ಸಿಂದಗಿ : ಎಂ,ಎಂ, ಮುಂಡೇವಾಡಗಿ ಕನ್ಸ್ಟ್ರಕ್ಷನ್ ವತಿಯಿಂದ ಜ್ಞಾನ ಭಾರತಿ ಶಾಲೆಯ ಹತ್ತನೆ ತರಗತಿ ವಿದ್ಯಾರ್ಥಿಗಳಿಗೆ ರೈಟಿಂಗ್ ಪ್ಯಾಡ್ ವಿತರಣೆ ಕಾರ್ಯಕ್ರಮ ಜರುಗಿತು.
ರೈಟಿಂಗ್ ಪ್ಯಾಡ್ ವಿತರಿಸಿ ಮಾತನಾಡಿದ ರಾಜಶೇಖರ ಕೂಚಬಾಳ ಮಕ್ಕಳಿಗಾಗಿ ಒಂದು ಕಾರ್ಯಾಗಾರ ಮಾಡಬೇಕು ಎನ್ನುವ ಉದ್ದೇಶವಿತ್ತು ಆದರೆ ಅದಕ್ಕೆ ಈ ವರ್ಷ ಸಮಯ ಕೂಡಿ ಬರಲಿಲ್ಲ. ಮಕ್ಕಳಿಗೆ ಶುಭಕೋರುವ ಸಲುವಾಗಿ ಸಿಂದಗಿ ನಗರದ ಪ್ರತಿ ಶಾಲೆಯ ಹತ್ತನೆ ತರಗತಿ ಮಕ್ಕಳಿಗೆ ರೈಟಿಂಗ್ ಪ್ಯಾಡ್ “ಪರೀಕ್ಷೆಯ ಭಯ ಬೇಡ ” ಎಂಬ ವಾಕ್ಯದೊಂದಿಗೆ ವಿತರಣೆ ಮಾಡುತ್ತಿದ್ದೇವೆ. ಸಮಯದ ಸದ್ಬಳಕೆ ನೀವು ಮಾಡಿಕೋಳಿ. ನಾವು ಹಲವಾರು ಸಣ್ಣ- ಪುಟ್ಟ ಕಾರ್ಯಕ್ರಮ ಮಾಡುತ್ತಿರುವುದು ಅದರಿಂದ ವಿವಿಧ ಕ್ಷೇತ್ರಗಳಲ್ಲಿ ಹಲವಾರು ಮಕ್ಕಳಿಗೆ ಉಪಯೋಗವಾಗಿದೆ.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 95 ಪ್ರತಿಶತ ಅಂಕ ಪಡೆದ ಸಿಂದಗಿ ತಾಲೂಕಿನ ವಿದ್ಯಾರ್ಥಿಗಳಿಗೆ ಐದು ಸಾವಿರ ರೂಪಾಯಿ ಮೆಂತೆ ಈ ಬಾರಿ ಹದಿನೈದು ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡಲು ಮೀಸಲಿಡಲಾಗಿದೆ. ಅದರ ಸದುಪಯೋಗ ವಿದ್ಯಾರ್ಥಿಗಳು ಪಡೆಯಬೇಕು ಎಂದು ಹೇಳಿ ಪರೀಕ್ಷೆ ಬರೆಯುತ್ತಿರುವ ಮಕ್ಕಳಿಗೆ ಶುಭಕೋರಿದರು.
ಕಾರ್ಯಕ್ರಮ ಉದ್ದೇಶಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಶಿಕ್ಷಕ ಸಿದ್ಧಲಿಂಗ ಚೌಧರಿ ಮಹಾನ್ ನಾಯಕರ ಭಾವಚಿತ್ರವುಳ್ಳ ರೈಟಿಂಗ್ ಪ್ಯಾಡ್ ವಿತರಿಸುವ ಉದ್ದೇಶ ಎನ್ನೆಂದರೆ ಅವರ ಜೀವನ ನಿಮ್ಮಗೆ ಸ್ಪೂರ್ತಿದಾಯಕ ವಾಗಿರಲಿ ನಿಮ್ಮ ಪರೀಕ್ಷಾ ಸಮಯದಲ್ಲಿ ಒಳ್ಳೆಯ ಪ್ರಭಾವ ಮಕ್ಕಳ ಮೇಲಿರಲಿ ಎಂಬುದಾಗಿದೆ ಆದ್ದರಿಂದ ನಿಮ್ಮ ಮುಂದಿನ ಪರೀಕ್ಷೆಗೆ ಶುಭವಾಗಲಿ ಎಂದು ಹೇಳಿದರು.
ರಂಗನಾಥ ತೋರ್ಪೆ ಮಾತನಾಡಿ ಬದುಕಿನ ತಿರುವಿನಲ್ಲಿ ಇರುವ ವಿದ್ಯಾರ್ಥಿಗಳಿಗೆ ಇದು ನಿಮ್ಮ ಬದುಕನ್ನು ರೂಪಿಸುವ ಸಮಯವಾಗಿದೆ. ಇಂದು ನೀವು ಶ್ರಮಪಟ್ಟರೆ ಮುಂದೆ ಶ್ರಮ ಪಡುವುದು ಕಡಿಮೆ ಆಗುವುದು. ನಿಮ್ಮ ನಿಮ್ಮ ಯಶಸ್ಸು ನಿಮ್ಮ ಕೈಯಲ್ಲಿದೆ ವಿದ್ಯಾರ್ಥಿಗಳು ಫೇಲ್ ಆದರೆ ಅಂಕ ಕಡಿಮೆ ಬಂದರು ನೀವು ತಲೆ ಕೆಡಸಿಕೋಳ್ಳಬೇಡಿ. ಆತ್ಮಸ್ಥೈರ್ಯ ದಿಂದ ಪರೀಕ್ಷೆ ಬರೆಯಿರಿ. ನಿಮ್ಮಗೆ ಇಂದು ಮುತ್ತು ಮುಂಡೇವಾಡಗಿ ಸಂಸ್ಥೆಯಿಂದ ರೈಟಿಂಗ್ ಪ್ಯಾಡ್ ನೀಡುತ್ತಿರುವುದು ಒಂದು ಸಂಸ್ಕಾರವುಳ್ಳ ವಿದ್ಯಾರ್ಥಿಗಳಿಗೆ ಒಬ್ಬ ಸಂಸ್ಕಾರವುಳ್ಳ ವ್ಯಕ್ತಿ ಮುತ್ತು ಮುಂಡೇವಾಡಗಿ ಈ ಕಾರ್ಯ ಮಾಡುತ್ತಿರುವುದು ಸಂತಸ ತಂದಿದೆ. ನಿಮ್ಮಗೆ ಶುಭವಾಗಲಿ.
ಫಾದರ್ ಸಂತೋಷ, ಸಿಸ್ಟರ್ ಸಿಂಥೀಯಾ ಡಿ ಮೇಲೊ ಸಂಸ್ಥಾಪಕರು ಸಂಗಮ ಸಂಸ್ಥೆ, ಸತೀಶ ಹಿರೇಮಠ, ಮಹಾಂತೇಶ ಮುಂಡೇವಾಡಗಿ, ವಿಜಯಕುಮಾರ ಪಟ್ಟಣಶೆಟ್ಟಿ, ಉಪಸ್ಥಿತರಿದ್ದರು.
