Home News ಶುದ್ದ ಗೋಮೂತ್ರವು 35ಕ್ಕೂ ಹೆಚ್ಚು ಔಷದಿಯ ಅಂಶಗಳು ಹೊಂದಿದೆ ; ಶೇಖರಗೌಡ ಹರನಾಳ

ಶುದ್ದ ಗೋಮೂತ್ರವು 35ಕ್ಕೂ ಹೆಚ್ಚು ಔಷದಿಯ ಅಂಶಗಳು ಹೊಂದಿದೆ ; ಶೇಖರಗೌಡ ಹರನಾಳ

by vegadhut@gmail.com.
0 comments

ಸಿಂದಗಿ: ಗೋವುಗಳು ನಡೆದಾಡುವ ಔಷಧಾಲಯ ಎಂದು ವಿಶ್ವ ಹಿಂದೂ ಪರಿಷತ್ ತಾಲೂಕು ಕಾರ್ಯದರ್ಶಿ ಶೇಖರಗೌಡ ಹರನಾಳ ಹೇಳಿದರು.
ಪಟ್ಟಣದ ಹನುಮಾನ ಮಂದಿರದಲ್ಲಿ ವಿಶ್ವ ಹಿಂದು ಪರಿಷತ್ ಸಿಂದಗಿ ವತಿಯಿಂದ ಸೋಮವಾರದಂದು ಗೋಪಾಷ್ಟಮಿ ನಿಮಿತ್ಯ ನಡೆದ ಗೋ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗೋವು ನಮ್ಮ ರಾಷ್ಟ್ರೀಯ ಸಂಪತ್ತು, ಗೋರಕ್ಷಣೆ ನಮ್ಮೆಲ್ಲರ ಹೊಣೆ ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಪೂಜ್ಯ ಸ್ಥಾನವಿದ್ದು, ದೇಹದ ಅನೇಕ ರೋಗಗಳನ್ನು ಗುಣಪಡಿಸುವ ದಿವ್ಯ ಔಷಧಿಯನ್ನು ಗೋಮೂತ್ರದಿಂದ ತಯಾರಿಸಲಾಗಿತ್ತದೆ. ಶುದ್ದ ಗೋಮೂತ್ರವು 35ಕ್ಕೂ ಹೆಚ್ಚು ಔಷಧಿಯ ಅಂಶಗಳನ್ನು ಹೊಂದಿದೆ. ಗೋಮೂತ್ರದಿಂದ ತಯಾರಿಸಲ್ಪಟ್ಟ ಮತ್ತು ಅನೇಕ ರೋಗಗಳನ್ನು ನಿರ್ಮೂಲನೆ ಮಾಡುವಂತಹ ಔಷಧಿಗಳು ಮಾರುಕಟ್ಟೆಯಲ್ಲಿವೆ ಎಂದರು. ಹಾಗೂ ಭಾರತೀಯ ಗೋವು ತಳಿಗಳ ವಿಶೇಷತೆಗಳನ್ನು ಅರಿತ ಅಮೇರಿಕಾದಂತಹ ಹಲವು ದೇಶಗಳು ಈ ತಳಿಗಳನ್ನು ಅಭಿವೃದ್ಧಿಪಡಿಸಿ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಇನ್ನಾದರೂ ನಾವು ಎಚ್ಚೆತ್ತುಕೊಂಡು ವಿನಾಶದಂಚಿನಲ್ಲಿರುವ ನಮ್ಮ ಭಾರತೀಯ ಗೋ ತಳಿಗಳನ್ನು ಉಳಿಸಿ ಬೆಳೆಸಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾದ ಶರಣಗೌಡ ಬಿರಾದಾರ ಉಪಾಧ್ಯಕ್ಷರಾದ ಗುರು ಬಿರಾದಾರ, ಪರಿಷದ್ ಪ್ರಮುಖರಾದ ಸೋಮು ಕಟ್ಟಿಮನಿ, ರಾಯಪ್ಪ ಬಡಿಗೇರ, ಹಣಮಗೌಡ ಹಚ್ಯಾಳ, ಬಾಬು ಬಿರಾದಾರ, ರವಿ ಹೊಕ್ರಾಣಿ, ಸಂತೋಷ ಆಲಗೂರ, ಹುಲಿಗೆಪ್ಪ ಕೊಕಟನೂರ, ರಾಜು ಶಿವಾನಂದ ಗುಡ್ಡೊಡಗಿ, ಸಿದ್ದು ಅಂಬಳನೂರ ಮತ್ತಿತರಿದ್ದರು.

banner

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news