
ಸಿಂದಗಿ : ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು ಪರಿಸರಕ್ಕೆ ಹಾನಿಯಾಗದಂತೆ ಕಾಮಾಗಾರಿ ಕೈಗೋಳ್ಳದ ಪರಿಣಾಮವಾಗಿ ವಾಯುವಿನಲ್ಲಿ ದೂಳಿನ ಕಣಗಳು ತುಂಬಿಕೊಂಡು ನಗರ ನಿವಾಸಿಗಳು ಜೀವಿಸಲುಪೂರಕ ಪರಿಸರವೆ ಇಲ್ಲದಂತಾಗಿದೆ. ಇದರಿಂದ ತೀವ್ರ ಶ್ವಾಸಕೋಶ ಸಂಬಂಧ ಅನಾರೊಗ್ಯಕ್ಕೆ ತ್ತಾತುಗುತ್ತಿದು ಸದಿರಿ ಸಂಬಂದಪಟ್ಟ ಅಧಿಕಾರಿಗಳು, ಗುತ್ತಿಗೆದಾರರಿಗೆ ಪರಿಸರ ಮಾಲಿನ್ಯ ಆಗದಂತೆ ಕಾಮಗಾರಿ ಕೈಗೋಳ್ಳುವಂತೆ ಸೂಚಿಸುವ ಮೂಲಕ ಸುಕ್ತ ಕ್ರಮ ತೆಗೆದುಕೋಳ್ಳಬೇಕಾಗಿ ಯುವ ನಗರ ನಿವಾಸಿ ಚೇತನ ಗುತ್ತಾದಾರ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪತ್ರದ ಮೂಲಕ ಧ್ವನಿ ಎತ್ತಿದ್ದರು.

ಮನವಿಗೆ ಸ್ಪಂದಿಸಿದ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು
ಇದು ಮುಖ್ಯವಾಗಿ ರಸ್ತೆಗಳ ನಿರ್ಮಾಣ ಮತ್ತು ಭೂಗತ ಒಳಚರಂಡಿ ವ್ಯವಸ್ಥೆಗಳಂತಹ ಅಭಿವೃದ್ಧಿ ಚಟುವಟಿಕೆಗಳನ್ನು ಆರೋಪಿಸಿದೆ. ಈ ಪ್ರದೇಶದಲ್ಲಿ ಕೈಗೊಂಡಿರುವುದರಿಂದ ಅಪಾರ ಧೂಳಿನ ತೊಂದರೆಯಾಗುತ್ತಿದೆ. ಇದು ಪ್ರತಿಯಾಗಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ, ನಿರ್ದಿಷ್ಟವಾಗಿ ಉಸಿರಾಟದ ಸಮಸ್ಯೆಗಳಿಗೆ ಮತ್ತು ಸಾಮಾನ್ಯವಾಗಿ ಪರಿಸರಕ್ಕೆ ಕಾರಣವಾಗುತ್ತದೆ. ಇವೆಲವುಗಳನ್ನು ಗಮನದಲ್ಲಿಟ್ಟುಕೊಂಡು, ಧೂಳಿನ ತೊಂದರೆಗೆ ಅಪಾರ ಕೊಡುಗೆ ನೀಡುತ್ತಿರುವ ಅಂತಹ ಸೈಟ್‌ಗಳನ್ನು ತಕ್ಷಣವೇ ಪರಿಶೀಲಿಸಲು ಮತ್ತು ಅಂತಹ ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸುವಾಗ ಧೂಳು ನಿಗ್ರಹ ಮತ್ತು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡುವಂತೆ ನಿಮಗೆ ಈ ಮೂಲಕ ಸೂಚಿಸಲಾಗಿದೆ. ಹತ್ತಿರದ ಶುದ್ಧ ಮತ್ತು ಉಸಿರಾಡುವ ಗಾಳಿಗೆ ಪ್ರವೇಶವನ್ನು ಹೊಂದಿರಬೇಕು. ಈ ಸಂಬಂಧ ಕೈಗೊಂಡ ಕ್ರಮಗಳ ವರದಿಯನ್ನು ಆದಷ್ಟು ಬೇಗ ಈ ಕಛೇರಿಗೆ ಇಮೇಲ್ ಮೂಲಕ ಸಲ್ಲಿಸಬೇಕು ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಪುರಸಭೆಗೆ ಸೂಚಿಸಿದೆ. ಪುರಸಭೆ ಅಧಿಕಾರಿಗಳು ಯಾವರೀತಿ ಇದನ್ನು ಪರಿಗಣಿಸುತ್ತಾರೆ, ಗುತ್ತಿಗೆದಾರರು ಮೇಲೆ ಯಾವ ರೀತಿ ಕ್ರಮ ತೆಗೆದುಕೋಳ್ಳುತ್ತಾರೆ ಎರಡ ಮೂರು ದಿನಕ್ಕೆ ಮಾತ್ರ ಪಾಲಿಸುತ್ತಾರಾ? ಎಂಬ ಪ್ರಶ್ನೇಗಳು ಸಹಜವಾಗಿ ಮೂಡುತ್ತಿವೆ. ಇದರ ಮದ್ಯೆ ಯುವ ಚೇತನ ಗುತ್ತೆದಾರ ದೂಳಿನ ಸಮಸ್ಯೆ ಬಗ್ಗೆ ಧ್ವನಿ ಎತ್ತಿರುವುದು ಸ್ಥಳಿಯ ಬಿಧಿ-ಬದಿ ವ್ಯಾಪಾರಸ್ಥರು ಹಾಗೂ ನಗರದ ನಿವಾಸಿಗಳು ಮೇಚ್ಚುಗೆ ವ್ಯಕ್ತ ಪಡಿಸಿದ್ದಾರೆ.
