ಸಿಂದಗಿ : ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲಿ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅವರ ಹೆಸರು ಇಲ್ಲದಿರುವುದನ್ನು ವಿರೋಧಿಸಿ ಬಿಜೆಪಿ ಮುಖಂಡರು ಸಮ್ಮೇಳನ ಬಹಿಷ್ಕಾರದ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಸ್ಪಷ್ಟನೆ ನೀಡಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಹಾಸೀಂ ಪೀರ ವಾಲೀಕಾರ ಮಾತನಾಡಿ, “ಆಹ್ವಾನ ಪತ್ರಿಕೆಯಲ್ಲಿ ಸಂಸದರ ಹೆಸರು ಕೈಬಿಟ್ಟಿರುವುದು ಕೆಲಸದ ಒತ್ತಡದಲ್ಲಿ ಆಗಿರುವ ಮಾನವೀಯ ತಪ್ಪು ಎಂಬುದನ್ನು ನಾವು ಒಪ್ಪುತ್ತೇವೆ. ಆದರೆ ಉದ್ದೇಶಪೂರ್ವಕವಾಗಿ ಹೆಸರು ಕೈಬಿಡಲಾಗಿದೆ ಎಂಬ ಆರೋಪ ಸಂಪೂರ್ಣ ಸುಳ್ಳು. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಯಾರೊಬ್ಬರ ವೈಯಕ್ತಿಕ ಆಸ್ತಿಯಲ್ಲ; ಇದು ಸಮಸ್ತ ಕನ್ನಡಿಗರ ಸಾಂಸ್ಕೃತಿಕ ಹಬ್ಬವಾಗಿದೆ. ಎಲ್ಲರೂ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು,” ಎಂದು ಮನವಿ ಮಾಡಿದರು.
ನಂತರ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಮುಖಂಡ ಸಂದೀಪ ಚೌರ, “ಈ ವಿಷಯದ ಕುರಿತು ವಿರೋಧ ವ್ಯಕ್ತಪಡಿಸಿದವರೊಂದಿಗೆ ಈಗಾಗಲೇ ಚರ್ಚೆ ನಡೆಸಲಾಗಿತ್ತು. ಆದರೂ ಪತ್ರಿಕಾಗೋಷ್ಠಿ ನಡೆಸಿ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡಿರುವುದು ರಾಜಕೀಯ ಷಡ್ಯಂತ್ರದ ಭಾಗವಾಗಿದೆ. ಸಾಹಿತ್ಯ ಸಮ್ಮೇಳನವನ್ನು ರಾಜಕೀಯ ವೇದಿಕೆಯನ್ನಾಗಿ ಮಾಡುವುದು ಸರಿಯಲ್ಲ,” ಎಂದು ವಿರೋಧ ವ್ಯಕ್ತಪಡಿಸಿದವರ ವಿರುದ್ಧ ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದರು.
ನಂತರ ಮಾತನಾಡಿದ ತಾಲೂಕಾ ಅಧ್ಯಕ್ಷ ವಾಯ್.ಸಿ.ಮಯೂರ ಅಚಾತುರ್ಯಕ್ಕೆ ನೇರ ಹೋಣೆಗಾರ ನಾನ್ನು ಇದಕ್ಕೆ ಜಿಲ್ಲಾ ಅಧ್ಯಕ್ಷರಾಗಲಿ ಶಾಸಕರಾಗಲ್ಲಿ ಕಾರಣರಲ್ಲ ತಪ್ಪಿಗೆ ಕ್ಷಮೇ ಕೇಳುವೆ, ತಪ್ಪನ್ನು ಸರಿ ಪಡಿಸುವ ಪ್ರಯತ್ನವು ಮಾಡಿರುವೆ ವೈಷ್ಯಮ್ಯ ಗಳಿಗೆ ಸಮೇಳನಕ್ಕೆ ದಕ್ಕೆ ಬರುವುದು ಬೇಡ ಒಗಟ್ಟಿನಿಂದ ಜಿಲ್ಲಾ ಕನ್ನಡ ಸಮ್ಮೇಳನ ಯಶಸ್ವಿಗೋಳಿಸೋಣಾ ಎಂದು ವಿನಂತಿಸಿದರು.
ಈ ಮೂಲಕ ಸಮ್ಮೇಳನದ ಸುತ್ತಲಿನ ವಿವಾದಕ್ಕೆ ತೆರೆ ಎಳೆದು, ಎಲ್ಲರೂ ಒಂದಾಗಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ಕಸಾಪ ಹಾಗೂ ಕರವೇ ಮುಖಂಡರು ಕರೆ ನೀಡಿದರು.
