ಒಳ ಮೀಸಲಾತಿ ಕುರಿತು ಪರಿಶಿಷ್ಠ ಜಾತಿಗಳ ಜಾತಿ ಜನಗಣತಿ ಇಂದಿನಿಂದ ಮೇ 17 ರ ವರೆಗೆ ಪ್ರಾರಂಭವಾಗುವುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು : ವಿಧಾನಸೌದ ದಲ್ಲಿ ಕರೆದ ಪತ್ರಿಕಾಗೋಷ್ಠಿ ಕುರಿತು ಮಾತನಾಡಿದ ಅವರು ಆರ್ಟಿಕಲ್ 341 ರ ಪ್ರಕಾರ ಪರಿಶಿಷ್ಠ ಜಾತಿಗಳಲ್ಲಿ 101 ಜಾತಿಗಳನ್ನು ಗುರುತಿಸಿದ್ದಾರೆ. ಅದರಲ್ಲಿ ಎಡ-ಬಲ, ಭೋವಿ, ಲಮಾಣಿ, ಕೊರಮ, ಕೋರಚ ಸೇರಿದಂತೆ 101 ಜಾತಿಗಳು ಬರುತ್ತವೆ.
ಇದರಲ್ಲಿ ಎಂಪೇರಿಕಲ್ ಡಾಟಾ ಇರಲಿಲ್ಲ. ಸದಾಶಿವ ಆಯೋಗ ವರದಿ ನೀಡಿದಗ 2011 ಜಾತಿಗಣತಿ ಆದಾರದ ಮೇಲೆ ಜನಸಂಖ್ಯೆ ಗುರುತಿಸಲಾಗಿತ್ತು. 01 ಅಗಷ್ಠ 2024 ರಂದು ಸರ್ವೋಚ್ಛ ನ್ಯಾಯಲಾಯ ತೀರ್ಪುನೀಡಿ ಸಂವಿಧಾನದಲ್ಲಿ ಒಳಮೀಸಲಾತಿ ಮಾಡಲು ಅವಕಾಶವಿದೆ ಎಂದು ರಾಜ್ಯ ಸರಕಾರಗಳಿಗೆ ಅಧಿಕಾರ ನೀಡಲಾಗುತ್ತದೆ. ತದನಂತರ ನ್ಯಾಯಮೂರ್ತಿ ನಾಗಮೋಹನದಾಸ್ ನೇತೃತ್ವದಲ್ಲಿ ಆಯೋಗ ರಚನೆ ಮಾಡಲಾಗುತ್ತದೆ.
ಆಯೋಗದ ಅಧ್ಯಕ್ಷರಾದ ನಾಗಮೋಹನದಾಸ್ ಅವರು ಮಧ್ಯಂತರ ವರದಿ ನೀಡಿ ಎಂಪೇರಿಕಲ್ ಡಾಟಾ ಇರಲೇ ಬೇಕು ಎಂದು ತಿಳಿಸುತ್ತಾರೆ. ಪರಿಶಿಷ್ಠ ಜಾತಿಗೆ ಸೇರಿರುವ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂದ್ರ ಹಾಗೂ ಎಸ್.ಸಿ ಅಂತಾಃ ಬರೆದು ಕೊಂಡಿರುವುದರಿಂದ ಕೇಲವು ಕಡೆಗಳಲ್ಲಿ ಬಲ ಸಮುದಾಯ, ಕೆಲವು ಕಡೆಗಳಲ್ಲಿ ಎಡ ಸಮುದಾಯ ಬರೆದು ಕೊಂಡಿರುವುದರಿಂದ ನಿಖರವಾಗಿ 2011ರ ಜಾತಿಜನಗಣತಿ ಪ್ರಖಾರ ಗೋತ್ತಾಗುವುದಿಲ್ಲ ಒಳ ಮೀಸಲಾತಿ ನೀಡುವ ಮುನ್ನ ನೀರ್ದಿಷ್ಠವಾದ ಅಂಕಿ ಅಂಶಗಳು ಬೇಕಾಗುತ್ತದೆ. ಅಧ್ಯಕ್ಷರಾದ ನಾಗಮೋಹನದಾಸ್ ಅವರ ಆಯೋಗದಿಂದ ನೂತನ ಜಾತಿ ಗಣತಿಯ ಸಕಲ ಪೂರ್ವ ಸಿದ್ದತೆ ಮಾಡಿಕೋಳ್ಳಲಾಗಿದೆ.
58,932 ಶೀಕ್ಷಕರನ್ನು ಸಮೀಕ್ಷಾದಾರರಾಗಿ ನೇಮಿಸಿ ಆಯಾ ಜಿಲ್ಲಾಧಿಕಾರಿಗಳು ನೇಮಕ ಮಾಡಿದ್ದಾರೆ 10 ರಿಂದ 12 ಶೀಕ್ಷಕರಿಗೆ ಒಬ್ಬರು ಮೇಲ್ವಿಚಾರಕರು ಇರುತ್ತಾರೆ.
- ಮೋದಲನೇ ಹಂತದಲ್ಲಿ ಇಂದಿನಿಂದ 17 ಮೇ 2025 ರವರೆಗೆ ಮನೆ-ಮನೆ ಸಮೀಕ್ಷೆ ನಡೆಸಲಾಗುತ್ತದೆ.
- 19 ಮೇ 2025 ರಿಂದ 21 ಮೇ 2025 ರವರೆಗೆ ವಿಶೇಷ ಶಿಬರಗಳು ಮಾಡಲಾಗುವುದು ಅದರಲ್ಲಿಯು ಸಮೀಕ್ಷೆ ನಡೆಸಲಾಗುವುದು.
- 19 ಮೇ 2025 ರಂದ 23 ಮೇ 2025 ರ ವರೆಗೆ ಆನ್ ಲೈನ್ ಮುಖಾಂತರವು ಸ್ವಯಂ ಘೋಷಣೆ ಮಾಡಿಕೋಳಬಹುದಾಗಿದೆ.
ಸಮೀಕ್ಷೆ ನಿರ್ವಹಿಸಲು ಮೋಬೈಲ್ ಆಪ್ ನಲ್ಲಿ ಬೆಳ್ಳಿಗೆ 6:30 ರಿಂದ ಸಾಯಂಕಾಲ 6:30 ರವರೆಗೆ ಅವಕಾಶ ಮಾಡಿಕೋಡಲಾಗಿದೆ. ಹಾಗೂ ಹೇಲ್ಪ್ ಲೈನ್ ಮಾಡಲಾಗಿದೆ ಸಂಖ್ಯೆ : 9481359000 24/7 ಮಾಹಿತಿ ಸಿಗುತ್ತದೆ.
ಈ ಮೂರು ಹಂತಗಳಿಂದ ನಿಖರವಾದ ಮಾಹಿತಿಯನ್ನು ಬಂದನಂತರ 60 ದಿನಗಳಲ್ಲಿ ವರದಿ ಸಲ್ಲಿಸುವಂತೆ ತಿಳಿಸಲಾಗಿದೆ. ಆದ್ದರಿಂದ ಇದರಿಂದ ಎಲ್ಲರು ಮಹಿತಿ ನೀಡಿ ಗೋಂದಲವನ್ನು ನಿವಾರಣೆ ಗೋಳಿಸಲು ಸಹಕರಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.
ಪತ್ರಿಕಾ ಗೋಷ್ಠಿಯಲ್ಲಿ ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ, ಸಮಾಜ ಕಲ್ಯಾಣ ಸಚಿವ ಹೆಚ್.ಸಿ ಮಹಾದೇವಪ್ಪ, ಸಚಿವ ಕೆ.ಹೆಚ್. ಮುನಿಯಪ್ಪ, ಶಿವರಾಜ ತಂಗಡಗಿ ಉಪಸ್ಥಿತರಿದ್ದರು.
