
ಸಿಂದಗಿ: ಭಾರತ ಜೋಡೋ ಪಾದಯಾತ್ರೆಗೆ ಸಿಂದಗಿ ತಾಲೂಕಿನಿಂದ 5000 ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠ್ಠಲ ಕೊಳ್ಳುರು ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿಯವರು ಹಮ್ಮಿಕೂಂಡಿರುವ “ಭಾರತ ಜೋಡೋ” ಪಾದಯಾತ್ರೆಯು ಭಾರತ ದೇಶಾದ್ಯಾಂತ ಸಂಚರಿಸುತ್ತಿದೆ. ಈ ಪಾದಯಾತ್ರೆಯು ಈಗ ಕರ್ನಾಟಕಕ್ಕೆ ಬಂದಿದ್ದು ಅಕ್ಟೋಬರ್ 30ವರೆಗೆ ಕರ್ನಾಟಕದಲ್ಲಿ ಪಾದಯಾತ್ರೆ ನಡೆಯುತ್ತದ್ದೆ. ಕಾರಣ ಸಿಂದಗಿ ವಿಧಾನಸಭಾ ಮತಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಅಕ್ಟೋಬರ್ 21 ರಂದು ರಾಯಚೂರಿನಲ್ಲಿ ನಡೆಯುವ ಪಾದಯಾತ್ರೆಯಲ್ಲಿ ಭಾಗವಹಿಸಬೇಕೆಂದು ರಾಜ್ಯಾಧ್ಯಕ್ಷರು ಆದೇಶ ಮಾಡಿರುತ್ತಾರೆ. ಆದ್ದರಿಂದ ಇಂದು ಸಿಂದಗಿ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸಿಂದಗಿ ವಿಧಾನಸಭಾ ಕ್ಷೇತ್ರದ ಮುಖಂಡರ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ ರಾಯಚೂರಿನಲ್ಲಿ ನಡೆಯುವ ಪಾದಯಾತ್ರೆಯಲ್ಲಿ ಸುಮಾರು “5000” ಕಾರ್ಯಕರ್ತರನ್ನು ಸಿಂದಗಿ ವಿಧಾನಸಭಾ ಕ್ಷೇತ್ರದಿಂದ ಪಾದಯಾತ್ರೆಯಲ್ಲಿ ಭಾಗವಹಿಸಲು ರಾಯಚೂರಿಗೆ ಕರೆದುಕೂಂಡು ಹೋಗಲು ಎಲ್ಲಾ ಮುಖಂಡರು ತಿರ್ಮಾನಿಸಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅಶೋಕ ಮನಗೂಳಿ, ಮಾಜಿ ಶಾಸಕ ಶರಣಪ್ಪ ಸುಣಗಾರ, ಅಯುಬ್ ದೇವರಮನಿ, ಮುಸ್ತಾಕ ಮುಲ್ಲಾ, ಶಿವನಗೌಡ ಬಿರಾದಾರ, ಯೋಗಪ್ಪಗೌಡ ಪಾಟೀಲ, ರಾಜು ಕೂಚಬಾಳ, ರವಿ ದೇವರಮನಿ, ಸಿದ್ದಣ ಹಿರೇಕುರಬರ, ಸುರೇಶ ಪೂಜಾರಿ, ಶಿವು ಕೋಟಾರಗಸ್ತಿ, ಇರ್ಫಾನ ಆಳಂದ, ರಾಘವೇಂದ್ರ, ಯಲ್ಲು ಕರಕಿ, ದೇವಿಂದ್ರ ಪೂಜಾರಿ, ಮಾಂತು ಅಮ್ಮಾಗೋಳ, ಶರಣಗೌಡ ಪಾಟೀಲ, ಹಾಗೂ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.