ಮಾದಿಗ ಸಮುದಾಯದ ಪ್ರಮುಖರು ಬಲಗೈ ಸಮುದಾಯದ ಸಚಿವರನ್ನು ಹಾಗೂ ನಾಯಕರನ್ನು ನಿಂದಿಸುತ್ತಿರುವುದು ಸರಿ ಅಲ್ಲ. ಬಲಗೈ ಸಮುದಾಯದ ನಾಯಕರು ಕೆ.ಎಚ್.ಮುನಿಯಪ್ಪ, ಆರ್.ಬಿ ತಿಮ್ಮಾಪುರ, ಗೋವಿಂದ ಕಾರಜೋಳ, ರಮೇಶ ಜಿಗಜಿಣಗಿ ಇವರನ್ನು ನಿಂದಿಸಿದ, ಒಂದೇ ಉದಾಹರಣೆ ನೀಡಿ.
ಸಿಂದಗಿ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾ ಗೋಷ್ಠಿಯನ್ನುದೇಶಿಸಿ ಮಾತನಾಡಿದ ನ್ಯಾಯವಾದಿ ದಲಿತ ಬಲಗೈ ಸಮುದಾಯದ ರಾಜಶೇಖರ ಎಂ ಚೌರ ಒಳ ಮೀಸಲಾತಿ ಗೊಂದಲ ದಿಂದ ವಎಡಗೈ ಸಮುದಾಯ ಕರೆದಿರುವ ಎಲ್ಲ ಸರಕಾರಿ ಹುದ್ದೆಗಳಿಗೆ ಪ್ರಥಮವಾಗಿ ಅವರಿಗೆ ಅವಕಾಶ ನೀಡಿ ಎಂಬುದು ಬಲಗೈ ಅಥವಾ ಸ್ಪರ್ಶ ಜನಾಂಗಕ್ಕೆ ಮಾಡುತ್ತಿದುವ ನೇರ ಅನ್ಯಾಯ. ನಿಮ್ಮ ಹಕ್ಕು ನಿಮ್ಮಗೆ ಇರಲಿ ನಮ್ಮಗೆ ಸಿಗಬೇಕಾದ ಹಕ್ಕು ನಮ್ಮಗೆ ಸಿಗುವಂತಾಗಬೇಕು.
ಇಂದಿನ ಸಮಯದಲ್ಲಿ ಒಳ ಮೀಸಲಾತಿ ಗೊಂದಲದಿಂದ ಸಚಿವರಾದ ಕೆ.ಹೆಚ್. ಮುನಿಯಪ್ಪ ಹಾಗೂ ಆರ್.ಬಿ ತಿಮ್ಮಾಪುರ ತಮ್ಮ ಸಮುದಾಯದ ಪರ ಉತ್ತಮವಾದ ನಿರ್ಧಾರ ತೆಗೆದುಕೊಂಡಿದ್ದಾರೆ. ಆದರೇ ಬಲಗೈ ಸಮುದಾಯದ ನಾಯಕರು ಮೌನ ವಾಗಿದ್ದಿರೀ ಏಕೆ? ನಿಮ್ಮಗೆ ಸಮಾಜದ ಒಳಿತಿಗಿಂತಲೂ ನಿಮ್ಮ ಅಧಿಕಾರ ಹಾಗೂ ರಾಜಕೀಯವೇ ಮುಖ್ಯವಾಯಿತೆ? ಇಂದು ಜಾತಿಪ್ರೇಮ ಇರುವುದರಿಂದಲೇ ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಿರುವುದು. ನೀವು ಪಕ್ಷಪ್ರೇಮಿ ಯಾಗಿ ನೀವು ಮೋಸ ಹೋಗಿದ್ದೀರಿ ಇಂದು ಸಮಾಜವನ್ನು ಅವನತಿಯ ದಾರಿ ತೋರಿಸುತ್ತಿದ್ದೀರಿ ಎಂದು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಆಕ್ರೋಶ ಹೊರ ಹಾಕಿದರು.
https://www.facebook.com/share/v/1N5bAFsMt7/
ಎಡ ಸಮುದಾಯದ ನಾಯಕರ ಪರವಾಗಿ ಅವರ ಸಮಾಜ ಗಟ್ಟಿಯಾಗಿ ನಿಲ್ಲಲು ಅವರ ಸಮಾಜಕ್ಕೆ ಆ ರೀತಿಯ ಕಾರ್ಯ ಮಾಡಿದ್ದಾರೆ. ನಿಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ರಾಜ್ಯದಲ್ಲಿ ತಿರುಗಾಡಿದ ಬಾಸ್ಕರ ಪ್ರಸಾದ ಹಾಗೂ ಎಸ್.ಅರುಣ ಕುಮಾರ ಅಂತವರು ನಿಮ್ಮನ್ನು ನಿಂದಿಸಿದರು ನಿಮ್ಮ ಬಗ್ಗೆ ಛಲವಾದಿ ಸಮುದಾಯ ಧ್ವನಿ ಎತ್ತುತ್ತಿಲ್ಲ ಎಂದರೆ ಸಮಾಜಕ್ಕೆ ನಿಮ್ಮ ಕೊಡುಗೆ ಜೀರೊ ಇದೆ, ಹಾಗೂ ಸಮಾಜದಲ್ಲಿ ನೀವು ಎಲ್ಲಿದ್ದೀರಿ ಎಂದು ಯೋಚಿಸಿ. ಸಮಾಜ ನಿಮ್ಮ ವಿರುದ್ದವೆ ಹೋರಾಟ ಇಳಿಯುವ ಮೊದಲು ಸಮಾಜದ ಪರವಾಗಿ ಗಟ್ಟಿಯಾದ ನಿರ್ಧಾರ ತೆಗೆದುಕೋಳ್ಳಿ ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದಲಿತ ಮುಖಂಡ ರವಿ ಅಲಹಳ್ಳಿ, ಸಂತೋಷ ಪೂಜಾರಿ, ಚಂದ್ರಕಾಂತ ಯಂಟಮಾನ ಉಪಸ್ಥಿತರಿದ್ದರು.
