Home News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ

ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ

by vegadhut@gmail.com.
0 comments

ಸಿಂದಗಿ, ಆ.1: 33-ಸಿಂದಗಿ ವಿಧಾನಸಭಾ ಮತಕ್ಷೇತ್ರದ ಮತಗಟ್ಟೆ ಸಂಖ್ಯೆ 178 ಹಾಗೂ 179 ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳಾಗಿದ್ದು, ಈ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸಲು ಹಲವು ಬಿಎಲ್‌ಒಗಳು ಹಿಂದೇಟು ಹಾಕಿದ್ದ ಸಂದರ್ಭದಲ್ಲಿ, ಬಿಎಲ್‌ಒಗಳಾದ ಸುಜಾತಾ ಪ್ರವೀಣಕುಮಾರ್ ಬಿರಾದಾರ್ ಹಾಗೂ ಲಾಲಸಾಬ್ ದೊಡ್ಡಮನಿ ಅವರು ಜವಾಬ್ದಾರಿಯನ್ನು ಧೈರ್ಯದಿಂದ ಸ್ವೀಕರಿಸಿ, ನಿಗದಿತ ಅವಧಿಗೂ ಮುನ್ನವೇ ಮತದಾರರ ವಿಶೇಷ ಪರಿಷ್ಕರಣೆ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.

ಇವರ ಕಾರ್ಯಕ್ಷಮತೆ ಮತ್ತು ಕರ್ತವ್ಯನಿಷ್ಠೆಯನ್ನು ಮೆಚ್ಚಿ, ಮಾನ್ಯ ತಾಲೂಕು ದಂಡಾಧಿಕಾರಿಗಳಾದ ಕರೆಪ್ಪ ಬೆಳ್ಳಿ ಅವರು ಇಬ್ಬರು ಬಿಎಲ್‌ಒಗಳನ್ನು ಸನ್ಮಾನಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಕಚೇರಿಯ ಸಿಬ್ಬಂದಿ, ಚುನಾವಣಾ ವೆಚ್ಚ ವೀಕ್ಷಕರಾದ ಎಂ.ಎಂ. ಚಟ್ಟರಕಿ, ಬಿಎಲ್‌ಒ ಮೇಲ್ವಿಚಾರಕರಾದ ಬಾಲ್ಕಿ, ಪ್ರವೀಣಕುಮಾರ ಬಿರಾದಾರ್, ಹಾಗೂ ಮತಗಟ್ಟೆ ಸಂಖ್ಯೆ 179ರ ಸಹಾಯಕರಾದ ಸುನೀಲ ನೇಮಶೆಟ್ಟಿ ಉಪಸ್ಥಿತರಿದ್ದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news