
ಸಿಂದಗಿ : ಯುವಾ ಬ್ರಿಗೇಡ್ ತಂಡದ ವತಿಯಿಂದ ಪ್ಲಾಸ್ಟಿಕ್ ಬಳಕೆಯ ಪರಿಣಾಮದ ಕುರಿತಾಗಿ ಜಾಗೃತಿಯ ಕಾರ್ಯಕ್ರಮವನ್ನು ಸಿಂದಗಿ ತಾಲೂಕಿನ ನಾಗಾವಿ ಬಿಕೆ, ಮೊರಟಗಿಯ ಕಲ್ಪವೃಕ್ಷ ಪಿಯು ಕಾಲೆಜು, ಜೇರಟಗಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಚಂದ್ರಶೇಖರ ನಂಜನಗೂಡು ಅವರು ಪ್ರತಿ ನಿಮಿಷದಲ್ಲಿ ಒಂದು ಲಕ್ಷ ಪ್ಲಾಸ್ಟಿಕ್ ಬಾಟಲಿಗಳು ಬಳಕೆಯಾಗಿ ಬಿಸಾಕುತ್ತಿದ್ದೆವೆ. ಪ್ಲಾಸ್ಟಿಕ್ ಬಳಕೆಯಿಂದ ಇಡಿ ಸಮುದ್ರ, ಪರಿಸರ, ಭೂಮಿ ಎಲ್ಲವೂ ಹಾಳಾಗುತ್ತಿದ್ದೆ. ಪರಿಸರ ಉಳಿಸುವದು ನಮ್ಮೆಲ್ಲರ ಹೊಣೆ, ನಮ್ಮ ಪೂರ್ವಜರು ನಮಗೆ ಸ್ವತಂತ್ರ ನೀಡಿದರು ನಾವೂ ಮುಂದಿನ ಪಿಳಿಗೆಗೆ ಒಳ್ಳೆಯ ಪರಿಸರ ನೀಡೊಣ ಎಂದು ತಿಳಿಸಿದರು.

ಸಂತೆಗೆ, ಕಿರಾಣಿ ಸಾಮಗ್ರಿ ಖರಿದಿಗೆ ಹೊದಾಗ ಮತ್ತು ಯಾವುದಾದರೂ ಬಿಸಿ ತಿನ್ನುವ ಪದಾರ್ಥಗಳನ್ನು ಮನೆಗೆ ತರುವಾಗ ಮನೆಯಿಂದ ಚಿಲವನ್ನು ತೆಗೆದುಕೊಂಡು ಹೊಗಬೇಕು ಪ್ಲಾಸ್ಟಿಕ್ ನ ಚೀಲದಲ್ಲಿ ಯಾವದನ್ನು ತರಬಾರದು ಇದರಿಂದ ಆಹಾರದಲ್ಲಿ ರಸಾಯನಿಕಗಳು ಬೆರೆತು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದಷ್ಟು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ವಿಭಾಗ ಸಹ ಸಂಚಾಲಕರ ರಾಜು ಪಾಟೀಲ ಅವರು ತಿಳಿಸಿದರು.
ಶ್ರೀ ಚಕ್ರವರ್ತಿ ಸೂಲಿಬೆಲೆಯವರ ನಿರ್ಮಿಸಿರುವ ಪ್ಲಾಸ್ಟಿಕ್ ಬಳಸದಿರಿ ಭೂಮಿ ಉಳಿಸಿ ಅಭಿಯಾನ ಕಿರು ಚಿತ್ರವನ್ನು ಪ್ರದರ್ಶಿಸಲಾಯಿತು.
ತಮ್ಮ ಶಾಲೆಯಲ್ಲಿ ಕೂಡಾ ಈ ಒಂದು ಕಿರು ಚಿತ್ರವನ್ನು ಪ್ರದರ್ಶಿಸುವ ಅಭಿಲಾಷೆ ಹೊಂದಿದವರು ವಿಭಾಗ ಸಹ ಸಂಚಾಲಕರು ರಾಜು ಪಾಟೀಲ(9611042409) ಅವರನ್ನು ಸಂಪರ್ಕಿಸಿದರೆ ಅವರು ಬಂದು ಕಾರ್ಯಕ್ರಮವನ್ನು ಉಚಿತವಾಗಿ ಪ್ರದರ್ಶನವನ್ನು ಮಾಡಿಸುತ್ತಾರೆ ಎಂದು ಯುವಾ ಬ್ರಿಗೇಡ್ ತಂಡ ತಿಳಿಸಿದೆ.

