ಸಿಂದಗಿ : ಕ್ಷೇತ್ರದ ಶಾಸಕ ರಮೇಶ ಭೂಸನೂರ ತಮ್ಮ ಸ್ವಗೃಹದಲ್ಲಿ ಪ್ರತಿ ವರ್ಷದಂತೆ ನಾಡ ದಸರಾ ಹಬ್ಬದ ನಿಮಿತ್ಯವಾಗಿ ಬನ್ನಿ ವಿನಿಮಯ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಕಳೆದ ಎರಡು ವರ್ಷಗಳಿಂದ ವಿಶ್ವಕ್ಕೆ ಅಂಟಿದ ಕೋವೀಡ್ ಮಹಾಮಾರಿಯಿಂದ ಬನ್ನಿ ವಿನಿಮಯ ಕಾರ್ಯಕ್ರಮ ಹಮ್ಮಿಕೊಂಡಿರಲಿಲ್ಲ. ಇ ಭಾರಿ ಯಾವುದೇ ಅಡೆ-ತಡೆ ಇಲ್ಲದೆ ದೇಶಾದ್ಯಂತ ದಸರಾ ಹಬ್ಬ ಆಚರಿಸುತ್ತಿದೆ. ಪ್ರತಿ ವರ್ಷದಂತೆ ಈ ವರ್ಷ ಬನ್ನಿ ವಿನಿಮಯ ಕಾರ್ಯಕ್ರಮದಲ್ಲಿ ಕ್ಷೇತ್ರದ ಜನರು ಸೌಹಾರ್ದತೆಯಿಂದ, ಪಾಲ್ಗೊಂಡಿದ್ದಾರೆ ಬನ್ನಿ ವಿನಿಮಯ ದಿಂದ ಸಂಭಂಧಗಳು ಬೆಸೆಯುತ್ತದೆ. ನಮ್ಮನ್ನು ಮತ್ತಷ್ಟು ಗಟ್ಟಿಗೊಳಿಸುವ, ನಮನ್ನು ಸಶಕ್ತರನ್ನಾಗಿ ಮಾಡುವ ಶಕ್ತಿ ಬನ್ನಿ ಹಬ್ಬಕ್ಕೆ ಇದೆ. ದಸರಾ ನಿಮಿತ್ಯವಾಗಿ ನಾಡ ದೇವತೆ ಚಾಮುಂಡೇಶ್ವರಿಗೆ, ಆಯುಧಗಳ ಪೂಜೆ ಸಲ್ಲಿಸಿದ ನಂತರ ಪರಸ್ಪರ ಬನ್ನಿ ಹಂಚುವ ಪದ್ದತಿಯು ಬಹಳ ಪುರಾತನವಾದದೆಂದು ಶಾಸಕ ಭೂಸನೂರ ಹೇಳಿದರು.
ಶಾಸಕರು ಅತ್ಯಂತ ಸರಳತೆ ಹಾಗೂ ಎಲ್ಲರೊಂದಿಗೆ ಸೌಹಾರ್ದತೆಯಿಂದ ಇರುವ ವ್ಯಕ್ತಿ ಇಂದು ಬೆಳ್ಳಿಗೆಯಿಂದ ಬರತ್ತಿರುವ ಜನರ ಮಾತು ಕೇಳಿದರೆ ಅವರೊಂದಿಗೆ ಭೂಸನೂರ ಇಟ್ಟುಕೊಂಡಿರುವ ಅವಿನಾಭಾವ ಸಂಬಂಧಗಳು ಎಷ್ಟು ಎಂಬುದು ಕಾಣಬಹುದು ಎಂದು ಹಿರಿಯಜೀವಿ ಯೊಬ್ಬರು ಶಾಸಕ ಭೂಸನೂರ ಕುರಿತು ಅಭಿಪ್ರಾಯ ಹಂಚಿಕೊಂಡರು.
ಬನ್ನಿ ವಿನಿಮಯ ಕಾರ್ಯಕ್ರಮದಲ್ಲಿ ಶಾಸಕ ಭೂಸನೂರ ಅವರ ತಂದೆಯವರಾದ ಬಾಳಪ್ಪ ಭೂಸನೂರ ಇದ್ದರು ಅವರಿಗೆ ಬನ್ನಿ ನೀಡಿ ಶಾಸಕ ರಮೇಶ ಭೂಸನೂರ ಆರ್ಶಿವಾದ ಪಡೆದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಶ್ರೀಶೈಲಗೌಡ ಮಾಗಣಗೇರಿ, ಪ್ರವೀಣ ಕಂಟಿಗೊಂಡ, ಅಶೋಕ ಸುಲ್ಪಿ, ಸಂತೋಷ ಪಾಟೀಲ ಡಂಬಳ, ಸಿದ್ದನಗೌಡ ಪಾಟೀಲ, ಶಂಕರ ಬಗಲಿ, ಬಾಷಾಸಾಬ ತಾಂಬೋಳಿ, ಗೋಲ್ಲಾಳ ಬಂಕಲಗಿ, ರಾಜಣ್ಣ ನಾರಾಯಣಕರ, ಹಾಗೂ ತಾಲೂಕಿನ ಅಧಿಕಾರಿಗಳು, ಕಾನಿಪ ಸದಸ್ಯರು, ಮಹಿಳಾ ಕಾರ್ಯಕರ್ತೆಯರು, ಯುವಕರು, ಹಿರಿಯ ಜೀವಿಗಳು ಬನ್ನಿ ವಿನಿಮಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
