Home News ಪತ್ರಿಕಾ ಭವನ ಕಾಮಗಾರಿಗೆ ಭೂಮಿಪೂಜೆ ನೇರವೆರಿಸಿದ ಶಾಸಕ ಭೂಸನೂರ

ಪತ್ರಿಕಾ ಭವನ ಕಾಮಗಾರಿಗೆ ಭೂಮಿಪೂಜೆ ನೇರವೆರಿಸಿದ ಶಾಸಕ ಭೂಸನೂರ

by vegadhut@gmail.com.
0 comments

ಸಿಂದಗಿ: ಪತ್ರಕರ್ತರ ಬಹು ದಿನದ ಬೇಡಿಕೆಯಾಗಿದ್ದ ಪತ್ರಿಕಾ ಭವನಕ್ಕೆ ಎಸ್.ಎಫ್.ಸಿ ಅನುದಾನದಲ್ಲಿ 20 ಲಕ್ಷರೂ ಮಂಜೂರು ಮಾಡಲಾಗಿದೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.
ಬುಧವಾರದಂದು ಪಟ್ಟಣದ ಬಸ್ ನಿಲ್ದಾಣದ ಬಳಿ ನಿರ್ಮಾಣವಾಗುತ್ತಿರುವ ಪತ್ರಿಕಾ ಭವನದ ಭೂಮಿ ಪೂಜೆ ಮಾಡಿ ಮಾತನಾಡಿದ ಅವರು ಸುದ್ದಿ ಮಾಡುವ ವರಿದಗಾರಿರಿಗೆ ಒಂದು ನಿರ್ದಿಷ್ಟ ಸ್ಥಳದ ಅವಶ್ಯಕತೆಯಿತ್ತು ಆ ಬೇಡಿಕೆಯನ್ನು ಈ ದಿನ ಈಡೇರಿಸಿದ್ದೇವೆ ಮತ್ತು ಅತೀ ಶೀಘ್ರದಲ್ಲಿ ಈ ಪತ್ರಿಕಾ ಭವನ ಲೋಕಾರ್ಪಣೆಯಾಗಲಿದೆ ಎಂದು ಹೇಳಿದರು.

ಮಾತನಾಡಿದ ಪುರಸಭೆ ಅಧ್ಯಕ್ಷ ಹಣಮಂತ ಸುಣಗಾರ ಪತ್ರಿಕಾ ಭವನಕ್ಕೆ ಪುರಸಭೆ ವತಿಯಿಂದ ಕಾಂಪೌಂಡ್ ಕಟ್ಟಲು ೫ ಲಕ್ಷ ರೂ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಪ್ರೆಸ್ ಕ್ಲಬ್ ಅಧ್ಯಕ್ಷ ಶಾಂತೂ ಹಿರೇಮಠ, ಕಾ.ನಿ.ಪ ಸಂಘದ ಅಧ್ಯಕ್ಷ ಆನಂದ ಶಾಬಾದಿ, ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ ಪತ್ರಕರ್ತರಾದ ರವಿಚಂದ್ರ ಮಲ್ಲೇದ, ಸುದರ್ಶನ ಜಂಗಣ್ಣಿ, ಮಹಾಂತೇಶ ನೂಲಾನವರ, ಶಿವಾನಂದ ಆಲಮೇಲ, ಗುರುರಾಜ ಮಠ, ಗುಂಡು ಕುಲಕರ್ಣಿ, ರಮೇಶ ಪೂಜಾರ, ರಾಜೂ ಬೈರಿ, ಶಾಂತವೀರ ಹಿರೇಮಠ, ಭೋಜರಾಜ ದೇಸಾಯಿ, 15ನೇ ವಾರ್ಡಿನ ಸದಸ್ಯರ ಪ್ರತಿನಿಧಿ ಬಸವರಾಜ ಡೋಣುರ, ಗುತ್ತಿಗೆದಾರ ಶಂಕರ ಬಳ್ಳುಂಡಗಿ ಇದ್ದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news