಡುವುದಕ್ಕಿಂತ ಬ್ಯಾಂಕ್ ಲಾಕರ್ ನಲ್ಲಿ ಇಡಿ. ಇಗ ರಜೆ ಸಮಯವಿದೆ  ಊರಿಗೆ ಹೋಗುವುದು ಸಾಮಾನ್ಯ ಪಕ್ಕದ ಮನೆ ಅವರಿಗೆ ತಿಳಿಸಿ ಹಾಗೂ ಪೊಲೀಸ ಠಾಣೆಯ ಗಮನಕ್ಕೆ ತಂದು ಊರಿಗೆ ಹೋಗಿ. 

ಯಾವುದೇ ವಾಹನ ಖರೀದಿಗೂ ಮುನ್ನ ಚಾಲನಾ ಪರವಾನಗಿ ಪಡೆದುಕೋಳ್ಳಿ. 

ದಯವಿಟ್ಟು ಚಾಲಕರು ಹೇಲ್ಮೇಟ್ ಹಾಗೂ ಸೀಟ್ ಬೇಲ್ಟ್  ಉಪಯೋಗಿಸಿ ಪ್ರತಿ ವರ್ಷ ಒಂದುವರೆ ಲಕ್ಷಕ್ಕು ಅಧಿಕ ಜನರು ಆಕ್ಸಿಡೆಂಟ್ ನಲ್ಲಿ ಮರಣ ಹೊಂದುತ್ತಿದ್ದಾರೆ. ಅದರಲ್ಲಿ ಅರವತ್ತು ಪ್ರತಿಶತ ದ್ವೀಚಕ್ರ ವಾಹನಗಳು ಆಕ್ಸಿಡೆಂಟ್ ನಿಂದ ಮರನ ಹೊಂದಲಾಗುತ್ತಿದೆ. ಕಾರಣ ಮಕ್ಕಳಿಗೆ ವಾಹನ ಕೊಡಿಸುವ ಮೋದಲು ಚಾಲನಾ ಪರವಾನಗಿ ವದಗಿಸಿ.  ಹಾಗೂ ನಿಮ್ಮ ಹತ್ತಿರದ ವಾಹನಗಳ ದಾಖಲಾತಿಗಳು ಸರಿ ಇಟ್ಟುಕೋಳ್ಳಿ ಎಂದು ಹೇಳಿದರು.

ಜಾಗೃತ್ತಿ ಸಭೆಯಲ್ಲಿ ಪುರಸಭೆ ಸದಸ್ಯೆ ಪ್ತತಿಭಾ ಕಲ್ಲೂರ, 12ನೇ ವಾರ್ಡಿನ ಸದಸ್ಯರ ಪ್ರತಿನಿಧಿ ಸತೀಶಗೌಡ ಬಿರಾದಾರ, ಸೇರಿದಂತೆ ವಾಯುವಿಹಾರಕ್ಕೆ ಆಗಮಿಸಿದ ಜನಸಾಮಾನ್ಯರು ಉಪಸ್ಥಿತರಿದ್ದರು. 

 

video link:

https://youtu.be/Me81CLdqPRs?si=tGkOEiRnZ0l2tCNq

https://www.facebook.com/share/v/16FjhAenfN/

 

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news