
ಸಿಂದಗಿ : ರಾಜಶೇಖರ ಕೂಚಬಾಳ ನೇತೃತ್ವದ ತಂಡ ಕನ್ನಡದ ಹಿರಿಮೆ-ಗಿರಿಮೆ ಬೇಳಸಬೇಕೆಂಬ ಸುದ್ದುದೇಶದಿಂದ ಪ್ರತಿಭೆಗಳನ್ನು ಗುರುತಿಸುತ್ತಿರುವುದು ಅತ್ಯಂತ ಸಂತೋಷವಾಗಿದೆ. ಕನ್ನಡ ಮನಸ್ಸುಗಳು ಒಗ್ಗೂಡಿ ಕನ್ನಡ ನಮ್ಮೇಲ್ಲರ ಅಭಿಮಾನವಾಗಲೆಂದು ಕಾರ್ಯಕ್ರಮ ುದ್ಘಾಟಿಸಿದ ಶಾಸಕ ರಮೇಶ ಭೂಸನೂರ ಮಾತನಾಡಿದರು.
ನವೆಂಬರ್ ಕನ್ನಡಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯ ತಿಳಿಸಿ ಅಂಕಣಕಾರ ಮಂಜುನಾಥ ಜುನಗೊಂಡ ಮಾತನಾಡಲು ಪ್ರಾರಂಭಿಸಿದರು. ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು,ಸಿಂದಗಿ ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಹಿನ್ನಲ್ಲೆ ನಗರದ ಅಣ್ಣ ಬಸವೇಶ್ವರ ವೃತ್ತದಲ್ಲಿ ನಡೆಯತ್ತಿರುವುದು ಸಂತಸದ ವಿಷಯ. ಇಗಿನ ಮಕ್ಕಳಿಗೆ ಮಮ್ಮಿ ,ಪಪ್ಪಾ ಎಂಬ ಸಂಸ್ಕೃತ್ತಿ ಬದಲಿಸಬೇಕಾಗಿದೆ. ಮಮ್ಮಿ ಎಂದರೆ ಈಜಿಪ್ತ ನಗರದಲ್ಲಿ ಸತ್ತ ಹೇಣಕ್ಕೆ ಮಮ್ಮಿ ಎಂದು ಕರೆಯಲಾಗುತ್ತದೆ ಆ ಪದವನ್ನು ಇಂದಿನ ಮಕ್ಕಳು ಹೆತ್ತ ತಾಯಿಗೆ ಬಳಸುತ್ತಿರುವುದು ಸರಿಯಾದದ್ದಲ್ಲ.
ದರಾ ಬೇಂದ್ರೆ, ಕುವೆಂಪು ರಂತಹ ಮಹಾನ್ ಕವಿಗಳ ಬಗ್ಗೆ ನಾವು ಸರಾಗವಾಗಿ ಮಾತನಾಡ ಬಲ್ಲೆವು. ಆದರೆ ಬೇಂದ್ರೆ ಅವರಿಗಿಂತಲು ಮೊದಲು ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಬೇಕಿದ್ದ ವಿಜಯಪುರ ಜಿಲ್ಲೆಯ ಹಲಸಂಗಿಯ ಮಧುರ ಚನ್ನರ ಬಗ್ಗೆ ನಾವು ತಿಳಿದುಕೊಂಡಿಲ್ಲ ಮಧುರಚನ್ನರು ತೀರಿ ಕೊಂಡಾಗ ನಮ್ಮ ಚನ್ನಮಲ್ಲಪ್ಪ ಬಿಟ್ಟು ಹೋದಾ ಎಂದು ಅಳುತ್ತಿರುವವರನ್ನು ಉದ್ದೇಶಿಸಿ ದರಾ ಭೇಂದ್ರೆ ಅವರು ಚನ್ನಮಲ್ಲಪ್ಪ ಮಣ್ಣಲ್ಲಿ ಬೆರೆತು ಆ ಮಣ್ಣಿಂದ ಬರುವ ಪಸಲಿನಲ್ಲಿ ರಾಜ್ಯದ ಜನರಿಗೆ ಅನ್ನವಾಗಿ ಸಾಹಿತ್ಯ ವದಗಿಸುತ್ತಾನೆ ಎಂದು ಹೇಳಿದ ಮಾತು ನೆನಪಿಸಿದರು. ಜಾನಪದ ಭಾಷೆ ಅರ್ಥಮಾಡಿಕೊಂಡಾಗ ಮಾತ್ರ ಕನ್ನಡ ಸುಲಭ ವಾಗುತ್ತದೆ. ನಮ್ಮ ಹೇಣ್ಣು ಮಗಳು ಬೇರೆ ರಾಜ್ಯಕ್ಕೆ ಮದುವೆ ಮಾಡಿಕೊಂಡು ಹೋದರೆ ಅಲ್ಲಿನ ಭಾಷೆ ಕಲಿತುಕೊಂಡು ಬರುತ್ತಾಳೆ ಅಲ್ಲಿನ ಹೇಣ್ಣು ಮಗಳು ನಮ್ಮ ರಾಜ್ಯಕ್ಕೆ ಬಂದರೆ ನಮ್ಮನ್ನು ಅವರ ಭಾಷೆ ಕಲಿಸಲು ಪ್ರಯತ್ನಿಸುತ್ತಾಳೆ ನಮ್ಮಲ್ಲಿ ಕನ್ನಡ ಅಭಿಮಾನ ಕಮ್ಮಿಯಾಗುತ್ತಿದೆ ಹೊರ ರಾಜ್ಯದವಿರಗೆ ಕನ್ನಡ ಕಲಿಸಿದಾಗ ಕನ್ನಡ ದೇಶಾದ್ಯಂತ ಪಸರಿಸುತ್ತದೆ ಎಂದರು.
ಕಾವೇರಿ ವಿವಾದ ವಾದಾಗ ಮೈಸೂರು ಕರ್ನಾಟಕದ ಜನತೆ ಬೆಳಗಾವಿ ವಿವಾದ ವಾದಾಗ ಉತ್ತರ ಕರ್ನಾಟಕ ಜನರು ಹೋರಾಟ ಮಾಡುವುದು ಸರಿಯಾದದ್ದಲ್ಲ ನಮ್ಮ ನಾಡು, ನುಡಿ, ಜಲ ಕ್ಕೆ ತೊಂದರೆ ಬಂದಾಗ ಎಲ್ಲರೂ ಒಗ್ಗಟ್ಟಾಗಿ ನಿಲ್ಲದೆ ಇರುವುದು ಯಾವ ನ್ಯಾಯ ಎಂದು ಉಪನ್ಯಾಸ ನೀಡಿದ ಮಂಜುನಾಥ ಜುನಗೊಂಡ ಬೇಸರ ವ್ಯಕ್ತಪಡಿಸಿದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ಬಸವಣ್ಣನವರ ಆಶಯಗಳನ್ನು ನಾವು ಅಪ್ಪಿಕೊಂಡಿಲ್ಲಾ ನಾವು ಬದಲಾಗಬೇಕಿದೆ. ಅಣ್ಣ ಬಸವಣ್ಣನವರ ತತ್ವ ಆದರ್ಶಗಳನ್ನು ಪಾಲಿಸಬೇಕಾಗಿದೆ. ಕವಿಗಳು, ಸಾಹಿತಿಗಳು, ಬರೆದ ಸಾಲುಗಳು ತಾವು ಮುದ್ರಿಸಲು ಆಗದಿದ್ದರೆ ನಮ್ಮನ್ನು ಸಂಪರ್ಕಿಸಿ ನಾವು ಮುದ್ರಿಸುವೆವು ಎಂದು ಹೇಳಿದರು.
ಹಿರಿಯ ಸಾಹಿತಿಗಳಾದ ಚನ್ನಪ್ಪ ಕಟ್ಟಿ ಮಾತನಾಡಿ ತಾಲೂಕಿನ ಸಾಂಸ್ಕೃತಿಕ ಸಂಘಟನೆಗಳು ಒಂದೂಗೂಡಿಸಿದ ಕಸಾಪ ಸಂಘಟಕರಿಗೆ ಅಭೀನಂದನೆ ಸಲ್ಲಿಸಿ, ಕನ್ನಡ ಎಂದರೆ ಭಾಷೆ, ಭೂ-ಪ್ರದೇಶ, ಹಾಗೂ ಕನ್ನಡಿಗರು ಎಂದರ್ಥ ಕನ್ನಡ ಯಾವತ್ತೂ ಒಬಂಟ್ಟಿ ಅಲ್ಲಾ ನಮ್ಮ ಭಾವನೆಗಳಿಗೆ ದಕ್ಕೆ ಬಂದರೆ ಕನ್ನಕ – ಕನ್ನಡ ಬನ್ನಿ ನಮ್ಮ ಸಂಗಡ ಘೋಷಣೆ ಕೂಗಬೇಕಾಗುತ್ತದೆ. ಮುತ್ತು ಪೋಣಿಸಿದಾಗ ಕಾಣುವ ಹಾರದಂತೆ ಕನ್ನಡ ಪದಗಳು ಕಾಣುತ್ತವೆ ಆ ಶಕ್ತಿ ಕನ್ನಡ ಅಕ್ಷರಕ್ಕೆ ಮಾತ್ರ ಇದೆ. ಮತ್ತಷ್ಟು ಯುವ ಪ್ರತಿಭೆಗಳು ಕಸಾಪ ಬೆಳಕಿಗೆ ತರವಲ್ಲಿ ಕಸಾಪ ಕಾರ್ಯನಿರ್ವಹಿಸಲೆಂದು ಹಾರೈಸಿದರು. ಶ್ರೀ ಷ.ಬ್ರ. ಅಭಿನವ ರುದ್ರಮುನಿ ಶಿವಾಚಾರ್ಯರು ಹಿರೇಮಠ ಯಂಕಂಚಿ ಪೂಜ್ಯರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶಿವಾನಂದ ಪಾಟೀಲ ಸೋಮಜಾಳ ಮಾತನಾಡಿದರು.
ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡ ವಿಧ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಿದರು ಕ್ಷೇತ್ರದ ಅತ್ಯುತ್ತಮ ಕನ್ನಡ ಶಾಲೆಯಂದು ಅಂತರಗಂಗಿ ಸರಕಾರಿ ಶಾಲೆಯನ್ನು ಗೌರವಿಸಿಲಾಯಿತು. ರಾಗರಂಜನಿ ಸಂಗೀತ ಕೇಂದ್ರದಿಂದ ಹಾಡುಗಳು ಹಾಗೂ ಎಬಿಸಿಡಿ ನೃತ್ಯ ತಂಡದಿಂದ ನೃತ್ಯಗಳು ಜರುಗಿದವು. ಗೌರವ ಸಲಹೆಗಾರ ಅಶೋಕ ಗಾಯಕವಾಡ, ಕಾನಿಪ ಅಧ್ಯಕ್ಷ ಆನಂದ ಶಾಬಾದಿ, ಕನ್ನಡ ಪರ ಹೋರಾಟಗಾರ ಸಂತೋಷ ಪಾಟೀಲ ಡಂಬಳ, ಶಿವಕುಮಾರ ಕಲ್ಲೂರ, ಹಣಮಂತ ಸುಣಗಾರ, ಶೈಲಜಾ ಸ್ಥಾವರಮಠ, ಶಿಲ್ಪಾ ಕುದರಗೊಂಡ, ವೇದಿಕೆಯಲ್ಲಿದ್ದರು. ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷ ರಾಜಶೇಖರ ಕೂಚಬಾಳ ಸ್ವಾಗತಿಸಿದರು ರವಿ ಗೋಲ್ಲಾ ಗುರುಗಳು ಕಾರ್ಯಕ್ರಮ ನಿರೂಪಿಸಿದರು.

