ಹಲವು ದಿನಗಳಿಂದ ಸಿಂದಗಿ ಪುರಸಭೆಗೆ ಬರುವ ಜನರು ವಿವಿಧ ತೊಂದರೆಗಳು ಅನುಭವಿಸುವುದು ಸಹಜವಾಗಿದೆ ಆದರೂ ಜನರ ಕಷ್ಟಗಳಿಗೆ ಪುರಸಭೆ ಸದಸ್ಯರು ಹಾಗೂ ಅಧಿಕಾರಿಗಳು ಸಹಕರಿಸುತ್ತಿಲ್ಲ.
ಸಿಂದಗಿ : ಪುರಸಭೆ ಕಾರ್ಯಾಲಯದ ಬಜಟ್ ಸಭೆ ಆಗದ ಹಿನ್ನಲ್ಲೆಯಲ್ಲಿ ಹಲವು ದಿನಗಳಿಂದ ಸಿಂದಗಿ ಜನತೆ ತೊಂದರೆ ಅನುಭವಿಸುತ್ತಿರುವುದು ಸಾಮಾನ್ಯವಾಗಿದೆ. ಉತ್ತಾರಿ ತೆಗೆದುಕೊಂಡು ಲೋನ್ ಹಾಕಿಸಿಕೊಂಡು ಮಕ್ಕಳ ಮದುವೆ ಮಾಡಬೇಕು ಅಥವಾ ಮನೆ ಕಟ್ಟಬೇಕು ಕಟ್ಟಿದ ಮನೆ ಪೂರ್ಣವಾಗದೆ ನಿಂತಿರುವುದು ಜನರು ದಿನನಿತ್ಯ ಹಿಡಿಶಾಪ ಹಾಕುವಂತೆ ಆಗಿದೆ.
ಇದರ ಮದ್ಯೆ ಅಧಿಕಾರಿಗಳು ಸದಸ್ಯ-ಸದಸ್ಯರ ಮದ್ಯದ ರಾಜಕೀಯ ಬಿಕ್ಕಟ್ಟಿಗೆ ಸಿಂದಗಿ ಪುರಸಭೆಗೆ ಏಪ್ರೀಲ್ ತಿಂಗಳಲ್ಲಿ ಬರಬೇಕಾದ ಕೋಟ್ಯಾಂತರ ರೂಪಾಯಿ ಆದಾಯ ಬಂದಿಲ್ಲ. ಮುಂದೆ ಪುರಸಭೆ ನಡೆಸುವುದು ಕಷ್ಟಕರ ವಾಗಬಹುದು ಎಂದು ಮಾತನಾಡುವುದು ಕೇಳಿ ಬರುತ್ತಿದೆ. ಪುರಸಭೆ ಮುಖ್ಯಾಧಿಕಾರಿ ಬಜಟ್ ಸಭೆ ಬಗ್ಗೆ ಮಾಹಿತಿ ಕೇಳಿದರೆ ಲೀಗಲ್ ಓಪಿನಿಯನ್ ತೆಗೆದುಕೊಂಡು ಸಭೆ ಮಾಡುವ ಬಗ್ಗೆ ಮಾತ್ರ ಹೇಳುತ್ತಿದ್ದಾರೆ ವಿನಾಃ ಯಾವುದೇ ಕ್ರಮ ತೆಗೆದುಕೋಳ್ಳುತ್ತಿಲ್ಲ ಪುರಸಭೆಯಲ್ಲೂ ಸಿಗುತ್ತಿಲ್ಲ.
ವೀಡಿಯೋ ಸುದ್ದಿ : https://www.facebook.com/share/v/19Zou9giuS/
ಜಿಲ್ಲಾ ನಗರಾಭೀವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಸಂಪರ್ಕಿಸಿದರೆ ಮುಖ್ಯಾಧಿಕಾರಿಗೆ ತಿಳಿಸಿರುವೆ ಎಂದು ಹಾರಿಕೆಯ ಉತ್ತರ ನೀಡುತ್ತಿದ್ದಾರೆ ವಿನಾಃ ಯಾವುದೇ ಪ್ರಯೋಜನ ವಾಗುತ್ತಿಲ್ಲ. ಜಿಲ್ಲಾಧಿಕಾರಿಗಳ ತರಬೇಕೆಂದು ಹಲವು ದಿನಗಳಿಂದ ದೂರವಾಣಿ ಮುಖಾಂತರ ಸಂಪರ್ಕಿಸಿದರೆ ಪೋನ್ ಬಂದಿಟ್ಟು ಮೌನಕ್ಕೆ ಶರಣಾದಂತೆ ಗ್ರಾಸವಾಗುತ್ತಿದೆ.
ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಅವರಿಗೆ ಸಂಪರ್ಕಿಸಿದರೆ ನಾನು ಕಳೆದ ಮಾರ್ಚ್ 27ರಂದೆ ಬಜಟ್ ಸಭೆ ತೆಗೆಯಲ್ಲು ನೋಟಿಸ್ ನೀಡಲಾಗಿತ್ತು ಅದನ್ನು ಮುಖ್ಯಾಧಿಕಾರಿ ನನ್ನಗೂ ತಿಳಿಸದೆ ಮೇಲಾಧಿಕಾರಿಗಳ ಗಮನಕ್ಕು ಬಾರದೆ ದೀಢಿರ ಬಜಟ್ ಸಭೆ ರದ್ದು ಮಾಡಿದ್ದಾರೆ ಅದರ ವಿರುದ್ದು ಕ್ರಮ ತೆಗೆದುಕೋಳ್ಳುವಂತೆ ಜಿಲ್ಲಾಧಿಕಾರಿಗಳಿಗೂ ಮನವಿ ಮಾಡಿರುವೆ. ಮತ್ತು ಅವಿಶ್ವಾಸ ಗೋತ್ತುವಳಿ ಕುರಿತು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿ ಒಂದು ಹಂತದ ರಿಲೀಪ್ ನೀಡಿದ ತಕ್ಷಣ ಮುಖ್ಯಾಧಿಕಾರಿ ಎಸ್.ರಾಜಶೇಖರ ಅವರಿಗೆ ಮೊದಲು ಬಜಟ್ ಸಭೆ ಮಾಡಿ ಎಂದು ಮೌಖಿಕವಾಗಿ ತಿಳಿಸಿದರು ಸಭೆ ಕರೆಯದ ಹಿನ್ನಲ್ಲೆಯಲ್ಲಿ 05 ಮೇ 2025 ರಂದು ಪತ್ರವು ನೀಡಿರುವೆ ಆದರು ಮುಖ್ಯಾಧಿಕಾರಿ ಸಭೆ ಕರೆಯದೆ ಇರುವುದು ನೋಡಿದ್ದರೆ ರಾಜಕೀಯ ಹಿತಾಸಕ್ತಿಗಳ ಕೈಗೊಂಬೆಯಾಗಿ ರಾಜಕೀಯ ಮಾಡುತ್ತಿದ್ದಾರೆ ಎನ್ನಿಸುತ್ತಿದೆ ಎಂದು ತಿಳಿಸಿದರು. ಅಧ್ಯಕ್ಷರ ಹತಾಶಯ ಮಾತುಗಳು ಕೇಳಿದರೆ ಇಂದು ಅವರು ಅಧ್ಯಕ್ಷರಿದ್ದರು ಹೇಲ್ಪಲೇಸ್ ಆದಂತೆ ಕಾಣುತ್ತದೆ.
ಸಭೆಯ ಅಧಿಕಾರ ಪುರಸಭೆಗೆ ಇದೆ ನಮ್ಮಗೆ ಅಥವಾ ಜಿಲ್ಲಾಧಿಕಾರಿಗಳಿಗೆ ಇಲ್ಲ. ಕಾನೂನು ತೊಡಕಿನ ನಿವಾರಣೆಗೆ ಮುಖ್ಯಾಧಿಕಾರಿ ಕೋರ್ಟಗೆ ಹೋಗಿದ್ದರು ಇಂದು ಯಾವ ನಿರ್ಣಯ ತೆಗೆದುಕೋಳ್ಳುತ್ತಾರೆ ನೋಡಾಬೇಕಾಗಿದೆ. – ಬದ್ರುದೀನ್ ಸೌದಾಗರ ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜಾನಾ ನಿರ್ದೇಶಕರು ವಿಜಯಪುರ
ಶಾಸಕ ಅಶೋಕ ಮನಗೂಳಿ ಹಾಗೂ ಅವರ ಸಹೋದರರು ಅಧಿಕಾರ ಮಾಡಲು ಬಿಡುತ್ತಿಲ್ಲ. ರಾಜಕೀಯ ದ್ವೇಷ ವಿದ್ದರೆ ನನ್ನೊಂದಿಗೆ ಇರಲ್ಲಿ ಇದರಲ್ಲಿ ಜನರು ತೊಂದರೆ ಅನುಭವಿಸುವುದು ಬೇಡ. ನ್ಯಾಯಾಲಯದ ತೀರ್ಪು ಅವರ ಪರವಾಗಿ ಬಂದರೆ ನಾನು ತಲೆ ಬಾಗುವೆ. ಅದನ್ನು ಬಿಟ್ಟು ನನ್ನಗೆ ಅಧ್ಯಕ್ಷ ಸ್ಥಾನದಿಂದ ಇಳಿಸ ಬೇಕೆಂದೆ ನನ್ನಗೆ ತೊಂದರೆ ನೀಡಲು ಹೋಗಿ ಜನರಿಗೆ ತೊಂದರೆ ಆಗುತ್ತಿದೆ ಅದನ್ನು ನಿಲ್ಲಿಸಿ. ಇಡೀ ಜಿಲ್ಲಾಡಳಿತವೆ ನನ್ನ ವಿರುದ್ದ ನಿಂತಿದ್ದೆ ನಾನೂ ನೀಡಿದ ದೂರುಗಳಿಗೆ ಯಾವುದೇ ತನಿಖೆ ಮಾಡದ ಜಿಲ್ಲಾಧಿಕಾರಿಗಳು ಅವರು ನೀಡಿದ ಒಂದು ದೂರಿಗೆ ತನಿಖಾ ತಂಡ ರಚಿಸಿದೆ. ನಾನು ತನಿಖಾ ತಂಡಕ್ಕು ಸಹಕರಿಸುವೆ. – ಶಾಂತವೀರ ಬಿರಾದಾರ ಅಧ್ಯಕ್ಷರು ಪುರಸಭೆ ಸಿಂದಗಿ.
ನನ್ನ ಗಮನಕ್ಕೆ ಬಾರದೆ ಬಜಟ್ ಸಭೆ ಕರೆದಿದ್ದಾರೆ . ಸೌಜನ್ಯಕ್ಕು ನನ್ನೊಂದಿಗೆ ಚರ್ಚಿಸಿಲ್ಲ. ನಾನು ಜಿಲ್ಲಾಧಿಕಾರಿಗಳು, ಪಿ.ಡಿ ಹಾಗೂ ಅಧಿಕಾರಿಗಳಿಗೆ ಪುರಸಭೆ ಸಭೆ ಬಗ್ಗೆ ಯಾವುದೇ ರೀತಿಯ ಮಾತುಗಳು ನಾನು ಆಡಿರುವುದಿಲ್ಲ ಅದನ್ನು ಅವರು ಸಭೀತುಮಾಡಲಿ. ಅವರು ಎನೇ ಆರೋಪ ಮಾಡಿದರು ನಾನು ತಲೆ ಕೆಡಿಸಿಕೋಳ್ಳುವ ಅವಶ್ಯಕತೆ ಇಲ್ಲ ಸದಸ್ಯರ ಹಾಗೂ ಅಧ್ಯಕ್ಷರ ಗುದ್ದಾಟ ನಡೆದಿದೆ. – ಅಶೋಕ ಮನಗೂಳಿ ಶಾಸಕರು ಸಿಂದಗಿ.
