
ಸಿಂದಗಿ : ತಾಲೂಕಿನ ಬೂದಿಹಾಳ ಪಿ ಎಚ್ ಗ್ರಾಮದ ದುಂಡಪ್ಪ ಚೌಧರಿ ಅವರ ಮನೆಯ ಹತ್ತಿರ ಬೃಹತ ಆಕಾರದ ಹಗೆಯು ಬಾಯಿ ತೇರೆದು ನಿಂತಿದೆ. ಜನತೆ ರಸ್ತೆಯ ಮೇಲೆ ಎಚ್ಚರದಿಂದ ನಡೆಯಬೇಕಾಗಿದೆ . ಗ್ರಾಮದ ಪ್ರಮುಖ ರಸ್ತೆಯ ಮೇಲೆ ಹಗೆಗಳು ಬಾಯಿತೆರೆದು ನಿಂತಿರುವುದು ಸರ್ವೆ ಸಾಮಾನ್ಯವಾಗಿದೆ. ಕೇಲವು ತಿಂಗಳ ಹಿಂದೆ ಗ್ರಾಮದಲ್ಲಿ ಶುದ್ದು ಕುಡಿಯುವ ನೀರಿನ ಪೈಪ ಲೈನ ಮಾಡಲು ರಸ್ತೆಗಳು ಅಗೆದು ಪೈಪ ಹಾಕಿ ಅರ್ದ ಮರ್ದ ಮುಚ್ಚಿ ಕೈ ತೋಳದು ಕೊಂಡು ಹೋಗಿದ್ದಾರೆ. ಈ ಹಿಂದೆ ಪತ್ರಿಕೆಯಲ್ಲಿ ಹಗೆಗಳು ಬಾಯಿ ತೆರೆದು ನಿಂತಿಕೊಂಡಿರುವ ಸುದ್ದಿ ಮಾಡಿರುವದರಿಂದ ಇದಕ್ಕೆ ಸಂಬಂದ ಪಟ್ಟ ಅಧಿಕಾರಿಗಳು ಸ್ಪಂದನೆ ಮಾಡಿ ಅರ್ದ ಮರ್ದ ಮಣ್ಣು ಹಾಕಿದರಿಂದ ಈ ವರ್ಷ ಸತತ ಮಳೆ ಬಂದಿದರಿಂದ ಮಣ್ಣು ಸವಕಳಿಯಾಗಿ ಎಲ್ಲಾ ಮಣ್ಣು ಹೋಗಿದೆ.
ರಸ್ತೆಯ ಮೇಲೆ ಶಾಲಾ ಮಕ್ಕಳು ಹಿರಿಯರು ನಡೆದು ಕೊಂಡು ಬರುತ್ತಾರೆ .ರೈತರು ತಮ್ಮ ಜಮೀನಿಗೆ ಬಂಡೆ ಕಟ್ಟಿಕೊಂಡು ಹೋಗಿ ಬರುವದು ತುಂಬಾ ತೊಂದರೆಯಾಗಿದೆ ಒಂದು ವೇಳೆ ಆಯಾ ತಪ್ಪಿದರೆ ಹಗೆಯಲ್ಲಿ ಬಿದ್ದು ಪ್ರಾಣ ಕಳೆದು ಕೊಳ್ಳುವದು ಗ್ಯಾರಂಟಿಯಾಗಿದೆ. ಬೂದಿಹಾಳ ಪಿ ಎಚ್ ಗ್ರಾಮವು ಬಂದಾಳ ಗ್ರಾಮ ಪಂಚಾಯತ ವ್ಯಾಪ್ತಿಗೆ ಸೇರುತ್ತದೆ ಈಗಾಗಲೇ ಗ್ರಾಮ ಪಂಚಾಯತವರಿಗೆ ಮಾಹಿತಿ ನೀಡಿದರು ಕೂಡಾ ಯಾವುದೇ ಪ್ರಯೋಜನೆ ಆಗಿಲ್ಲ ಎಂದು ಗ್ರಾಮಸ್ಥರಾದ ಬಸನಗೌಡ ಮುರಾಳ ಹಾಗೂ ಮಕ್ತುಂಬಿ ಕರ್ಜಗಿ ಹೇಳಿದರು ಇದೆ ರೀತಿ ಹಗೆ ಮುಚ್ಚದೆ ಹೋದರೆ ಮುಂದೆ ಆಗುವ ಅನಾಹುತಕ್ಕೆ ನೇರ ಹೊಣೆ ಗ್ರಾಮ ಪಂಚಾಯಿತಿಯವರು ಆಗುತ್ತಾರೆ ಎಂದು ಆರೋಪಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಸೂಕ್ತ ಕ್ರಮಕೈಗೊಳ್ಳುತ್ತಾರೋ ಅಥವಾ ಇಲ್ಲವೋ ಎಂದು ಕಾದು ನೋಡಬೇಕಾಗಿದೆ.
ಸಂಬಂಧಪಟ್ಟ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿ ಜನರಿಗೆ ತೊಂದರೆ ಆಗದಂತೆ ಕೆಲಸ ಮಾಡಲು ಸೂಚಿಸುವೆ.
– ಬಾಬು ರಾಠೋಡ ಕಾರ್ಯನಿರ್ವಾಹಕ ಅಧಿಕಾರಿ ತಾಲೂಕು ಪಂಚಾಯತ ಸಿಂದಗಿ

