
ಸಿಂದಗಿ : ನಗರದ ಬಸ್ ನಿಲ್ದಾಣ ಮುಂಬಾಗದಲ್ಲಿರುವ ಪೋರವಾಲ್ ಪೆಟ್ರೋಲ್ ಪಂಪ್ ಎದುರಿಗೆ ಇರುವ ರಸ್ತೆ ಮಧ್ಯದಲ್ಲಿರುವ ಹುಂಡಿಗೆ ಪಲ್ಟಿಯಾದ ಘಟನೆ ನಡೆಯಿತು.
ಯಾತ್ನುರ ಗ್ರಾಮದ ಪ್ರಮೋದ ಹೂಗಾರ ಎಂಬಾತ ಚಾಲಕ ರೈತರಿಗೆ ಸಂಭಂದಿಸಿದ ಪತ್ರಾಸು, ಮುಂಡ, ಪಳಿಗಳಂತಹ ಹಲವಾರು ಸಾಮಾನುಗಳು ತೆಗೆದುಕೊಂಡು ಹೋಗುತ್ತಿರುವ ವೇಳೆ ದುರ್ಘಟನೆ ನಡೆದಿದ್ದು ಯಾವುದೇ ಅಹಿತಕರ ಘಟನೆ ನಡೆದಿಲ್ಲ.

ಸ್ಥಳಿಯ ಜೈ ಭೀಮ ನಗರದ ನಿವಾಸಿಗಳು ಇದೆ ಮೋದಲಲ್ಲ ಸುಮಾರು ಬಾರಿ ಅಪಘಾತಗಳು ಆಗಿವೆ ಪುರಸಭೆಯವರ ನಿರ್ಲಕ್ಷ್ಯದಿಂದ ಇ ತರಹದ ಘಟನೆ ನಮ್ಮಗೆ ರೂಢಿಯಾಗಿದೆ, ಅವರಿಗೆ ಎಷ್ಟು ಹೇಳಿದರು ಸ್ಪಂದಿಸಿಲ್ಲ. ಎಂದು ಪುರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜನರು ಬಂದು ಗಾಡಿ ಎತ್ತಿ ಚಾಲಕನ ಆರೋಗ್ಯ ವಿಚಾರಿಸಿ ಮಾನವಿಯತೆ ಮೆರೆದರು.

