18
ಸಿಂದಗಿ: ಮತಕ್ಷೇತ್ರದ ಶಾಸಕರಾದ ರಮೇಶ ಭೂಸನೂರ ರವರು ಪ್ರತಿ ವರ್ಷದಂತೆ ಈ ವರ್ಷ ಬಂಧಗಳನ್ನು ಬೆಸೆಯುವ ವಿಜಯದಶಮಿ ಹಬ್ಬದ ಪ್ರಯುಕ್ತ ಅಕ್ಟೋಬರ್ 6 ಗುರುವಾರ ಸಿಂದಗಿ ನಗರದ ಆರ್.ಡಿ. ಪಾಟೀಲ್ ಕಾಲೇಜು ಎದುರುಗಡೆಯ ಚೌದ್ರಿ ಲೇಔಟ್ ನ ಸ್ವ – ಗೃಹದಲ್ಲಿ ಸಾರ್ವಜನಿಕ ಬನ್ನಿ ವಿನಿಮಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕ್ಷೇತ್ರದ ಗುರು ಹಿರಿಯರು, ಕಾರ್ಯಕರ್ತರು,ಯವ ಮಿತ್ರರು ಹಾಗೂ ಹಿತೈಷಿಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸುವಂತೆ ಶಾಸಕ ರಮೇಶ ಭೂಸನೂರ ರವರು ತಿಳಿಸಿದ್ದಾರೆ.