ನಿವೃತ್ತ ಶೀಕ್ಷಕಿ ಸಾತವ್ವ ವಿಠ್ಠಲ ಕುಂಬಾರ ಇವರ 27 ನವಂಬರ 2024ರಂದು ನೀಡಿದ ದೂರಿನ ಮೇಲೆ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.
ಸಿಂದಗಿ : ಲಕ್ಷ್ಮಣ ನಿಂಬರಗಿ, ಐಪಿಎಸ್ ಪೊಲೀಸ್ ಅಧೀಕ್ಷಕರು, ವಿಜಯಪುರ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ ಹಾಗೂ ಜಗದೀಶ ಎಚ್.ಎಸ್, ಡಿಎಸ್‌ಪಿ ಇಂಡಿ ಉಪ-ವಿಭಾಗ ರವರ ಮಾರ್ಗದರ್ಶನದಲ್ಲಿ ನಾನಾಗೌಡ ಪೊಲೀಸ್ ಪಾಟೀಲ, ಸಿಪಿಐ ಸಿಂದಗಿ ವೃತ್ತ ರವರ ನೇತೃತ್ವದಲ್ಲಿ ಸಿಂದಗಿ ಪೊಲೀಸ್ ಠಾಣೆಯ ಆರೀಫ್ ಮುಶಾಪುರಿ, ಪಿಎಸ್‌ಐ (ಎಲ್‌ಓ), ಜೆ.ಎಸ್.ಗಲಗಲಿ, ಎಎಸ್‌ಐ ಹಾಗೂ ಸಿಬ್ಬಂದಿ ಜನರಾದ ಆರ್.ಎಲ್.ಕಟ್ಟಿಮನಿ, ಪಿ.ಕೆ.ನಾಗರಾಳ, ಎಸ್.ಎನ್.ಬಿರಾದಾರ, ಎಂ.ಎಚ್.ಹೊಸಮನಿ, ವಾಯ್ಕೆ. ಉಕುಮನಾಳ, ಪಿ.ಕೆ.ಗೊರವಗುಂಡಗಿ, ಉಮೇಶ ನನಶೆಟ್ಟಿ, ಬಿ. ಎನ್.ಕೊಳೂರ, ಎಚ್.ಟಿ.ಗೋಡೆಕರ, ಎಸ್.ಎಸ್.ಕೊಂಡಿ, ಬಿ.ಜಿ.ಮುಳಸಾವಳಗಿ, ಇವರನ್ನೊಳಗೊಂಡ ತಂಡ ಚುರುಕಿನ ಕಾರ್ಯಾಚರಣೆ ನಡೆಸಿದೆ.

ಖಚಿತ ಮಾಹಿತಿ ಮೇರೆಗೆ ಆರೋಪಿತನಾದ ಪ್ರಶಂತ ಸಿದ್ದಾರಾಮ ನಾವಿ ಸಾ.ದೇವರ ನಿಂಬರಗಿ ತಾ: ಚಡಚಣ ಈತನಿಗೆ ವಶಕ್ಕೆ ಪಡೆದ ತಂಡ ಪ್ರಥಮವಾಗಿ ಒಂದು ಕಂಟ್ರಿ ಪಿಸ್ತೂಲ್ ಹಾಗೂ ನಾಲ್ಕು ಸಜೀವ ಗುಂಡುಗಳನ್ನು ವಶಕ್ಕೆ ಪಡೆದುಕೊಂಡಿದೆ. ಆರೋಪಿಗೆ ವಿಚಾರಣೆ ಗೋಳಪಡಿಸಿದಾಗ ಮಧ್ಯ ಪ್ರದೇಶ ದಿಂದ ಎರಡು ಕಂಟ್ರಿ ಪಿಸ್ತೂಲ್ ತಂದಿರುವ ಮಾಹಿತಿ ನೀಡಿದಾಗ ಅವುಗಳನ್ನು ವಶಕ್ಕೆ ಪಡೆದುಕೊಂಡ ತನಿಖಾ ತಂಡ ಒಟ್ಟು ಮೂರು ಕಂಟ್ರಿ ಪಿಸ್ತೂಲ್ ಹಾಗೂ 12 ಸಜೀವ ಗುಂಡುಗಳನ್ನು ವಶಕ್ಕೆ ಪಡೆಯುತ್ತಾರೆ. ಹೆಚ್ಚಿನ ತನಿಖೆ ನಡೆಸಿದಾಗ ಯಂಕಂಚಿಯಲ್ಲಿ ಸುಲಿಗೆ ಮಾಡಿದ ಾಭರಣಗಳನ್ನು ಇಂಡಿಯ ಮೂತ್ತೂಟ್ ಫೈನಾನ್ಸ್ ಹಾಗೂ ಡಿಸಿಸಿ ಬ್ಯಾಂಕ್ ನಲ್ಲಿ ಇಟ್ಟಿರುವುದಾಗಿ ತಿಳಿಸಿದ ಮೇಲೆ ಒಟ್ಟು 70 ಗ್ರಾಂ ಚಿನ್ನ ಜಪ್ತ ಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ಅಕ್ರಮ ಶಸ್ತ್ರಾಸ್ತ್ರ ದೊರೆತಿರುವುದರಿಂದ ಆರೋಪಿತನ ಮೇಲೆ ಸಿಂದಗಿ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: 119/2025 ಕಲಂ: 25(ಎ) ಆರ್ಮ್ಸ್ ಆಕ್ಟ್-1959 ಅಡಿ ಪ್ರತ್ಯೇಕ ದೂರು ದಾಖಲಿಸಲಾಗಿದೆ ಪ್ರಸ್ತುತ ಪ್ರಕರಣವು ತನಿಖಾ ಹಂತದಲ್ಲಿದೆ ಎಂದು ವಿಜಯಪುರ ಜಿಲ್ಲಾ ಪೊಲೀಸ್ ಅಧಿಕ್ಷಕರಾದ ಲಕ್ಷ್ಮಣ ನಿಂಬರಗಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
