ನೂತನ ತಾಲೂಕು ರಚನೆ ಸಮಯದಲ್ಲಿ ಆಲಮೇಲ, ದೇವರ ಹೀಪ್ಪರಗಿ , ತಾಳಿಕೋಟಿ ತಾಲೂಕುಗಳು ಅಖಂಡ ಸಿಂದಗಿಯ ತಾಲೂಕುಗಳು ಹರಿದು ಹಂಚಿ ಹೋಗಿವೆ ಆದ್ದರಿಂದ ನೂತನ ವಿಜಯಪುರದ ವಿಭಜಿತ ಜಿಲ್ಲೆಯಾಗಿ ಸಿಂದಗಿ ಘೋಷಿಸಲಿ ಎಂದು ಸಿಂದಗಿ ಜಿಲ್ಲಾ ಒಕ್ಕೂಟದ ಪ್ರಮುಖ ಮಾಜಿ ಎಂಎಲ್.ಸಿ ಅರುಣ ಶಹಾಪುರ ಆಗ್ರಹಿಸಿದರು.
ಸಿಂದಗಿ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಕುರಿತು ಮಾತನಾಡಿದ ಅವರು ಸ್ವಾಮಿ ರಮಾನಂದ ತಿರ್ಥರಂತಹ ಹೈದ್ರಾಬಾದ ವಿಮೋಚನೆಯಲ್ಲಿ ಮಹತ್ತರ ಪಾತ್ರ ವಹಿಸಿದಂತ ಇತಿಹಾಸ ದಿಂದ ಗೋಕಾಕ ಚಳುವಳಿಗೆ ಧ್ವನಿ ಎತ್ತಿದ ತೊಂಟದ ಜಗದ್ಗುರು ಗಳಿಂದ ಹಾಗೂ ಪ್ರಥಮ ಸ್ವಾತಂತ್ರ ಸಂಗ್ರಾಮ ಕ್ಕಿಂತಲೂ ಪೂರ್ವದಲ್ಲಿ ಕಂದಾಯ ಬಂಡಾಯ, ತೆರಿಗೆ ಬಂಡಾಯ ಹೋರಾಟ ದಿಂದಲೂ ಅತ್ಯುನ್ನತ ಇತಿಹಾಸ ಭರಿತ ಸಿಂದಗಿ ಹಲವು ಮಹಾ ಪುರುಷರಿಗೆ ಜನ್ಮ ನೀಡಿದಂತಹ ಪುಣ್ಯದ ನಾಡು ಸಿಂದಗಿ.
ವಿಜಯಪುರ ಹೊರತು ಪಡಿಸಿದರೆ ಅತೀ ಹೇಚ್ಚು ಶೀಕ್ಷಣ ಸಂಸ್ಥೆಗಳು ಸಿಂದಗಿಯಲ್ಲಿವೆ. ಸುರಪುರ, ಕೆಂಬಾವಿ, ಶಹಾಪುರ, ಯಡ್ರಾಮಿ, ಅಪಜಲಪೂರ, ಇಂಡಿ ಹಾಗೂ ತಾಳಿಕೋಟಿ ಯಿಂದಲೂ ನಮ್ಮಲ್ಲಿ ಶೀಕ್ಷಣಕ್ಕಾಗಿ ಆಗಮಿಸುತ್ತಾರೆ ಹಾಗೂ ವ್ಯಾಪಾರ ದೃಷ್ಠಿಯಿಂದಲೂ ಸಿಂದಗಿ ವ್ಯಾಪಾರಿ ಕೇಂದ್ರವಾಗಿದೆ. ಆದ್ದರಿಂದ ಸಿಂದಗಿಯ ಮಹತ್ವವನ್ನು ಅರ್ಥ ಮಾಡಿಕೊಂಡು ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ನವರು ವಿಜಯಪುರದ ವಿಭಜಿತ ಜಿಲ್ಲೆಯಾಗಿ ಸಿಂದಗಿ ಘೋಷಿಸಲಿ ಎಂದು ಹಕ್ಕೋತ್ತಾಯ ಮಾಡಿದರು.
ಈ ಸಂಧರ್ಭದಲ್ಲಿ ಸಿಂದಗಿ ಜಿಲ್ಲಾ ಒಕ್ಕೂಟದ ಪ್ರಮುಖರಾದ ಅಶೋಕ ವಾರದ, ಅಶೋಕ ಅಲ್ಲಾಪುರ , ಪ್ರಕಾಶ ಹಿರೇಕುರಬರ, ಎಂ.ಎನ್.ಪಾಟೀಲ, ಸಾಯಬಣ್ಣ ದೇವರಮನಿ, ಗುರು ತಳವಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
