ವಿಜಯಪುರ ಗುಲ್ಬರ್ಗಾ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಬರುವ ಯರಗಲ್ಲ್ ಗ್ರಾಮದ ಹತ್ತಿರ ಭೀಕರ ರಸ್ತೆ ಅಪಘಾತವಾಗಿದೆ.
ಸಿಂದಗಿ : ವಿಜಯಪುರ ಜಿಲ್ಲೆಯಿಂದ ಗುಲ್ಬರ್ಗಾ ಜಿಲ್ಲೆಗೆ ಹೋರಟಿರುವ ಸಿಮೆಂಟ್ ಟ್ರಕ್ ಟ್ಯಾಂಕರ್ ಸಿಂದಗಿ ತಾಲ್ಲೂಕಿನ ಯರಗಲ್ಲ್ ಗ್ರಾಮದ ಹತ್ತಿರ ಟ್ರಕ್ ಚಾಲಕನ ಅಚಾತುರ್ಯದಿಂದ ಟ್ರಕ್ ಪಕ್ಕದ ರಸ್ತೆಯಲ್ಲಿ ಹೋರಟಿರುವ ಕಾರಿನ ಮೇಲೆ ಬಿದ್ದಿರುವ ಘಟನೆ ನಡೆದಿದೆ.
ಕಾರಿನಲ್ಲಿ ಕೇವಲ ಚಾಲಕ ಸಿಕ್ಕಿ ಬಿದ್ದಿದ್ದು ಅವನನ್ನು ಹೋರ ತೆಗೆಯಲು ಪೊಲೀಸ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಚಾಲಕನಿಗೆ ಕಾಲಿಗೆ ಪೆಟ್ಟಾಗಿದ್ದು ಜೀವಕ್ಕೆ ಅಪಾಯ ವಿಲ್ಲವೆಂದು ತಿಳಿದುಬಂದಿದೆ. ಸೂಕ್ತ ಚಿಕಿತ್ಸೆ ಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ ಎನ್ನಲಾಗಿದೆ.
ರಾಜ್ಯ ಹೆದ್ದಾರಿಯಲ್ಲಿ ಸಂಪೂರ್ಣ ರಸ್ತೆ ವಾಹನ ದಟ್ಟಣೆಯಿಂದ ಟ್ರಾಫಿಕ್ ಜಾಮ್ ಆಗಿದೆ ಅದನ್ನು ನಿಯಂತ್ರಿಸಲು ಸಿ.ಪಿ.ಆಯ್ ನಾನಾಗೌಡ ಪೊಲೀಸ್ ಪಾಟೀಲ ಪಿ.ಎಸ್.ಐ ಆರೀಫ್ ಮುಶಾಪುರಿ ಹಾಗೂ ಸಿಬ್ಬಂದಿಯವರು ನಿರಂತರ ಮಳೆಯಲ್ಲಿ ಹರಸಾಹಸ ಪಡುತ್ತಿರುವುದು ಕಂಡು ಬಂದಿದೆ.
