Home Life StyleAdvice ” ಸ್ತನ್ಯಪಾನ ಸಪ್ತಾಹ ” ಕುರಿತು ಭಾಣತಿಯರಿಗೆ ಹಾಗೂ ಗರ್ಭಿಣಿಯರಿಗೆ ಅರಿವು ಕಾರ್ಯಕ್ರಮ.

” ಸ್ತನ್ಯಪಾನ ಸಪ್ತಾಹ ” ಕುರಿತು ಭಾಣತಿಯರಿಗೆ ಹಾಗೂ ಗರ್ಭಿಣಿಯರಿಗೆ ಅರಿವು ಕಾರ್ಯಕ್ರಮ.

ಮಗುವಿಗೆ ಹಾಲು ಕೂಡಿಸುವಾಗ ಮೋಬೈಲ ಬಳಸದಿರಿ ಸ್ತ್ರೀ ರೋಗ ತಜ್ಞ ಸೀಮಾ ವಾರದ

by vegadhut@gmail.com.
0 comments

ಜಾಹಿರಾತು

ಮಗು ಜನಿಸಿದ  ಮೊದಲ ಗಂಟೆಯಲ್ಲಿ ಮಗುವಿಗೆ ಹಾಲೂ ನೀಡಿ.  ಗಿಣ್ಣದ ಹಾಲೆಂದು ಎಸೆಯದಿರಿ. ಅದು ಮಗುವಿಗೆ ಪೌಷ್ಟಿಕಾಂಶ ನೀಡುತ್ತದೆ. ಎಂದು  ಸ್ತ್ರೀ ರೋಗ ತಜ್ಞೆ ಶೃತಿ ಸಜ್ಜನ ಹೇಳಿದರು.

ಸಿಂದಗಿ : ಪಟ್ಟಣದ ಮೋಗಲಾಯಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಭಾರತೀಯ ಮಕ್ಕಳ ತಜ್ಞರ ಸಂಘದ ಕರ್ನಾಟಕ ಶಾಖೆ ಬೆಂಗಳೂರು ಹಾಗೂ ಮೊಗಲಾಯಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದಲ್ಲಿ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹ  ಕಾರ್ಯಕ್ರಮ ಕುರಿತು ಉಪನ್ಯಾಸ ನೀಡಿದ ಅವರು ಜನರಲ್ಲಿ ಕೆಲವೊಂದು ತಪ್ಪು ತಿಳವಳಿಕೆ ಗಳಿವೆ  ಅದರಿಂದ ಆಚೆ ಬರಬೇಕಾಗಿದೆ.   ತಾಯಿಯ ಎದೆ ಇಂದ ಬರುವ ಮೊದಲ ಹನಿ ಹಾಲು ಲಸಕೆ ಇದ್ದಂತೆ. ಅದು ಹಳದಿ ಬಣ್ಣ ಹಾಗೂ ಗಟ್ಟಿಯಾಗಿ ಬರುತ್ತದೆ ಅದನ್ನು ಮಗುವಿಗೆ ನೀಡಿದರೆ ಮಗುವಿಗೆ ನಿಮೋನಿಯಾ ಅಥವಾ ಇನ್ನಿತರ ಖಾಯಿಲೆಯಿಂದ ಸಂರಕ್ಷೀಸಬಹುದು. ಮೂರು ಭಾಗವಾಗಿ  ತಾಯಿಯಲ್ಲಿ ಮಗುವಿಗೆ ಹಾಲು ಉತ್ಪತ್ತಿಯಾಗುತ್ತದೆ.  ಮೊದಲನೇ ಭಾಗ ದಲ್ಲಿ ನೀರಿನಾಂಶ , ಎರಡನೇ ಭಾಗದಲ್ಲಿ,  ಸ್ವಲ್ಪ ಗಟ್ಟಿಯಾದ ಹಾಲು ಉತ್ಪತ್ತಿಯಾಗುತ್ತದೆ ಅದು ಮಗುವಿಗೆ ಆಹಾರ ನೀಡುವ ಪ್ರಕ್ರೀಯೆ ಮಾಡುತ್ತದೆ ಹಾಗೂ ಮೂರನೇ ಭಾಗದಲ್ಲಿ ಪೂರ್ಣ ಪ್ರಮಾಣದ ಗಟ್ಟಿಯಾದ ಹಾಲು ಉತ್ಪತ್ತಿಯಾಗುತ್ತದೆ ಅದು ಮಗುವಿನ ತೂಕ ಹೇಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಒಂದು ಎದೆಯ ಹಾಲೂ ಸಂಪೂರ್ಣ ಖಾಲಿ ಆಗುವವರೆಗೆ ಮತ್ತೊಂದು ಎದೆಯ ಹಾಲೂ ಕೂಡಿಸಬೇಡಿ.  ಅದರಿಂದ ಮಕ್ಕಳಿಗೆ ಸಿಗಬೇಕಾದ ಪೌಷ್ಟಿಕಾಂಶ ಸಿಗುವುದಿಲ್ಲ ಎಂದು ಹೇಳಿದರು. 

ಸ್ತ್ರೀ ರೋಗ ತಜ್ಞೆ ಶೃತಿ ಸಜ್ಜನ  ಅವರ ವಿಡಿಯೋ ನೋಡಲು ಈ ಕೆಳಗಿನ ಲಿಂಕ್ ಗೆ ಹೋಗಿ.

banner

https://www.facebook.com/share/v/16uKawNSd5/

ಬಾಣಂತಿಗೆ ಹೂಗುಚ್ಛ ನೀಡಿ ಗೌರವಿಸಿದರು.

ನಂತರ ಮಾತನಾಡಿದ ಇನ್ನೋರ್ವ ಉಪನ್ಯಾಸಕಿ ಸ್ತ್ರೀ ರೋಗ  ತಜ್ಞೆ ಸೀಮಾ ವಾರದ ಮಾತನಾಡಿ  ಮಕ್ಕಳಿಗೆ  ಹಾಲೂ ಕುಡಿಸುವುದರ ಬಗ್ಗೆಯು ಹಲವು ತಪ್ಪು ಕಲ್ಪನೆಗಳು ತಾಯಿಯಂದರಲ್ಲಿ ಇವೆ. ಮಗುವಿಗೆ ಹಾಲು ಕೂಡಿಸುವುದರಿಂದ  ಶಿಶುವಿನ ಆರೋಗ್ಯದಲ್ಲಿ ಎಷ್ಟು ಉತ್ತಮ ಪರಿಣಾಮ ಬಿರುತ್ತದೆಯೊ ಅಷ್ಟೆ   ಉತ್ತಮ ಆರೋಗ್ಯ ತಾಯಿಗು ಲಬಿಸಲಿದೆ. ಕನಿಷ್ಠ ವೆಂದರೂ ಆರು ತಿಂಗಳುಗಳ ಕಾಲ ಮಗುವಿಗೆ ಆಯಿಯ ಹಾಲು ಕಡ್ಡಾಯವಾಗಿ ಕುಡಿಸಬೇಕು. ನಾವು ಬೇರೆ ಹಾಲಿನ ಪೌಡರ್ ಅಥವಾ ಬೇರೆ ಹಾಲೂ ಉಪಯೋಗಿಸುವುದರಿಂದ ಅಷ್ಟೊಂದು ಪೌಷ್ಟಿಕಾಂಶ ಮಕ್ಕಳಿಗೆ ದೊರಕುವುದಿಲ್ಲ.  ಹಾಲು ಅಮೃತ ಸಮಾನ ಅಲ್ಲ ಅದು ಅಮೃತ್ತಾನೆ.   ತಾಯಿಯಂದಿರು ದವಸ ಧಾನ್ಯಗಳನ್ನು ಹಾಗೂ ತರಕಾರಿಗಳನ್ನು ಸೇವಿಸಬೇಕು. ನೀವು  ಎಷ್ಟು  ಪೌಷ್ಟಿಕಾಂಶದ  ಆಹಾರ ಸೇವಿಸುತ್ತಿರೋ ಅಷ್ಟೆ ಮಗು ಹಾಗೂ ತಾಯಿಯಂದಿರ ಆರೋಗ್ಯವಂತರಾಗಿರುತ್ತಿರಿ. ಹಾಗೂ ಮುಖ್ಯವಾಗಿ ಮಗುವಿಗೆ ಹಾಲೂ ಕುಡಿಸುವಾಗ ಮೋಬೈಲ್ ಬಳಸುವುದನ್ನು ಬಿಡಿ ಎಂದು ಹೇಳಿದರು. 

ತಜ್ಞೆ ಸೀಮಾ ವಾರದ ಅವರ ವಿಡಿಯೋ ನೋಡಲು ಈ ಕೆಳಗಿನ ಲಿಂಕ್ ಗೆ ಹೋಗಿ.

https://www.facebook.com/share/v/1DHBV8Vo2S/

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ. ಎಸ್.ಎಸ್. ಕಲ್ಯಾಣ ಶೇಟ್ಟಿ ತಾಯಂದಿರು ಹಾಗೂ ಕುಟುಂಬಸ್ಥರು ತಪ್ಪು ಕಲ್ಪನೆಗಳಿಂದ ಹೊರ ಬರಬೇಕಾಗಿದೆ. ಇದರಲ್ಲಿ ಆಶಾ ಕಾರ್ಯಕರ್ತೆಯರ  ಮನೆ ಮನೆಗೆ ತೆರಳಿ ಅವರೊಂದಿಗೆ ನೇರ ಸಂಪರ್ಕ ದಲ್ಲಿರುವುದರಿಂದ  ಅವರು ಜಾಗೃತಿ ಮೂಡಿಸುವಲ್ಲಿ ಶ್ರಮಿಸಬೇಕು ಎಂದರು. ಭಾರತೀಯ  ಮಕ್ಕಳ  ತಜ್ಞರ ಸಂಘದ ಅಧ್ಯಕ್ಷರಾದ ಬಾ.ಎಸ್.ವ್ಹಿ. ಪಾಟೀಲ, ಸ್ತ್ರೀ ರೋಗ ತಜ್ಞೆ ಶಾರದಾ ಕುಲಕರ್ಣಿ, ಚಿಕ್ಕ ಮಕ್ಕಳ ತಜ್ಞ ಎಂ.ಎಸ್ ಮೋಗಲಾಯಿ ಮಾತನಾಡಿದರು. 

ಈ ಸಂದರ್ಭದಲ್ಲಿ  ತಾಲೂಕಾ ವೈದ್ಯಾಧಿಕಾರಿ ಎ.ಎ.ಮಾಗಿ,  ಡಾ.ಸಿ.ಎನ್. ಹಿರೇಗೌಡರ, ಡಾ.ಸರೋಜಿನಿ, ಡಾ.ಅಜೇಯ ದೇಸಾಯಿ, ತೌಸಿಪ್ ನಾಗರಳ್ಳಿ, ಡಾ.ಹಾಜಿ ನಧಾಪ, ಡಾ. ಎನ್.ಎಮ್.ಮೊಗಲಾಯಿ ಸೇರಿದಂತೆ ಗರ್ಭಿಣಿಯರು, ಬಾಣಂತಿಯರು ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಶ್ರೀಹರಿ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು.

ಸ್ತ್ರೀ ರೋಗ ತಜ್ಞೆ ಶಾರದಾ ಕುಲಕರ್ಣಿ ಅವರು ವಿಡಿಯೋ ನೋಡಲು ಈ ಕೆಳಗಿನ ಲಿಂಕ್ ನೋಡಿ.

https://www.facebook.com/share/v/1JCKNvCJ4x/

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news