Home News ಕಲೆ ಮತ್ತು ಕಾಯಕದ ಮುಖಾಂತರ ಸಮಾಜ ಸೇವೆ ಮಾಡುವ ನಾವು ನಮ್ಮನ್ನೇ ಮರೆತಿದ್ದೇವೆ ; ಬಡಿಗೇರ

ಕಲೆ ಮತ್ತು ಕಾಯಕದ ಮುಖಾಂತರ ಸಮಾಜ ಸೇವೆ ಮಾಡುವ ನಾವು ನಮ್ಮನ್ನೇ ಮರೆತಿದ್ದೇವೆ ; ಬಡಿಗೇರ

by vegadhut@gmail.com.
0 comments

ಸಿಂದಗಿ: ಉ.ಕರ್ನಾಟಕ ವಿಶ್ವಕರ್ಮ ಯುವ ಬರಹಗಾರ ಹಾಗೂ ಸಂಶೋಧಕರ ನಾಲ್ಕನೇ ಸಮಾವೇಶದಲ್ಲಿ ಮಾತನಾಡಿದ ಅವರು ತಂತ್ರಜ್ಞಾನ ಇಲ್ಲದ ಕಾಲದಲ್ಲೇ ವಾಸ್ತು ಶಿಲ್ಪದ ಕಲೆಯನ್ನು ಪರಿಚಯಿಸಿದವರು ಈ ಸಮಾಜದವರು. ಇಂತಹ ಬಹು ಪ್ರತಿಭೆಯುಳ್ಳ ಯವ ಪೀಳಿಗೆಯನ್ನು ಮುಖ್ಯವಾಹಿಗೆ ತರುವ ಕಾರ್ಯವು ಶ್ಲಾಘನೀಯವಾದದ್ದು ಎಂದು ಹೇಳಿದರು.
ಕಲೆಯೆಂಬುದು ಶ್ರೇಷ್ಠವಾದ್ದದ್ದು ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಪ್ರತಿ ಸಮಾಜದ ಕರ್ತವ್ಯವಾಗಿದೆ ಎಂದರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ಪಿ.ಬಿ. ಬಡಿಗೇರ ವಿಶ್ವಕರ್ಮ ಎಂಬ ಸಮಾಜದಲ್ಲಿ ಇಡೀ ವಿಶ್ವವೇ ಅಡಕವಾಗಿದೆ ಕುಶಲ ಕಲೆ ಮತ್ತು ಕಾಯಕದ ಮೂಲಕ ಎಲ್ಲಾ ಸಮಾಜಕ್ಕೆ ಸೇವೆ ನೀಡುವ ನಾವುಗಳು ನಮ್ಮನ್ನೇ ಮರೆತಿದ್ದೇವೆ. ಪ್ರಾಧ್ಯಾಪಕ ವಿರೇಶ ಬಡಿಗೇರ ಮತ್ತು ತಂಡ ಸಮಾವೇಶ ಮಾಡುವ ಮೂಲಕ ಸಮುದಾಯದ ಜನರನ್ನು ಜಾಗೃತ ಮಾಡುವ ಕಾರ್ಯ ಮಾಡುತ್ತಿದ್ದಾರೆ ಎಂದರು.
ಡಾ.ವಾಸುದೇವ ಬಡಿಗೇರ ಮತ್ತು ಪ್ರಾಧ್ಯಾಪಕ ವಿರೇಶ ಬಡಿಗೇರ ಮಾತನಾಡಿದರು.
ಸಾನಿಧ್ಯ ವಹಿಸಿದ್ದ ರಾಮಚಂದ್ರ ಮಹಾಸ್ವಾಮಿಗಳು ಮೂರುಜಾವರ ಮಠ ಇವರು ಆರ್ಶೀವಚನ ನೀಡಿದರು.
ಈ ವೇಳೆ ಪಂಚಾನನ ಸಂಪುಟ-೨ ಎಂಬ ಪುಸ್ತಕವನ್ನು ವೇದಿಕೆಯ ಮೇಲೆ ಬಿಡುಗಡೆಗೊಳಿಸಿದರು.
ಸಮಾಜದ ಕುಶಲ ಕರ್ಮಿಗಳಿಗೆ ಮತ್ತು ಕಲಾವಿದರಿಗೆ ಗೌರವ ಸನ್ಮಾನ ಮಾಡಲಾಯಿತು.


ವಿಶ್ವಕರ್ಮ ಸಮಾಜದ ಕಲಾವಿದರ ವಿವಿಧ ಕಲೆಯನ್ನು ಪ್ರದರ್ಶಿಸಿಸಲು ಕಲಾ ಪ್ರದರ್ಶನ ಮೇಳ ಹಮ್ಮಿಕೊಳ್ಳಲಾಗಿತ್ತು. ವಿಭಿನ್ನ ಚಿತ್ರಕಲೆ, ವಾಸ್ತು ಕಲೆಯ ರೂಪಕಗಳನ್ನು ಪ್ರದರ್ಶನ ಮಾಡಿದರು.
ವಿಶ್ವಕರ್ಮ ಸಮಾಜದ ಗ್ರಾಮೀಣ ಮಹಿಳಾ ಸಬಲೀಕರಣ, ಶೈಕ್ಷಣಿಕ ಅಭಿವೃದ್ದಿ, ಆರ್ಥಿಕ ಅಭಿವೃದ್ದಿ, ಸಾಮಾಜಿಕ ಅಭಿವೃದ್ದಿ, ರಾಜಕೀಯ ಅಭಿವೃದ್ದಿ ಎಂಬ ೫ ಗೋಷ್ಠಿಯನ್ನು ಹಮ್ಮಿಕೊಂಡಿದ್ದರು.
ಈ ವೇಳೆ ವಿನೋದ ಹಂಚಿನಾಳ, ದಯಾನಂದ ಪತ್ತಾರ, ಶ್ರೀಶೈಲಗೌಡ ಬಿರಾದಾರ(ಮಾಗಣಗೇರಿ), ಶಿವು ಬಡಿಗೇರ, ವಿನಾಯಕ ಬಡಿಗೇರ, ಅಶೋಕ ಪತ್ತಾರ, ಶಂಕರ ಪತ್ತಾರ, ಈರಣ್ಣ ಪತ್ತಾರ, ಪ್ರಭಾಕರ ಹಂಚಿನಾಳ, ವಿನೋದ ವಿಶ್ವಕರ್ಮ, ಬಸವರಾಜ ಬಡಿಗೇರ, ವೀರಣ್ಣ ಅರ್ಕಸಾಲಿ, ಗಂಗಾಧರ ವಿಶ್ವಕರ್ಮ, ಶಿವಾನಂದ ಪತ್ತಾರ, ವಿಜಯಕುಮಾರ ಪತ್ತಾರ, ಚಂದ್ರಶೇಖರ ಪತ್ತಾರ, ಭೀಮು ಪತ್ತಾರ ಇದ್ದರು
ಡಾ.ಚಂದ್ರಶೇಖರ ಕಾಳನ್ನನವರ ನಿರೂಪಿಸಿದರು, ಶ್ರೀಶೈಲ ಬಡಿಗೇರ ವಂದಿಸಿದರು.

banner

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news