Home ಯುವ ನೋಟ ರಾಜಕೀಯ ಪಕ್ಷಗಳಿಗೆ ಸಂಭಂದವಿಲ್ಲ ಚುನಾವಣಾ ನಿಯಮ! | ಆಯೋಗದಿಂದ ಕಠಿಣ ಕ್ರಮ ಯಾಕೀಲ್ಲ ?

ರಾಜಕೀಯ ಪಕ್ಷಗಳಿಗೆ ಸಂಭಂದವಿಲ್ಲ ಚುನಾವಣಾ ನಿಯಮ! | ಆಯೋಗದಿಂದ ಕಠಿಣ ಕ್ರಮ ಯಾಕೀಲ್ಲ ?

by vegadhut@gmail.com.
0 comments

Table of Contents

ಸಿಂದಗಿ :  ಚುನಾವಣೆ ಅಖಾಡ ರಂಗೇರುತ್ತಿದ್ದು ಇದುವರೆಗೂ ಚುನಾವಣಾ ಆಯೋಗ ಶಿಸ್ತು ಕ್ರಮ ತೆಗೆದುಕೋಳ್ಳುವಲ್ಲಿ ವಿಪಲವಾಗಿದೆ. 

ಸಿಂದಗಿ ಮತಕ್ಷೇತ್ರಕ್ಕೆ ಸಂಭಂದಿಸಿದಂತೆ ಒಟ್ಟು 9 ತಂಡಗಳನ್ನು  ರಚನೆ ಮಾಡಲಾಗಿದೆ.  c-VIGIL  ಆಪ್ ನಲ್ಲಿ 17 ದೂರುಗಳು ಬಂದಿದ್ದು  ಗೋಡೆಬರಹ, ಸಾರ್ವಜನಿಕ ಸ್ಥಳಗಳಲ್ಲಿ  ರಾಜಕೀಯ ದ್ವಜಗಳು ಹಾರಿಸಿರುವುದನ್ನು ಗಮನಿಸಿ 15 ದೂರುಗಳನ್ನು ಪರಿಹರಿಸಲಾಗಿದೆ.  ಇನ್ನು ಎರಡು  ಸುಳ್ಳಾಗಿವೆ  ಎಂದು ಚುನಾವಣಾ ಅಧೀಕಾರಿ  ಸಿದ್ದರಾಮ ಮಾರಿಹಾಳ ತಿಳಿಸಿದ್ದಾರೆ.

ರಾಜಕೀಯ ಪಕ್ಷಗಳು ಬೃಹತ್ತ ಮೆರವಣಿಗೆ ಮುಖಾಂತರ ಹಲವಾರು ಕಾರ್ಯಕರ್ತರೊಂದಿಗೆ ಆಗಮಿಸಿ ಭವ್ಯ ಮೆರವಣಿಗೆಯೊಂದಿಗೆ ನಾಮಪತ್ರ ಸಲ್ಲಿಸಿದ ಬಿಜೆಪಿ, ಕಾಂಗ್ರೇಸ್, ಜೆಡಿಎಸ್ ಪಕ್ಷಗಳ ವಿರುದ್ದವಾಗಲಿ ಅಥವಾ ಖಾಸಗಿ ವಾಹನಗಳಿಗೆ ಪಕ್ಷದ ಬಾವುಟ ಕಟ್ಟಿಕೊಂಡು ತಿರುಗಾಡುವವರ ವಿರುದ್ದವಾಗಲಿ ಅಥವಾ ಮಠ, ಮಂದಿರ, ಸಮುದಾಯ ಭವನಗಳಲ್ಲಿ ಸಭೆ ಸಮಾರಂಭ ಮಾಡಿ ಚುನಾವಣಾ ಪ್ರಚಾರ ಮಾಡುತ್ತಿರುವವರ ವಿರುದ್ದ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ. ಹಲವು ಅನುಮಾನಗಳಿಗೆ ಎಡೆಮಾಡಿಕೋಟ್ಟಿದೆ. 

ಸಿಂದಗಿ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ  ಸಿಂದಗಿ, ಆಲಮೇಲ, ಮತ್ತು ಕಲಕೇರಿ ಪೋಲಿಸ ಠಾಣೆಯಲ್ಲಿ ಒಟ್ಟು  8 ದೂರುಗಳ ಕುರಿತು ಎಪ್.ಆಯ್.ಆರ್ ದಾಖಲಾಗಿದ್ದು ಅದರಲ್ಲಿ  6 ದೂರುಗಳು ಮಧ್ಯಕ್ಕೆ ಸಂಬಂದಿಸಿದ್ದು ಇದ್ದೆ ಬ್ರೂ ಸ್ಪೇರ್ ಕೀಡ್ಸ್ ಅಕಾಡೆಮಿ ಇಂಡಿಯಾ ವಿರುದ್ದ ಪರವಾನಗಿ ಇಲ್ಲದೆ ಕಾರ್ಯಕ್ರಮ ನಡೆಸಿರುವ ಕುರಿತು ದೂರು ದಾಖಲಿಸಿ ಶಾಮಿಯಾನ್, ಸ್ಪೀಕರ್  ಮತ್ತು ಇನ್ನಿತರ ವಸ್ತುಗಳು ವಶಪಡಿಸಿಕೊಂಡಿದ್ದಾರೆ. 30400  ಮೌಲ್ಯದ 64 ಬ್ಯಾಗ್ ಗ್ರೌಂಡ್ ನಟ್ಸ್ ಗಳನ್ನು ವಶಪಡಿಸಿಕೊಂಡು ಅಶೋಕ ಲೇಲ್ಯಾಂಡ್ ಮಿನಿ ಗೂಡ್ಸ್ ಗಾಡಿಯನ್ನು ಸೀಜ್ ಮಾಡಿದ್ದಾರೆ.

ಸಾಮನ್ಯ ಜನರ ಮೇಲೆ ಕ್ರಮ ತೆಗೆದುಕೋಳ್ಳುವ ಇಲಾಖೆಯವರು   ರಾಜಕೀಯ ಪಕ್ಷಗಳು, ಮುಖಂಡರ ಮೇಲೆಯು ಕ್ರಮ ತೆಗೆದುಕೋಳ್ಳಲಿ ನೀತಿ ಸಂಹಿತೆ ಉಲ್ಲಂಘನೆ ಪ್ರತಿಬಾರಿ ಯಾಗುತ್ತದೆ ಆದರೆ ಅವರ ವಿರುದ್ದ ಯಾವುದೇ ದಿಡೀರ ಕ್ರಮಗಳು ಅವರು ತೆಗೆದುಕೋಳ್ಳುವುದಿಲ್ಲ  ಎಂಬ ಬೇಸರ  ಜನಸಾಮಾನ್ಯರ ವ್ಯಕ್ತಪಡಿಸುತ್ತಿದ್ದಾರೆ. ಚುನಾವಣಾ ಆಯೋಗ ಕ್ರಮ ತೆಗೆದುಕೋಳ್ಳುತ್ತಾ ಕಾದು ನೋಡಬೇಕಿದೆ.

ಚುನಾವಣಾ  ಅಧಿಕಾರಿಗಳು ಸಾಮಾಜಿಕ ಜಾಲತಾಣದ ಮೇಲೆ  ನಿಗಾವಹಿಸಬೇಕು . ಸ್ವಯಂಪ್ರೇರಿತವಾಗಿ ನಿಗಾವಹಿಸಿ ದೂರು ದಾಖಲಿಸಿ ಸರಳ, ಆಮಿಷ ಮುಕ್ತ  ಚುನಾವಣೆಗೆ ಕ್ರಮ ತೆಗೆದುಕೋಳ್ಳಬೇಕು – ಮುತ್ತು ಸುಲ್ಪಿ ಯುವ ಮುಖಂಡ ಸಿಂದಗಿ

 

banner

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news