ಸಿಂದಗಿ: ಮರ್ಚ್ 4 ರಿಂದ ಶ್ರೀ ಶರಣ ಬಸವೇಶ್ವರರ ಪುರಾಣದೊಂದಿಗೆ ಕಡಣಿಯ ಶ್ರೀ ಭೋಗಲಿಂಗೇಶ್ವರ ಜಾತ್ರಾ ಮಹೋತ್ವ ಪ್ರಾರಂಭ ವಾಗುವುದು. ಮಾರ್ಚ್ 25 ರಂದು ಕುಂಭ ಮೇಳ, 26 ರಂದು ಪಲ್ಲಕ್ಕಿ ಉತ್ಸವ, 27 ರಂದು ರಥೋತ್ಸವ ಹಾಗೂ ಸಾಮೂಹಿಕ ವಿವಾಹ ಜರಗುವುದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ವಿವಾಹಕ್ಕಾಗಿ ನೊಂದಣಿ ಪ್ರಾರಂಭವಾಗಿದ್ದು ವಿವಾಹ ಮಾಡಿಸುವವರು ಆಧಾರ ಕಾರ್ಡ, ವಯಸ್ಸಿನ ಪ್ರಮಾಣ ಪತ್ರ, ಮೂವರು ಸಾಕ್ಷಿದಾರರ ಆಧಾರ ಕಾರ್ಡ ಹಾಗೂ ಭಾವಚಿತ್ರಗಳು ಕಡ್ಡಾಯವಾಗಿದೆ. ಹೇಚಿನ ಮಾಹಿತಿಗಾಗಿ ಸಂತೋಷ ಕ್ಷತ್ರಿ : 9880745243 ಹಾಗೂ ಶಿವಾನಂದ ಬಿರಾದಾರ : 8618365380 ಅವರಿಗೆ ಸಂಪರ್ಕಿಸಲು ವಿನಂತಿಸಿದ್ದಾರೆ.
ಗ್ರಾಮದ ಗಣ್ಯರು ಹಾಗೂ ಮನಗೂಳಿ ಪ್ರತಿಷ್ಠಾನದ ಅಡಿಯಲ್ಲಿ ಕಾರ್ಯಕ್ರಮ ಜರುಗುತ್ತಿದ್ದು ವೀರಭದ್ರ ಕತ್ತಿ, ಹಣಮಂತ್ರಾಯ ಕಳಸಗೊಂಡ, ಕಮಲಾಕರ ಕತ್ತಿ, ಭೀಮರಾಯ ಮ ವಡಗೇರಿ, ಗುರಸಂಗ ಕತ್ತಿ. ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
