ಸಿಂದಗಿ ಏ.16: ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ ಭವನದಲ್ಲಿ ಕಾರ್ಮಿಕ ದಿನಾಚರಣೆಯ ಅಂಗವಾಗಿ ಸಿಂದಗಿಯ ಗಣೇಶ ಕನ್ಸ್ಟ್ರಕ್ಷನ್ ವತಿಯಿಂದ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ ಮಾಡಲಾಯಿತು.
ಟೀ ಶರ್ಟ್ ಹಾಗೂ ಕ್ಯಾಪ್ ಗಳನ್ನು ವಿತರಿಸಿ ಮಾತನಾಡಿದ
ಗಣೇಶ ಕನ್ಸ್ಟ್ರಕ್ಷನ್ ಅಭಿಯಂತರ ನಿಂಗರಾಜ ಗುಡಿಮನಿ ಇಂದಿನ ಟೇಕ್ನಾಲಜಿ ಪ್ರಪಂಚದಲ್ಲಿ ಕಾರ್ಮಿಕರ ಬದಲು ಮಿಷನ್ ಗಳ ಬಳಕೆ ಯಾಗುತ್ತಿರುವುದು ಕಾರ್ಮಿಕರ ಕುಟುಂಬದ ಮೇಲೆ ಬರೆ ಎಳೆದಂತಾಗಿದೆ. ಯಾವುದೇ ಕಾರ್ಮಿಕರು ಇಂದಿನ ದುಡಿಮೆಯಲ್ಲಿ ತೃಪ್ತಿ ಹೊಂದಿದ್ದರು, ಕುಟುಂಬದೊಂದಿಗೆ ಜೀವನ ನಡೆಸುವುದು ಕಷ್ಟಕರ ವಾಗಿದೆ. ಆದ್ದರಿಂದ ಸರ್ಕಾರ ಕಾರ್ಮಿಕರಿಗೆ ನೀಡುವ ಸವಲತ್ತಿನಲ್ಲಿ ವಿಳಂಬ ನೀತಿ ಅನುಸರಿಸ ಬಾರದು. ಹಾಗೂ ಕಾರ್ಮಿಕರಿಗೆ ಗುಣಮಟ್ಟದ ಜೀವ ವಿಮೆ ಹಾಗೂ ಕುಟುಂಬದ ಆರೋಗ್ಯ ವಿಮೆ ಮಾಡಿಸುವಲ್ಲಿ ಕ್ರಮ ವಹಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷರಾದ ಶಾಂತವೀರ ಬಿರಾದಾರ, ಮಲ್ಲಿಕಾರ್ಜುನ ಕೂಚಬಾಳ, ರವಿ ಹೋಳಿ, ರಾಕೇಶ ಕಾಂಬಳೆ ಉಪಸ್ಥಿತರಿದ್ದರು.
