
ವಿಜಯಪುರ: ಯಾವುದೇ ಮನುಷ್ಯನಿಗೆ ದೇವರ ಕೃಪಾಕಟಾಕ್ಷವಿದ್ದರೇ ಏನು ಬೇಕಾದನ್ನು ಅವನು ಸಾಧಿಸಲು ಸದೃಡನಾಗುತ್ತಾನೆ ಎಂದು ಪಂ. ನರಹರಿಆಚಾರ್ಯ ಜೋಶಿ(ಮುತ್ತಗಿ) ಅವರು ಇಂದಿಲ್ಲಿ ಕರೆ ನೀಡಿದರು.
ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆಯು ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಪ್ರತಿ ತಿಂಗಳು ಹಮ್ಮಿಕೊಳ್ಳುತ್ತಿರುವ ಋಗ್ವೇದ ಪರಿಚಯ ಹಾಗೂ ಕನಕದಾಸರ ಹರಿಭಕ್ತಸಾರ ಪ್ರವಚನ ಕಾರ್ಯಕ್ರಮದಲ್ಲಿ ಕನಕದಾಸರ ಹರಿಭಕ್ತಸಾರದ ವಿವರಣೆಯಲ್ಲಿ ಮಾತನಾಡುತ್ತ ದೇವರು ಒಂದೊAದು ಹಂತದಲ್ಲಿ ಒಂದೊAದು ಹಂತ ನೀಡಿ ಬೆಳೆಸಿ ಪ್ರೊತ್ಸಾಹಿಸುತ್ತಿರುತ್ತಾನೆ, ಆತನ ಕೃಪೆ ಇದ್ದರೆ ಮನುಷ್ಯನ ಬಲ ಹೆಚ್ಚಾಗುತ್ತದೆ. ಧರ್ಮದ ತಳಹದಿಯ ಮೇಲೆ ಆರ್ಥಿಕ ಪ್ರಗತಿ ಸಾಧಿಸಲು ಸಾಧ್ಯ, ಪರಿಪೂರ್ಣವಾದ ವಿದ್ಯೆಯನ್ನು ಸಂಪಾದಿಸಿ ಸಮಾಜಕ್ಕೆ ಪೂರಕ ಕೊಡುಗೆ ನೀಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು, ಇಲ್ಲಿ ಮನಸ್ಸು ಬಾಗಿ ಗುರುಭಕ್ತಿಯನ್ನು ಪಡೆದುಕೊಳ್ಳಬೆಕೆಂದರು. ಜ್ಞಾನಿಗಳಾದವರು ಇನ್ನೂ ತಿಳಿದುಕೊಳ್ಳಬೆಕೆನ್ನುವರು ಜಾಣರು ಗೊತ್ತಿಲ್ಲದವರಂತೆ ಇರುತ್ತಾರೆ ಅವರೇ ಪರಿಪೂರ್ಣ ಜ್ಞಾನವಂತರು ಎಂದು ಪಂ. ನರಹರಿ ಆಚಾರ್ಯ ಹೇಳಿದರು.
ಜ್ಞಾನ ಅಗಾಧ, ಅದೊಂದು ಸಮುದ್ರವಿದ್ದಂತೆ ಸರಸ್ವತಿಯ ಇನ್ನೊಂದು ರೂಪವೇ ಕಾಳಿದಾಸ ಎಂದು ವೇದ ಉಪನಿಷತ್ತಗಳ ಪರಿಚಯ ಮಾಡಿಕೊಟ್ಟ ಸರ್ವಜ್ಞ ವಿಹಾರ ವಿದ್ಯಾಪೀಠದ ಕುಲಪತಿಗಳಾದ ಪಂ. ಮಧ್ವಾಚಾರ್ಯ ಮೋಕಾಶಿ ಅವರು ಋಗ್ವೇದ ವಿಜ್ಞಾನಕ್ಕಿಂತಲೂ ಒಂದು ಕೈ ಮೇಲು ಎಂದು ವಿವರಿಸಿದರು.
ತಪಸ್ಸಿನ ಫಲ ಸಿಗುವದೇ ಅದೇ ಜೀವಾತ್ಮ, ಎಂದ ಅವರು ಶರೀರಕ್ಕೆ ಸಾವಿದೆ ಆದರೆ ಜೀವಕ್ಕಿಲ್ಲ ಎಂದು ಉಪನಿಷತ್ ಕುರಿತು ಮಾತನಾಡಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಮನದಟ್ಟಾಗುವಂತೆ ತಿಳಿಹೇಳಿ ಉತ್ತರಿಸಿದರು.

ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆಯ ಆಧ್ಯಕ್ಷ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್. ಎ. ಜಿದ್ದಿ ಅವರು ಅಧ್ಯಕ್ಷೀಯ ಭಾಷಣದಲ್ಲಿ ವೇದ ಅಧ್ಯಯನ ದೇಶದ ಸಂಸ್ಕೃತಿ ಉಳಿವಿಗಾಗಿ ನಮ್ಮ ಶಿಕ್ಷಣ ಸಂಸ್ಥೆ ಈಗ ಒಂದು ಬೀಜವನ್ನು ಬಿತ್ತಿದ್ದೇವೆ ಈ ಬೀಜ ಮೊಳಕೆ ಒಡೆದು ಹೆಮ್ಮರವಾದಾಗ ಅದರ ಫಲ ಸಿಗಲು ಸಾಧ್ಯ. ಇಂತಹ ಪಂಡಿತೋತ್ತಮರು ನಿರಂತರವಾಗಿ ಅವರ ಸೇವೆ ನೀಡಿದಾಗಲೇ ನಾವು ಗುರಿ ಮುಟ್ಟಲು ಸಾಧ್ಯ ಎಂದರು.
ನಮ್ಮ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ವೇದ ಉಪಉನಿಷತ್ ಪರಿಚಯಿಸುವದರ ಜೊತೆಗೆ ಕನಕದಾಸರ ಹರಿಭಕ್ತಸಾರ ಪ್ರವಚನ ಕಾರ್ಯಕ್ರಮ ಪ್ರತಿ ತಿಂಗಳು ನೈತಿಕ ಶಿಕ್ಷಣ ಮಾಡಲಾಗುತ್ತಿದ್ದು, ಮೊದಲು ಯಾರೂ ಇರದೇ ಹೋಗಿತ್ತು ಈಗ ವೇದಿಕೆ ತುಂಬಿ ಹೋಗುತ್ತಿದೆ ಎಂದು ಸಂಸ್ಥೆಯ ನಿರ್ದೇಶಕರುಗಳಾದ ವಿ.ಡಿ.ವಸ್ತçದ ಪ್ರಾಸ್ತಾವಿಕವಾಗಿ ಹೇಳಿದರು.
ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆಯು ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಪ್ರತಿ ತಿಂಗಳು ಹಮ್ಮಿಕೊಳ್ಳುತ್ತಿರುವ ಋಗ್ವೇದ ಪರಿಚಯ ಹಾಗೂ ಕನಕದಾಸರ ಹರಿಭಕ್ತಸಾರ ಪ್ರವಚನ ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರುಗಳಾದ ಡಾ|| ಕಂಠೀರವ ಕುಲ್ಲೋಳ್ಳಿ, ಬಿ.ಆರ್.ಬನಸೋಡೆ ಎಸ್.ಆರ್.ಬಿರಾದಾರ, ಶ್ರೀಮತಿ ರಾಜಶ್ರೀ ಜಿದ್ದಿ, ಹಾಗೂ ಅಶೋಕ ಜಿದ್ದಿ, ಎ.ಎಸ್.ಹುನ್ನೂರ, ಎಸ್.ಐ.ಕೋಟ್ಯಾಳ, ವಿ.ಎಸ್.ಶಿರೋಳ, ಎಸ್.ಎಸ್.ಗೌಡಪ್ಪಗೋಳ, ಎಸ್.ಎನ್.ಪ್ಯಾಟಿಗೌಡರ, ಕಲ್ಲಪ್ಪ ಯಕ್ಕುಂಡಿ, ಎಸ್.ಎಚ್.ಮ್ಯಾಗೋಟಿ, ಎಸ್.ಡಿ.ದುರಗಣ್ಣವರ ಶಿಕ್ಷಕ ಶಿಬ್ಬಂದಿ ಮತ್ತು ಹಿರಿಯರು ಭಾಗವಹಿಸಿದ್ದರು. ವಿದ್ಯಾರ್ಥಿನಿಯರು ತದೇಕಚಿತ್ತದಿಂದ ಋಗ್ವೇದ ಪರಿಚಯ ಹಾಗೂ ಕನಕದಾಸರ ಹರಿಭಕ್ತಸಾರ ಆಲಿಸುತ್ತಿದ್ದರು
ಆರಂಭದಲ್ಲಿ ವಿದ್ಯಾರ್ಥಿನಿಯರಿಂದ ಸ್ವಾಗತಗೀತೆ, ಆಡಳಿತಾಧಿಕಾರಿಗಳಾದ ಆರ್. ಸಿ .ವಾಡೇದ ಅವರು ಸ್ವಾಗತಿಸಿದರು ಕಾರ್ಯಕ್ರಮ ನಿರೂಪಣೆಯನ್ನು ಎಸ್. ಆರ್. ಬಿರಾದಾರ ನಡೆಸಿಕೊಟ್ಟರು ಕೊನೆಯಲ್ಲಿ ಪ್ರಾಚಾರ್ಯ ಕೆ. ಆರ್. ಜಾಧವ ವಂದಿಸಿದರು.

