Home ಜಿಲ್ಲೆ ಇಂದು ಪಟ್ಟಣದಲ್ಲಿ ಧರ್ಮಯುದ್ಧ ಹೋರಾಟ.

ಇಂದು ಪಟ್ಟಣದಲ್ಲಿ ಧರ್ಮಯುದ್ಧ ಹೋರಾಟ.

by vegadhut@gmail.com.
0 comments


ಸಿಂದಗಿ : ಪವಿತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ನಿರಂತರ ಅಪಪ್ರಚಾರ, ಹಿಂದುತ್ವದ ವಿರುದ್ಧ ನಡೆದಿರುವ ಷಡ್ಯಂತರ, ಎಡಪಂಥೀಯರ ಸಂಚು, ವಿರೋಧಿಸಿ ದಿನಾಂಕ 30/08/2025 ಶನಿವಾರ ಪಟ್ಟಣದ ಶ್ರೀಬಸವೇಶ್ವರ ವೃತ್ತದಲ್ಲಿ ಭಾರತೀಯ ಜನತಾ ಪಾರ್ಟಿ ಸಿಂದಗಿ ಮಂಡಲ ವತಿಯಿಂದ ಧರ್ಮಯುದ್ಧ ಹೋರಾಟ ಹಮ್ಮಿಕೊಳ್ಳಲಾಗಿದೆ ಈ ಹೋರಾಟಕ್ಕೆ ತಾವೆಲ್ಲರೂ ಬೆಂಬಲಿಸಬೇಕು ಎಂದು ಮಂಡಲ ತಾಲೂಕ ಅಧ್ಯಕ್ಷ ಸಂತೋಷ ಪಾಟೀಲ್ (ಡಂಬಳ) ಮನವಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ತಿಳಿಸಿದ ಅವರು
ಹಿಂದೆ ಶಬರಿಮಲೆ ಅಯ್ಯಪ್ಪ ಸ್ವಾಮೀ ದೇವಸ್ಥಾನ,ತಿರುಪತಿ ತಿಮ್ಮಪ್ಪನ ದೇವಸ್ಥಾನ, ಇಂದು ಧರ್ಮಸ್ಥಳದ ಶ್ರೀ ಮಂಜುನಾಥ್ ಮತ್ತು ಅಣ್ಣಪ್ಪ ಸ್ವಾಮಿ ದೇವಸ್ಥಾನದ ವಿರುದ್ಧ ಇವರು ಮಾಡಿದ ಎಲ್ಲ ಪ್ರಯತ್ನಗಳು ವಿಫಲವಾಗಿವೆ ಹೀಗಾಗಿ ಧರ್ಮದ ಉಳಿವಿಗಾಗಿ ಧರ್ಮ ಯುದ್ದ ಮಾಡುವ ಅನಿವಾರ್ಯತೆ ಎದುರಾಗಿದೆ, ಧರ್ಮದ ಉಳಿವಿಗಾಗಿ ಕೈಜೋಡಿಸಿ ನೈತಿಕ ಬೆಂಬಲ ಗೋಷಿಸೋಣ ಎಂದರು.

ಗಣ್ಯರು ಭಾಗಿ: ಧರ್ಮಯುದ್ಧ ಹೋರಾಟದಲ್ಲಿ ಸಂಸದ ರಮೇಶ ಜಿಗಜಿಣಗಿ, ಜಿಲ್ಲಾಧ್ಯಕ್ಷ ಗುರಲಿಂಗಪ್ಪ ಅಂಗಡಿ, ಮಾಜಿ ಶಾಸಕ ರಮೇಶ ಭೂಸನೂರ, ಪರಿಷತ್ ಸದಸ್ಯ ಅರುಣ ಶಾಹಾಪುರ, ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ. ಹೋರಾಟದಲ್ಲಿ ಸಿಂದಗಿ ಮಂಡಲದ ಎಲ್ಲಾ ಪದಾಧಿಕಾರಿಗಳು, ಮಹಾ ಶಕ್ತಿ ಕೇಂದ್ರದ ಮೋರ್ಚಾ ಪದಾಧಿಕಾರಿಗಳು, ಶಕ್ತಿ ಕೇಂದ್ರದ ಪ್ರಮುಖರು, ಮಾಜಿ ಜಿಲ್ಲಾ ಪಂಚಾಯತ ಸದಸ್ಯರು, ಮಾಜಿ ತಾಲ್ಲೂಕ ಪಂಚಾಯತ ಸದಸ್ಯರು, ಪುರಸಭೆ ಸದಸ್ಯರು,ಗ್ರಾಮ ಪಂಚಾಯತ ಸದಸ್ಯರು, ಗ್ರಾಮೀಣ ಭಾಗದ ಪಕ್ಷದ ಮುಖಂಡರು, ಕಾರ್ಯಕರ್ತರು, ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಹಾಗೂ ಶ್ರೀಧರ್ಮಸ್ಥಳ ಮಂಜುನಾಥ ಸ್ವಾಮಿಯ ಭಕ್ತರು, ಪಾಲ್ಗೊಳ್ಳುತ್ತಿದ್ದಾರೆ ಎಂದು ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಗುರು ತಳವಾರ,ಸಿದ್ರಾಮ ಆನಗೋಂಡ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news