
ಸಿಂದಗಿ : ಪಟ್ಟಣದಲ್ಲಿ 2023-24 ನೇ ಸಾಲಿನಲ್ಲಿ ಮನೆಗಳ ಆಸ್ತಿ ತೆರಿಗೆ, ವಾಣಿಜ್ಯ ತೆರಿಗೆ ಪುರಸಭೆಗೆ ಪಾವತಿಸಿ ರಿಯಾಯಿತಿಯ ಸದುಪಯೋಗ ಪಡಿಸಿಕೊಳ್ಳಬೇಕೆಂದು ಮುಖ್ಯಾಧಿಕಾರಿ ಶ್ರೀ ಮೋಹನ.ವ್ಹಿ.ಜಾಧವ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು 2023-24 ನೇ ಸಾಲಿನ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಏಪ್ರೀಲ್ ಒಂದರಿAದ ಮನೆಗಳು, ವಾಣಿಜ್ಯ ಕಟ್ಟಡಗಳು ಹಾಗೂ ಖಾಲಿ ಜಾಗೆಗಳಿಗೆ ತೆರಿಗೆಯನ್ನು ಪರಿಷ್ಕರಣೆ ಮಾಡಿದೆ.
ಹಾಗಾಗಿ ಏಪ್ರೀಲ್ 30 ರ ಒಳಗೆ ಆಸ್ತಿ ಕರ, ಮನೆ ಕರ ಪಾವತಿಸಿದರೆ ಶೇ 5 ರಷ್ಟು ರಿಯಾಯಿತಿ ನೀಡಲಾಗುವುದು. ಮತ್ತು ಮೇ ಹಾಗೂ ಜೂನ್ ತಿಂಗಳಲ್ಲಿ ಆಸ್ತಿ ತೆರಿಗೆ ಭರಣಾ ಮಾಡಿದವರಿಗೆ ದಂಡ ಇಲ್ಲದೇ ಕರ ಪಾವತಿಸಲು ಅವಕಾಶ ಮಾಡಿಕೊಡಲಾಗಿದೆ. ಪಟ್ಟಣದ ಆಸ್ತಿ ಮಾಲೀಕರು ಬಾಕಿ ಇರುವ ನೀರಿನ ಕರ, ಆಸ್ತಿ ತೆರಿಗೆ, ಮಳಿಗೆ ಬಾಡಿಗೆ, ಲೈಸನ್ಸ್ ಫೀ ಮೊದಲಾದ ಕರಗಳನ್ನು ಪುರಸಭೆಗೆ ಸಂದಾಯ ಮಾಡಿ ರಿಯಾಯಿತಿಯ ಸದುಪಯೋಗ ಪಡಿಸಿಕೊಳ್ಳಬೇಕೆಂದು ಮುಖ್ಯಾಧಿಕಾರಿ ಶ್ರೀ ಮೋಹನ.ವ್ಹಿ.ಜಾಧವ ಮನವಿ ಮಾಡಿದ್ದಾರೆ
