ಇಂಡಿ ಉಪ ವಿಭಾಗದ ಸಿಂದಗಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ದಿನಾಂಕ 18 ರಂದು ಮಧ್ಯಾಹ್ನ ಹಾಗೂ ರಾತ್ರಿ ಸುಮಾರು 5 ರಿಂದ 6 ಸಲ ಸ್ವಲ್ಪ ಭೂಕಂಪನದ ಅನುಭವ ಹಾಗೂ ಭೂಮಿಯಿಂದ ಅನೈಸರ್ಗಿಕ ಸಪ್ಪಳ/ಶಬ್ದ ಕೇಳಿ ಬಂದಿದೆ ಎಂದೂ ಜನರು ಗಾಬರಿ ಪಡುವ ಪ್ರಸಂಗ ಉಂಟಾಗಿರುತ್ತದೆ.
ಸಿಂದಗಿ : ಈ ಒಂದು ಘಟನೆಯಿಂದ ಜನಸಾಮಾನ್ಯರು ಆತಂಕ ಪಡುವ ಅಗತ್ಯವಿಲ್ಲ. ಯಾವುದೇ ರೀತಿಯ ಜೀವಹಾನಿ ಅಥವಾ ಆಸ್ತಿ ಹಾನಿ ವರದಿಯಾಗಿಲ್ಲ. ಭೂಕಂಪನದ ತೀವ್ರತೆ ರಿಕ್ಟರ್ ಮಾಪನಗಳಲ್ಲಿ ದಾಖಲೆಯಾಗಿರುವುದಿಲ್ಲ .
ಜನತೆ ಶಾಂತವಾಗಿರಬೇಕು. ಗೊಂದಲಕ್ಕೊಳಗಾಗಬಾರದು ಆದ್ದರಿಂದ ಯಾವುದೇ ವದಂತಿಗಳಿಗೆ ತುತ್ತಾಗದೆ, ಅಧಿಕೃತ ಮಾಹಿತಿಯನ್ನೇ ನಂಬುವಂತೆ ವಿನಂತಿಸಿಕೊಳ್ಳಲಾಗಿದೆ.

ಅನುರಾಧ ವಸ್ತ್ರದ ಇಂಡಿ ಉಪ ವಿಭಾಗಾಧಿಕಾರಿ
ವಿಜಯಪುರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಈ ರೀತಿಯ ನೈಸರ್ಗಿಕ ವಿದ್ಯಮಾನ ಈ ಮುಂಚೆಯೂ ವರದಿಯಾಗಿದ್ದು ಅದರ ಬಗ್ಗೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ದಿಂದ ಅಧ್ಯಯನ ನಡೆಸಲಾಗಿದೆ.
ಎರಡು ದಿನಗಳ ಮಾಹಿತಿಯನ್ನು ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ರವಾನಿಸಿದ್ದು ಪ್ರಾಧಿಕಾರದ ವತಿಯಿಂದ ಅಧ್ಯಯನ ತಂಡವನ್ನು ಈ ಕುರಿತಂತೆ ಪರಿಶೀಲನೆ ನಡೆಸಲು ಸೂಚಿಸಲಾಗಿದೆ ಎಂದು ತುರ್ತು ಪ್ರಕಟಣೆ ಇಂಡಿ ಉಪ ವಿಭಾಗಾಧಿಕಾರಿ ಅನುರಾಧ ವಸ್ತ್ರದ ಹೇಳಿದ್ದಾರೆ.
ಯಾರಾದರೂ ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಯನ್ನು ಬಿತ್ತರಿಸಿ ಜನರಿಗೆ ಆತಂಕ ಉಂಟಾಗುವಂತೆ ಮಾಡಿದ್ದಲ್ಲಿ ಅವರ ವಿರುದ್ಧ ಕಾನೂನಿನ ಅನ್ವಯ ಕ್ರಮ ಕೈಗೊಳ್ಳಲಾಗುವುದು. -ಅನುರಾಧ ವಸ್ತ್ರದ ಉಪ ವಿಭಾಗಾಧಿಕಾರಿ ಇಂಡಿ
