Thursday, 22 October 2026 — ವೇಗದೂತ
BREAKING NEWS
Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಬ್ಯಾಕೋಡ ಗ್ರಾಮದ ರೈತ ಆತ್ಮಹತ್ಯೆ Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಬ್ಯಾಕೋಡ ಗ್ರಾಮದ ರೈತ ಆತ್ಮಹತ್ಯೆ
News

ಒಂಬತ್ತು ಕಿಲೋಮೀಟರನ ಗ್ರಾಮಕ್ಕು ಬಂತು ಸರ್ಕಾರಿ ಬಸ್ಸ್

ವಿದ್ಯಾರ್ಥಿಗಳ ಬೇಡಿಕೆಗೆ ಸ್ಪಂದಿಸಿದ ಶಾಸಕ ಅಶೋಕ ಮನಗೂಳಿ. ವಿಧ್ಯಾರ್ಥಿಗಳಿಗೆ ತೊಂದರೆ ಆಗದಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಜರುಗಿಸಲಾಗುವುದೆಂದು ಹೇಳಿದರು. ಸಿಂದಗಿ :  ತಾಲೂಕಿನ ಸೋಂಪುರ ಗ್ರಾಮದ ವಿದ್ಯಾರ್ಥಿಗಳ ಬಹುದಿನ ಬೇಡಿಕೆಯಾಗಿರುವ ಸೋಂಪುರ ಗ್ರಾಮದಿಂದ ಸಿಂದಗಿ ಪಟ್ಟಣಕ್ಕೆ ಬಸ್ಸಿನ ಸೌಕರ್ಯವನ್ನು ಕಲ್ಪಿಸುವ ಮೂಲಕ…

ವಿದ್ಯಾರ್ಥಿಗಳ ಬೇಡಿಕೆಗೆ ಸ್ಪಂದಿಸಿದ ಶಾಸಕ ಅಶೋಕ ಮನಗೂಳಿ. ವಿಧ್ಯಾರ್ಥಿಗಳಿಗೆ ತೊಂದರೆ ಆಗದಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಜರುಗಿಸಲಾಗುವುದೆಂದು ಹೇಳಿದರು.

ಸಿಂದಗಿ :  ತಾಲೂಕಿನ ಸೋಂಪುರ ಗ್ರಾಮದ ವಿದ್ಯಾರ್ಥಿಗಳ ಬಹುದಿನ ಬೇಡಿಕೆಯಾಗಿರುವ ಸೋಂಪುರ ಗ್ರಾಮದಿಂದ ಸಿಂದಗಿ ಪಟ್ಟಣಕ್ಕೆ ಬಸ್ಸಿನ ಸೌಕರ್ಯವನ್ನು ಕಲ್ಪಿಸುವ ಮೂಲಕ ವಿದ್ಯಾರ್ಥಿಗಳ ಬೇಡಿಕೆಗೆ ಶಾಸಕ ಅಶೋಕ್ ಮನಗೂಳಿ ಸ್ಪಂದಿಸಿದ್ದಾರೆ.

ಸೋಂಪುರ ಗ್ರಾಮದಿಂದ ಸಿಂದಗಿ ಪಟ್ಟಣದವರೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಹಿತ ದೃಷ್ಟಿಯಿಂದ ನೂತನ ಬಸ್ಸಿಗೆ ಮಂಗಳವಾರ ವಿದ್ಯಾರ್ಥಿಗಳಿಂದಲೇ ಚಾಲನೆ ನೀಡಿಸಿದರು.

ಈ ವೇಳೆ ಶಾಸಕ ಅಶೋಕ್ ಮನಗೂಳಿ ಮಾತನಾಡಿ, ಸೋಂಪುರ ಗ್ರಾಮದಿಂದ ಸಿಂದಗಿ ಪಟ್ಟಣಕ್ಕೆ ನಿತ್ಯ ನೂರಾರು ವಿದ್ಯಾರ್ಥಿಗಳು ಶಿಕ್ಷಣ ಕಲಿಯುವುದಕ್ಕೆ ಬರುತ್ತಲಿದ್ದಾರೆ. ಬಸ್ಸಿನ ಸೌಕರ್ಯವಿಲ್ಲದ ಕಾರಣ ಅನೇಕ ವಿದ್ಯಾರ್ಥಿಗಳು ಕಲಿಕೆಯಿಂದ ಹಿಂದೆ ಬೀಳುತ್ತಿದ್ದರು. ಇದನ್ನ ಅರ್ಥೈಸಿಕೊಂಡು ಆ ಗ್ರಾಮದ ಯಾವ ಮಕ್ಕಳಿಗೂ ಕಲಿಕೆಗೆ ತೊಂದರೆ ಆಗಬಾರದು ಎಂದು ನಿರ್ಧರಿಸಿ ಅವರ ಬೇಡಿಕೆಯನ್ನ ಪೂರೈಸಲು ಮುಂದಾಗಿದ್ದೇವೆ. ತಾಲೂಕಿನಲ್ಲಿ ಇನ್ನೂ ಕೆಲವು ಗ್ರಾಮಗಳಿಂದ ಸಿಂದಗಿ ನಗರಕ್ಕೆ ಶಾಲಾ ಕಾಲೇಜಿನ ಸರಿಯಾದ ಸಮಯಕ್ಕೆ ಬರುತ್ತಿಲ್ಲ ಅಂಥವುಗಳನ್ನ ಕೂಡಲೇ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲು ಮುಂದಾಗುತ್ತೇನೆ ಎಂದರು.

ನಾನು ಕಾಲೇಜಿನ ವಿದ್ಯಾರ್ಥಿನಿ ನಮ್ಮ ಕಾಲೇಜು ಬೆಳಗ್ಗೆ 7.45 ಕ್ಕೆ ಪ್ರಾರಂಭಗೊಳ್ಳುತ್ತದೆ ಆದರೆ ಬಸ್ಸಿನ ಸೌಕರ್ಯವಿಲ್ಲದಿರುವ ಕಾರಣ ಖಾಸಗಿ ವಾಹನದಲ್ಲಿ ಬರುವ ನಾವುಗಳು ನಿತ್ಯ ಒಂದು ಅವಧಿಯ ತರಗತಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಇದರಿಂದ ನಮ್ಮ ಶೈಕ್ಷಣಕ್ಕೆ ನಿತ್ಯ ತೊಂದರೆಯಾಗುತ್ತಿತ್ತು. ಪ್ರಸ್ತುತ ನಾವು ನಮ್ಮ ಶಾಲಾ-ಕಾಲೇಜುಗಳ ಸರಿಯಾದ ಸಮಯಕ್ಕೆ ನಾವು ಇಂದು ಹೋಗುವಂತಾಗಿದ್ದೇವೆ. ಎಲ್ಲ ವಿದ್ಯಾರ್ಥಿಗಳ ಪರವಾಗಿ ಶಾಸಕ ಅಶೋಕ ಮನಗೂಳಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ. -ಲಕ್ಷ್ಮಿ ಪಾಟೀಲ, ವಿದ್ಯಾರ್ಥಿನಿ ಎಚ್. ಜಿ. ಕಾಲೇಜ ಸಿಂದಗಿ.

ಇದೆ ಸಂದರ್ಭದಲ್ಲಿ ಸಿಂದಗಿ ಘಟಕ ವಿಭಾಗಿ ನಿಯಂತ್ರಕ ರೇವಣಸಿದ್ದಪ್ಪ ಖೈನೂರು, ಸಿಂದಗಿ ಬ್ಲಾಕ್ ಅಧ್ಯಕ್ಷ ಸುರೇಶ ಪೂಜಾರಿ, ಜಿಲ್ಲಾ ಕೆಡಿಪಿ ಸದ್ಯಸ ನೂರು ಅಹಮ್ಮದ ಅತ್ತಾರ, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಶಂಬೇವಾಡ ಸೇರಿದಂತೆ ಗ್ರಾಮ ಪಂಚಾಯಿತಿ ಸದ್ಯಸರು,ಊರಿನ ಹಿರಿಯರು ಯುವಕರು ತಾಯಿಂದಿರು ಉಪಸ್ಥಿತರಿದ್ದರು..

vegadhut@gmail.com.

Leave a comment