
ಸಿಂದಗಿ : ತಾಲೂಕಿನ ಮಂಗಳೂರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಅಂಬಾ ಭವಾನಿ ದೇವಿಯ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ 2ಲಕ್ಷ 59ಸಾವಿರ ರೂ. ಮೊತ್ತದ ಡಿಡಿ ಯನ್ನು ನಿರ್ದೇಶಕ ಗಣೇಶ್ ಮರಾಠೆ ಕಮಿಟಿಯ ಸದಸ್ಯ ಆರ್.ಟಿ ಕಾಂಬಳೆ ಅವರಿಗೆ ಹಸ್ತಾಂತರಿಸಿದರು.
ಗ್ರಾಮೀಣ ಪ್ರದೇಶದ ಏಳಿಗೆಗಗಾಗಿ ಈ ಯೋಜನೆಯು ಗ್ರಾಮೀಣ ಪರಿವರ್ತನೆಗೆ ಹೊಸ ಮೈಲುಗಲ್ಲು. ಆರ್ಥಿಕ ಸಬಲತೆ, ಕೃಷಿ, ಸಾಮಾಜಿಕ ಕ್ಷೇತ್ರ, ಜನರ ಜೀವನಮಟ್ಟ ಸುಧಾರಣೆ ಸೇರಿದಂತೆ ಹಲವು ಸಮಾಜಮುಖಿ ಚಿಂತನೆಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದೆ ಎಂದು ಯೋಜನೆಯ ನಿರ್ದೇಶಕ ಗಣೇಶ ಮರಾಠೆ ಹೇಳಿದರು.
ತಾಲೂಕಿನ ಮಂಗಳೂರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಅಂಬಾ ಭವಾನಿ ದೇವಿಯ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ 2ಲಕ್ಷ 59ಸಾವಿರ ರೂ. ಮೊತ್ತದ ಡಿಡಿಯನ್ನು ಹಸ್ತಾಂತರಿಸಿ ಮಾತನಾಡಿದರು.
ಈ ವೇಳೆ ಕಮಿಟಿಯ ಸದಸ್ಯ ಆರ್.ಟಿ ಕಾಂಬಳೆ ಊರಿನ ಗಣ್ಯರಾದ ಮಲ್ಲಯ್ಯ ಸ್ವಾಮಿ ಹಿರೇಮಠ, ಯೋಜನೆಯ ಯೋಜನಾಧಿಕಾರ ಗಿರೀಶ್ ಕುಮಾರ್ ಎಂ, ಕಮಿಟಿಯ ಸದಸ್ಯ ನಾಮದೇವ ಕಾಂಬಳೆ, ಮಲ್ಲಿಕಾರ್ಜುನ ಕಾಂಬಳೆ, ಭೀಮರಾವ್ ಕಾಂಬಳೆ, ಮಾರುತಿ ಕಾಂಬಳೆ, ಅಶೋಕ್ ಕಾಂಬಳೆ, ಅಶೋಕ ಕಾಂಬಳೆ, ಸೇರಿದಂತೆ ಕಮಿಟಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.
