Home Social ಗುಳ್ಳೆ ಹೋದ ಜನರು ರಾಜ್ಯದಲ್ಲಿ ಎಲ್ಲಿ ಬೇಕಾದರು ಪಡಿತರ ಪಡೆಯಬಹುದು ; ಇಲಿಯಾಸ್ ಬೊರಾಮಣಿ

ಗುಳ್ಳೆ ಹೋದ ಜನರು ರಾಜ್ಯದಲ್ಲಿ ಎಲ್ಲಿ ಬೇಕಾದರು ಪಡಿತರ ಪಡೆಯಬಹುದು ; ಇಲಿಯಾಸ್ ಬೊರಾಮಣಿ

ಉಸುಕು ಮಾಫಿಯಾ ಗಿಂತಲೂ ಅಕ್ಕಿ ಮಾಫಿಯಾ ಜೋರಾಗಿದೆ.

by vegadhut@gmail.com.
0 comments

ನ್ಯಾಯಬೆಲೆ ಅಂಗಡಿಯಿಂದ  ಪಡಿತರ  ಪಡೆದುಕೊಂಡು ದಳಾಳಿಗಳಿಗೆ ಮಾರಾಟ  ಮಾಡುವವರನ್ನು ಗುರುತಿಸಿ ಅವರ ರೇಷನ್ ಕಾರ್ಡ ರದ್ದತಿಯ  ಪಟ್ಟಿಯಲ್ಲಿ ಸೇರಿಸಿ ಎಂದು ಗ್ಯಾರಂಟಿ ಯೋಜನೆಗಳ  ಅನುಷ್ಟಾನ  ಸಮಿತಿ ಜಿಲ್ಲಾ ಅಧ್ಯಕ್ಷ ಇಲಿಯಾಸ್ ಬೊರಾಮಣಿ  ಹೇಳಿದರು. 

ಸಿಂದಗಿ : ಪಟ್ಟಣದ ತಾಲೂಕು ಪಂಚಾಯತ ಸಭಾ ಭವನದಲ್ಲಿ ನಡೆದ  ತಾಲೂಕಾ ಮಟ್ಟದ ಗ್ಯಾರಂಟಿ ಯೋಜನೆ  ಅನುಷ್ಠಾನ ಸಮಿತಿಯ  ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು  ನಮ್ಮ ಜಿಲ್ಲೆಗಳಿಂದ ಬೆಂಗಳೂರು, ಹಾಸನ , ಮೈಸೂರು ಕಡೆ ಹಾಗೂ ಕೆಲವು ಜನ ಇಟ್ಟಿಗೆ ಬಟ್ಟಿಯ ಕೆಲಸಕ್ಕಾಗಿ ಕಾರ್ಮಿಕರು ಗುಳ್ಳೆ ಹೋಗುವುದು ಹೇಚ್ಚಾಗಿದೆ. ಜನರಲ್ಲಿ ಮಾಹಿತಿ ಇಲ್ಲದ  ಕಾರಣ ಅವರು ಪಡಿತರ ದಿಂದ ವಂಚಿತರಾಗುತ್ತಿದ್ದಾರೆ ಅದರ ಕುರಿತು ಪ್ರಾಚಾರಿಸ ಬೇಕಾಗಿದೆ ಎಂದರು.  

ಇಂದಿನ ಸಮಯದಲ್ಲಿ ಇಂಡಿ ಮತ್ತು ಸಿಂದಗಿ ಭಾಗದಲ್ಲಿ  ಅಕ್ಕಿ ಮಾಫಿಯಾ ಮೀತಿ ಮೀರಿದೆ ಇಂಡಿ ತಾಲ್ಲೂಕಿನಲ್ಲಿಯೆ 33 ಪ್ರಕರಣ ದಾಖಲಿಸಲಾಗಿದೆ  ಸಿಂದಗಿ ಯಲ್ಲಿ ಒಂದು ಪ್ರಕರಣ ದಾಖಲಾಗಿಲ್ಲ ಅಂದರೆ ಇಲ್ಲಿ ಅಕ್ಕಿ ಮಾಫಿಯಾ ಇಲ್ಲವಾ ? ಒಂದು ಗಮನದಲ್ಲಿರಲ್ಲಿ ನಮ್ಮ ಭಾಗದಲ್ಲಿ ಮರಳು ಮಾಪಿಯಾ ಗಿಂತಲೂ ಅಕ್ಕಿ ಮಾಫಿಯಾ ಜೋರಾಗಿದೆ ಅದರ ಸಂಪೂರ್ಣ ಮಾಹಿತಿ ನನ್ನಲಿದೆ ಭಹಿರಂಗ ಪಡಿಸಲು ಇದು ಸಮಯವಲ್ಲ   ಎಂದು ಹೇಳಿದರು.  

ಗೃಹಲಕ್ಷ್ಮೀಯ ವರದಿ ನೀಡಿದ  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ  ಅಧಿಕಾರಿ ಶಂಭುಲಿಂಗ ಹಿರೇಮಠ  ಸಿಂದಗಿ ಮತ್ತು ಆಲಮೇಲ   ಭಾಗದ ವರದಿ ನೀಡಿದ ಅವರು  58822 ಪಲಾನುಭವಿಗಳಿಗೆ  2,23,52,36,000 ಅಗಷ್ಟ 2023 ರಿಂದ ಮೇ 2025 ರ ವರೆಗೆ ಒಟ್ಟು ಹತ್ತೊಂಬತ್ತು ತಿಂಗಳಲ್ಲಿ ಜಮಾ ಮಾಡಲಾಗಿದೆ ಎಂದು ಹೇಳಿದರು. ಅದೇ ರೀತಿ ಸಾರಿಗೆ ಇಲಾಖೆ, ಇಂದನ ಇಲಾಖೆ   ಹಾಗೂ ಯುವನಿಧಿ ಕುರಿತು ವರದಿ ಸಂಬಂದಿಸಿದ ಅಧಿಕಾರಿಗಳು  ವಿವರಿಸಿದರು.

banner

ತಾಲೂಕು ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ರಾಮು ಅಗ್ನಿ    ತಾಲೂಕಾ ಅಧ್ಯಕ್ಷ  ಶ್ರೀಶೈಲ ಕವಲಗಿ     ಸದಸ್ಯರಾದ ಸಾಹೇಬ ಪಟೇಲ ಅವಟಿ, ರಜತ್ ತಾಂಬೆ, ಸುನಂದಾ ಯಂಪೂರೆ, ಪರಸು ಉಪ್ಪಾರ, ರುದ್ರಗೌಡ ಪಾಟೀಲ, ಎಸ್,ಬಿ ಖಾನಾಪೂರ, ಸಿದ್ದಲಿಂಗ ಗುಂಡಾಪುರ. 

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news