ಒಳ ಮೀಸಲಾತಿ ಜಾರಿಮಾಡದೆ ಮುಂಬಡ್ತಿ ಹಾಗೂ ನೇಮಕಾತಿ ಪ್ರಕ್ರೀಯೆ ಪ್ರಾರಂಬಿಸಿದ ಕಾಂಗ್ರೇಸ್ ಸರಕಾರದ ವಿರುದ್ದ ಕ್ರಾಂತಿಕಾರಿ ರಥಯಾತ್ರೆಯ ರೂವಾರಿ ಬಿ.ಆರ್,ಭಾಸ್ಕರಪ್ರಸಾದ ಖಂಡಿಸಿದರು.
ಸಿಂದಗಿ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಕುರಿತು ಮಾತನಾಡಿದ ಅವರು ಉಚ್ಚ ನ್ಯಾಯಾಲಯ ದೆಹಲಿ ಆದೇಶದ ನಂತರ ಕೇವಲ ಎರಡು ತಿಂಗಳ ಕಾಲ ಕಾಲಾವಕಾಶ ತೆಗೆದುಕೊಂಡ ರಾಜ್ಯ ಸರಕಾರ ನಾಲ್ಕು ತಿಂಗಳ ಕಾಲ ತನ್ನ ಸಮಿತಿಯ ಅವಧಿ ವಿಸ್ತರಿಸಿಕೊಂಡಿತ್ತು. ಈ ಮದ್ಯ ಮೂರು ಕ್ಷೇತ್ರಗಳ ಉಪ ಚುನಾವಣೆ ಹಿನ್ನಲ್ಲೆ ಮಾದಿಗರ ಆಕ್ರೋಶ ವ್ಯಕ್ತವಾದಗ ಮಾತು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಒಳ ಮೀಸಲಾತಿ ಜಾರಿ ಮಾಡುವವರೆಗೂ ಹೊಸ ನೇಮಕಾತಿ ಮಾಡುವುದಿಲ್ಲ ಎಂಬ ಭರವಸೆ ನೀಡಿದ್ದರು. ಮಾತು ತಪ್ಪಿದ ಸರಕಾರ ಒಳ ಮೀಸಲಾತಿ ಜಾರಿಗೂ ಮುಂಚೆನೆ ನೇಮಕಾತಿ ಪ್ರಕ್ರೀಯೆ ಹಾಗೂಬಡ್ತಿ ಪ್ರಕ್ರೀಯೆ ಪ್ರಾರಂಭಿಸಿ ವಂಚನೆ ಮಾಡಿದರು.
ನೀವು ನೀಡುವ ಓಳ ಮೀಸಲಾತಿ ದಯೆ ಅಥವಾ ಬೀಕ್ಷೆ ಅಲ್ಲ, ಅದು ಉಚ್ಚ ನ್ಯಾಯಾಲಯದಿಂದ ಸಿಕ್ಕರುವ ಹಕ್ಕು. ಅದನ್ನು ನೀಡಲು ಯಾಕೆ ಇಷ್ಟು ನೆಪಗಳು ನೀಡುತ್ತಿದೆ ಎಂಬುದು ಗೋತ್ತಿಲ್ಲ. ಪಕ್ಕದ ರಾಜ್ಯಗಳಾದ ಆಂದ್ರ ಪ್ರದೇಶ, ತೆಲಂಗಾಣ, ಹರಿಯಾಣ, ತಮಿಳುನಾಡಿನಲ್ಲಾಗಿದೆ ಕರ್ನಾಟಕದಲ್ಲಿ ಯಾಕೆ ಆಗುತ್ತಿಲ್ಲ ಒಂದು ವಾರದ ಕೆಲಸಕ್ಕೆ ಇಷ್ಟೊಂದು ಹಿಂದೆಟ್ಟು ಯಾಕೆ ಎಂಬುದು ಪ್ರಶ್ನೇಯಾಗಿ ಉಳಿದಿದೆ.
ಸರಕಾರದ ನೇಮಕಾತಿಗಳು ಹಾಗೂ ಬಡ್ತಿ ಪ್ರಕ್ರೀಯೆ ಮುಗಿದ ನಂತರ ಒಳ ಮೀಸಸಲಾತಿ ನೀಡಿದರೆ ಅದು ಮೋಸದ ಖಾಲಿ ಚಿಪ್ಪು ಇದಂತೆ ಅದನ್ನು ನಮ್ಮಗೆ ನೀಡುವ ಹುನ್ನಾರ ಸರಕಾರ ಮಾಡುತ್ತಿದೆ. ಪ್ರಯೋಜನಕ್ಕೆ ಬಾರದ ಒಳ ಮೀಸಲಾತಿ ತೆಗೆದುಕೊಂಡರು ಪ್ರಯೋಜನವಿಲ್ಲದಂತಾಗುತ್ತದೆ ಇದನ್ನು ನಿಲ್ಲಿಸದೆ ಹೋದರೆ ಮುಂಬರುವ ಚುನಾವಣೆಗಳಲ್ಲಿ ನಿಮ್ಮ ಪಕ್ಷದ ಅಭ್ಯರ್ಥಿಗಳನ್ನು ಮಾದಿಗರ ಕಾಲೋನಿಗಳಿಗೆ ಪ್ರವೇಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಾಯಬಣ್ಣ ಪುರದಾಳ, ರಾಜು ಬಾಸಗಿ, ಯಲ್ಲು ಇಂಗಳಗಿ, ಸಿದ್ದು ಪೂಜಾರಿ , ಖಾಜು ಬಂಕಲಗಿ ಉಪಸ್ಥಿತರಿದ್ದರು.
https://youtu.be/SaVHE_2x_hY?si=GA_hz7QJEbIe1-z1
