ಮೋರಟಗಿ: ಮನುಷ್ಯ ಹುಟ್ಟಿದಾಗ ಉಸಿರು ಇರುತ್ತೆ, ಅದೇ ಮನುಷ್ಯ ಸತ್ತ ಮೇಲೆ ಹೆಸರು ಇರುತ್ತೆ, ಆ ನಿಟ್ಟಿನಲ್ಲಿ ತಾವು ಕಷ್ಟ ಪಟ್ಟು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಿರಿ, ರಾಜ್ಯ ಮಟ್ಟದಲ್ಲಿಯೂ ಕೂಡ ತಮ್ಮ ಗೆಲುವಾಗಲಿ ಎಂದು ಸಿದ್ದರಾಮೇಶ್ವರ ಕಾಲೇಜಿನ ಪ್ರಾಚಾರ್ಯ ಟಿ.ಎನ್.ಲಮಾಣಿ ಹೇಳಿದರು.
ವಿಜಯಪುರದ ಕಾಳಿದಾಸ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ಜಿಲ್ಲಾ ಮಟ್ಟದ ಖೋ ಖೋ ಮತ್ತು ವ್ಯಯಕ್ತಿಕ ಪಂದ್ಯಾವಳಿಯಲ್ಲಿ ತಾಲೂಕಿನ ಮೋರಟಗಿ ಗ್ರಾಮದ ಸಿದ್ದರಾಮೇಶ್ವರ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದುಕೊಳ್ಳುವ ಮೂಲಕ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿ ಖೋ ಖೋ ಮತ್ತು ೪೦೦ಮೀ. ಓಟದಲ್ಲಿ ದ್ವಿತೀಯ ಸ್ಥಾನ ಗಳಿಸುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕಾಲೇಜಿನ ಪರವಾಗಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಬಿ.ಆಯ್.ಮಸಳಿ, ದೈಹಿಕ ಶಿಕ್ಷಕ ಎಂ.ಎನ್.ಜೋಗುರ, ಕಾರ್ಯದರ್ಶಿ ಎಂ.ಎಸ್.ಪಾಟೀಲ್, ನಿರ್ದೇಶಕ ಸಿದ್ದನಗೌಡ ಪಾಟೀಲ್, ಆಡಳಿತಧಿಕಾರಿ ಬಿ. ಎಸ್. ಪಾಟೀಲ್, ಡಿಗ್ರಿ ಕಾಲೇಜಿನ ಪ್ರಾಚಾರ್ಯ ವ್ಹಿ. ಸಿ. ಗೋಲಾ, ಪ್ರೌಢ ಶಾಲೆಯ ಮುಖ್ಯಗುರು ಬಿ. ಆರ್. ಬಿರಾದಾರ, ದೈಹಿಕ ಶಿಕ್ಷಕ ಎಂ. ಎನ್. ಜೋಗುರ ಸೇರಿದಂತೆ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು.

