“ಸಿಂದಗಿ ತಾಲೂಕಿನ ಗಣಿಹಾರ ಗ್ರಾಮದ ತೋಟದ ಪಕ್ಕದಲ್ಲಿ ಗಂಡನೇ ಪತ್ನಿಯ ಕ್ರೂರ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಸಿಂದಗಿ: ಪರಮಣ್ಣ ಆನಗೊಂಡ ಎನ್ನುವಾತನು ಮಧ್ಯರಾತ್ರಿ ಒಂದು ಗಂಟೆಯ ಸುಮಾರಿಗೆ, ಪ್ರತಿ ದಿನದಂತೆ. ‘ಹಂದಿ ಓಡಿಸಲು ಪಟಾಕಿ ಸಿಡಿಸೋಣ’ ಎಂದು ಪತ್ನಿ ನಿಲ್ಲಮ್ಮಳನ್ನು ಕರೆದುಕೊಂಡು ತೋಟಕ್ಕೆ ಕರೆದೊಯ್ದಿದ್ದ.
ಮನೆಯಲ್ಲಾದ ಚಿಕ್ಕ ಗಲಾಟೆಯಿಂದ ಒಳಗೋಳಗೆ ಹೊಂಚು ಹಾಕುತ್ತಿದ ಮುದುಕ ಪರಮಣ್ಣ ಕಬ್ಬು ಕಟ್ಟಾವಿನಿಂದ ಪತ್ನಿಯನ್ನು ಹತ್ಯೆ ಮಾಡಿದ್ದಾನೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.

ಹತ್ಯೆಯ ನಂತರ ಶವವನ್ನು ಪಕ್ಕದ ಹೊಲದ ಬಾವಿಯ ಬಳಿಗೆ ಕೊಂಡೊಯ್ದು, ಎರಡು ಭಾಗಗಳಾಗಿ ಕ್ರೂರವಾಗಿ ಕತ್ತರಿಸಿ, ಅಲ್ಲಿನ ದೊಡ್ಡದಾದ ಕಲ್ಲೊಂದು ಕಿತ್ತಿ ದೇಹಕ್ಕೆ ಅದೇ ಕಲ್ಲು ಕಟ್ಟಿ ಬಾವಿಗೆ ಎಸೆದಿದ್ದಾನೆ ಎನ್ನಲಾಗಿದೆ. ಕೃತ್ಯ ಮುಗಿಸಿ ಅದೇ ಬಾವಿಯಲ್ಲಿ ಸ್ನಾನ ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಸಣ್ಣ ಮನೆ ಗಲಾಟೆಯೇ ಹತ್ಯೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪರಮಣ್ಣನಿಗಾಗಿ ಶೋಧ ಆರಂಭಿಸಿದ್ದಾರೆ.”
ಮೃತ್ತಳ ಒಂದು ಭಾಗ ಬಾವಿಯಿಂದ ಹೊರತೆಗೆದರೆ ಇನ್ನೊಂದು ಭಾಗಕ್ಕೆ ಶೋಧ ಕಾರ್ಯಾಚರಣೆ ನಡೆದಿದೆ.
ಗ್ರಾಮಸ್ಥರು ಭೀಕರ ಹತ್ಯೆ ಕಂಡು ಎಂತಹ ನೀರು ರಾಕ್ಷಸ ಎಂದು ಹಿಂಡಿ ಶಾಪ ಹಾಕಿದರೆ ಕುಟುಂಬಸ್ಥರು, ಆಕ್ರಂದನ ಮುಗಿಲು ಮುಟ್ಟಿದೆ.
