Home Social ಹಾಳಾಗುತ್ತಿರುವ ಪುರಸಭೆ ನೂತನ ಚಿಕನ್, ಮಟನ್ ಅಂಗಡಿಗಳಿಗಾಗಿ ಸ್ಥಾಪಿಸಿದ ಮಳಿಗೆಗಳು

ಹಾಳಾಗುತ್ತಿರುವ ಪುರಸಭೆ ನೂತನ ಚಿಕನ್, ಮಟನ್ ಅಂಗಡಿಗಳಿಗಾಗಿ ಸ್ಥಾಪಿಸಿದ ಮಳಿಗೆಗಳು

by vegadhut@gmail.com.
0 comments

ಮಾಜಿ ಅಧ್ಯಕ್ಷ ಶಾಂತವೀರ ಬಿರಾದಾರ ಅಧಿಕಾರ ಅವಧಿಯಲ್ಲಿ  ರಸ್ತೆ ಬದಿ ಇರುವ  ಮಾಂಸದಂಗಡಿಗಳನ್ನು ಮಲಘಾಣ ರಸ್ತೆ ಹತ್ತಿರ ಇರುವ  ಪುರಸಭೆಯ ಜಾಗದಲ್ಲಿ ಕೆಲವು ಹಳೆಯ ಹಾಗೂ  ಹಲವು ನೂತನ ಮಳಿಗೆಗಳು ಪ್ರಾರಂಬಿಸಲು ಯೋಜನೆ ರೂಪಿಸಿದ್ದರು. 

ಸಿಂದಗಿ : ಪಟ್ಟಣದ ಪ್ರಮುಖ  ರಸ್ತೆ ಬದಿ  ಇರುವ ಮಾಂಸದಂಗಡಿಗಳಿಂದ  ನಗರವೆ ಅಶುದ್ಧವಾಗಿ ಕಾಣುತ್ತಿದೆ. ಹೊರಗಡೆ ಇಂದ ಬರುವವರಿಗೆ ರಸ್ತೆ ಪಕ್ಕದಲ್ಲಿರುವ  ಮಾಂಸದಂಗಡಿಗಳಿಂದ ನಗರದ ಸೌಂದರ್ಯಕರಣಕ್ಕು ತೊಂದರೆ ಆಗುತ್ತಿದೆ. ಪ್ರಮುಖವಾಗಿ ಅಲಿನ ಮಾಲಿನ್ಯದಿಂದ    ಆರೋಗ್ಯದಲೂ  ದುಷ್ಪರಿಣಾಮ ಬೀರುವ ಸಾದ್ಯತೆ ಇದುದ್ದರಿಂದ  ಒಂದೆಡೆ ಆದರೆ ಉತ್ತಮ ವಾಗುತ್ತದೆ ಎಂಬ  ಅಭಿಪ್ರಾಯ ದಿಂದ ಹಳೆಯ ಮಳಿಗೆಗಳು ರಿಪೇರಿ ಕಾಮಗಾರಿ ಹಾಗೂ ನೂತನ ಪತ್ರಾಸ ಮಳಿಗೆಗಳು ನಿರ್ಮಾಣ ಮಾಡಿದ್ದರು. 

ಅದರೆ ಇಂದಿಗೂ ಅದು ಜನರ ಉಪಯೋಗಕ್ಕ ಬಾರದೆ  ನೂತನ ಮಳಿಗೆಯಲ್ಲಿ  ಕಹಿ-ಕಸ ದ ರಾಶಿ ಎದೆ ಎತ್ತರಕ್ಕೆ  ಬೆಳೆದು ನಿಂತಿದೆ.  ಇದರ  ಉಪಯೋಗ ಮಾಡದೆ ಇದ್ದರೆ ಪುರಸಭೆಯ  ಮತ್ತೊಂದು ಯೋಜನೆ ಪೋಲಾಗುವುದು ನಿಶ್ಚಿತವಾಗಿದೆ ಇದರ ಕುರಿತು ಸಿಂದಗಿ ಪುರಸಭೆ ಒಂದು  ನಿರ್ಧಾರ ತೆಗೆದಕೋಳ್ಳ ಬೇಕಾಗಿದೆ. 

ರಸ್ತೆ ಬದಿಯಲ್ಲಿರುವ ಮಾಂಸದಂಗಡಿಗಳು ಸ್ಥಳಾಂತರಗೋಳ್ಳಬೇಕು ಸಸ್ಯಹಾರಿ ಮತ್ತು ಶಾಖಹಾರಿಗಳಿಗೆ ಮಾಂಸದಂಗಡಿಗಳಿಂದ  ಮುಜುಗರ ವಾಗುವುದನ್ನು ತಪಿಸಬೇಕು. – ಮಲ್ಲಿಕಾರ್ಜುನ  ಅರ್ಜುಣಗಿ. (ರಾಷ್ಟ್ರೀಯ ಬಸವ ದಳ  ತಾಲೂಕಾ ಅಧ್ಯಕ್ಷರು ಸಿಂದಗಿ ) 

ಚಿಕನ್ ಮತ್ತು ಮಟನ್  ಮಾರ್ಕೆಟ್ ಸ್ಥಳಾಂತರದಿಂದ  ನಗರ ಸೌಂದರ್ಯಗೋಳ್ಳುವುದು ಹಾಗೂ ಜನರ  ಆರೋಗ್ಯದ  ಮೇಲೆ ದುಷ್ಪರಿಣಾಮದಿಂದ ಪಾರು ಮಾಡುವ ದೃಷ್ಠಿಯಿಂದ  ಮಳಿಗೆಗಳು ಮಾಡಲು ಕ್ರಮ ವಹಿಸಲಾಗಿತ್ತು .  ಇಂದಿನ ಪುರಸಭೆ ಅಧ್ಯಕ್ಷರು   ನಿರ್ಧರಿಸ ಬೇಕಾಗಿದೆ. -ಶಾಂತವೀರ  ಬಿರಾದಾರ ( ಮಾಜಿ ಅಧ್ಯಕ್ಷರು ಪುರಸಭೆ ಸಿಂದಗಿ ) 

ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ತೆಗೆದುಕೊಂಡು ಪ್ರತಿಕ್ರೀಯೆ ನೀಡುವೆ. ಶಾಂತವೀರ ಮನಗೂಳಿ ( ಪುರಸಭೆ ಅಧ್ಯಕ್ಷರು ಸಿಂದಗಿ )

ಅಧ್ಯಕ್ಷರೊಂದಿಗೆ ಚರ್ಚಿಸಿ  ನಿರ್ಧಾರ ತೆಗೆದುಕೋಳ್ಳಲಾಗುವುದು. ಎಸ್ ರಾಜಶೇಖರ ( ಪುರಸಭೆ ಮುಖ್ಯಾಧಿಕಾರಿ ಸಿಂದಗಿ )

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news