ಇಂದು ಆಲಮೇಲ ಪಟ್ಟಣ ಪಂಚಾಯತ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಯಲಿದ್ದು ಕಾಂಗ್ರೆಸ್ ಚುಕ್ಕಾಣಿ ಹಿಡಿಯಲು ಬಹುತೇಕ ಯಶಸ್ವಿಯಾಗುವುದೆಂದು ತಿಳಿದಿದೆ.
ಆಲಮೇಲ : ಪಟ್ಟಣ ಪಂಚಾಯತ ಚುನಾವಣೆಗೆ ಈಗಾಗಲೇ ನಾಮಾಂಕಿತ ಸಲ್ಲಿಸಿದ್ದು , ಕಾಂಗ್ರೆಸ್ ಪಕ್ಷದ ಸಾಧಿಕ್ ಸುಂಬಡ ಅವಿರೋಧವಾಗಿ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಪಕ್ಷದ ಸುಮಾ ವೀರಭದ್ರ ಕತ್ತಿ ನಾಮಾಂಕಿತ ಸಲ್ಲಿಸಿದ್ದಾರೆ. ಮತ್ತಾರು ನಾಮಾಂಕಿತ ಸಲ್ಲಿಸದ ಕಾರಣ ಅವಿರೋಧ ಆಯ್ಕೆ ನಿಶ್ಚಿತವಾಗಿದೆ. ಇನ್ನು ದಾಖಲಾತಿಗಳು ಪರಿಶೀಲನೆ ಹಾಗೂ ತಾಲೂಕು ದಂಡಾಧಿಕಾರಿ ಮತ್ತು ಚುನಾವಣಾಧಿಕಾರಿ ವಿಜಯಕುಮಾರ್ ಅವರ ಘೋಷಣೆ ಬಾಕಿ ಇದೆ.
ಸದಸ್ಯರ ಹೊಂದಾಣಿಕೆ ಕಾಂಗ್ರೆಸ್ – ಬಿಜೆಪಿ ಕಾರ್ಯಕರ್ತರು ಕಕ್ಕಾ-ಬಿಕ್ಕಿ
ಮೊದಲ ಹದಿನೈದು ತಿಂಗಳು ಕಾಂಗ್ರೆಸ್ ಹಾಗೂ ದ್ವೀತಿಯ ಹದಿನೈದು ತಿಂಗಳು ಬಿಜೆಪಿಗೆ ಅಧಿಕಾರ ಎಂಬ ಸದಸ್ಯರ ಹೊಂದಾಣಿಕೆಯಿಂದ ಮತಕ್ಷೇತ್ರದಲ್ಲಿ ದಾಯಾದಿಗಳಂತಿದ್ದ ಕಾಂಗ್ರೆಸ್ ಪಕ್ಷ ಹಾಗೂ ಬಿಜೆಪಿ ಪಕ್ಷದ ಮುಖಂಡರು ಸುಮ್ಮನಾಗಿದ್ದಾರೆ. ಇದರಿಂದಾಗಿ ಯಾವುದೇ ಫಲಾಪೇಕ್ಷೆ ಇಲ್ಲದೇ ಪಕ್ಷಕ್ಕಾಗಿ ದುಡಿಯುತ್ತಿರುವ ಕಾರ್ಯಕರ್ತರು ಗೊಂದಲದಲ್ಲಿ ಸಿಕ್ಕಂತಾಗಿದೆ.
” ಊರಿನ ಹಿರಿಯರು ಮುಖಂಡರು ಸೇರಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿರುವುದರಿಂದ ಅಭಿವೃದ್ಧಿಯ ದೃಷ್ಟಿಯಿಂದ ನಮ್ಮಗೆ ಬೆಂಬಲಿಸಿದ್ದಾರೆ. ಯಾವುದೇ ಮೈತ್ರಿ ಇಲ್ಲ.
– ಅಶೋಕ ಮನಗೂಳಿ ಶಾಸಕರು ಸಿಂದಗಿ
” ಸದಸ್ಯರು ಹೊಂದಾಣಿಕೆ ಮಾಡಿಕೊಂಡಿದ್ದಾರೆ ಮೋದಲ ಅವಧಿ ಕಾಂಗ್ರೆಸ್ ಬಿಟ್ಟಿರುವುದು ಹಾಗೂ ಹದಿನೈದು ತಿಂಗಳ ನಂತರ ಬಿಜೆಪಿಗೆ ಅಧಿಕಾರ ಹಸ್ತಾಂತರಿಸಬೇಕೆಂದು ಹೊಂದಾಣಿಕೆ ಮಾಡಿಕೊಂಡಿದ್ದಾರೆ ಇದರಲ್ಲಿ ನಮ್ಮ ಪಾತ್ರವಿಲ್ಲ ಅಭಿವೃದ್ಧಿ ಬಯಸುವೆವು.
– ರಮೇಶ ಭೂಸನೂರ ಮಾಜಿ ಶಾಸಕ.
