
ಸಿಂದಗಿ: ಇಂದು ನಗರದ ನಿಜಾಮುದ್ದಿನ ಮಸೂತಿಯ ಸಂಗಮಬಾರ ಹತ್ತಿರದಲ್ಲಿ
ಎಫ್,ಎಂ,ಫೌಂಡೇಶನ್ ಗ್ರೂಪ್(ಫೈಜಾನ ಮಾನಗಾಂವಕರ) ಹಾಗೂ ಗೆಳೆಯರ ಬಳಗದಿಂದ ಈದ್ ಮಿಲಾದ್ ಹಬ್ಬವನ್ನು ಸಿಹಿ ಶೂರಕುಂಬಾ ಹಂಚುವ ಮೂಲಕ ಶಿಕ್ಷಕರ ಸಂಘದ ಅಧ್ಯಕ್ಷ ಆನಂದ ಭೂಸನೂರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಡೀ ಜಗತ್ತಿನಲ್ಲಿ ಭಾವೈಕ್ಯತೆಗೆ ಸಾಕ್ಷಿಯಾದ ದೇಶ ಎಂದರೆ ಅದು ಭಾರತ, ಸಿಂದಗಿ ತಾಲೂಕಿನಲ್ಲಿ ಹಿಂದೂ ಮುಸ್ಲಿಂ ಎಂಬ ಭೇದ ಭಾವ ಇಲ್ಲದೆ ನಾವು ರಂಜಾನ್, ಗಣೇಶ್ ಚತುರ್ಥಿ ಹಬ್ಬಗಳನ್ನು ಏಕತೆಯಿಂದ ಆಚರಿಸುತ್ತಿದ್ದಿವೆ. ಹಜರತ್ ಮೊಹಮ್ಮದ್ ಪೈಂಗಂಬರರು ಮಾನವೀಯತೆ ಸಂದೇಶವನ್ನು ಸಾರಿ ಹೇಳಿದ್ದಾರೆ. ಹಸಿವಿನಿಂದ ನರಳುವ ವ್ಯಕ್ತಿಗೆ ಒಂದು ತುತ್ತು ಅನ್ನವನ್ನು ನೀಡಿ ಆಮೇಲೆ ಯಾರು ತಿನ್ನುತ್ತಾನೋ ಅವನು ಒಬ್ಬ ನಿಜವಾದ ಮುಸ್ಲಿಂನಾಗುತ್ತಾನೆ ಎಂದು ಮಹಮ್ಮದ್ ಪೈಗಂಬರರು ಹೇಳಿದ್ದಾರೆ ಎಂದರು.

ಮುಖ್ಯ ಅತಿಥಿಗಳಾದ ಉಪತಹಸೀಲ್ದಾರ್ ಪ್ರಕಾಶ ಸಿಂದಗಿ ಅವರು ಮಾತನಾಡಿ ಮಹಮ್ಮದ್ ಪೈಗಂಬರರ ಆದರ್ಶ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಾವು ಶಾಂತ ರೀತಿಯಿಂದ ಸೌಹಾರ್ದತೆಯಿಂದ ಬಾಳೋಣ ಎಂದರು.
ಪಿಎಸ್ಐ ಸೋಮೇಶ ಗೆಜ್ಜಿ ಮಾತನಾಡಿ
ಭಾರತ ದೇಶದಲ್ಲಿ ಅನೇಕ ಧರ್ಮಿಯರು ಅಣ್ಣ ತಮ್ಮಂದಿರಂತೆ ವಾಸಮಾಡುತ್ತಿದ್ದಾರೆ, ನಮ್ಮ ಭಾರತದ ಶ್ರೇಷ್ಠತೆ ಇಡೀ ಜಗತ್ತಿಗೆ ಎತ್ತಿ ತೋರಿಸಿದ್ದೇವೆ, ಮಹಮ್ಮದ್ ಪೈಂಗಬರರ ಮೂರ್ತಿ ಮತ್ತು ಭಾವಚಿತ್ರ ಇಲ್ಲದೆ ಜಗತ್ತಿನಲ್ಲಿ ಅತಿ ಹೆಚ್ಚು ಅನುಯಾಯಿಗಳು ಹೊಂದಿದ ಒಬ್ಬ ಶ್ರೇಷ್ಠ ನಾಯಕ ಏಕೆಂದರೆ ಅವರ ತತ್ವ ಆದರ್ಶಗಳು, ಆಚರಣೆಗಳು ಅವರು ಹೇಳಿಕೊಟ್ಟ ಸನ್ಮಾರ್ಗ ಆಗಿರಬಹುದು ಹೀಗೆ ಜಗತ್ತಿನಲ್ಲಿ ಬಹಳಷ್ಟು ಅವರ ಅನುಯಾಯಿಗಳು ಇದ್ದಾರೆ, ನಾವು ಎಲ್ಲರೂ ಒಂದೇ ಎಂದು ಸಮಾನತೆಯನ್ನು ಮಹಮ್ಮದ್ ಪೈಗಂಬರರು ಸಾರಿ ಹೇಳಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾನಿಪಾ ಸಂಘದ ಅಧ್ಯಕ್ಷ ಆನಂದ ಶಾಬಾದಿ, ಪಂಡಿತ್ ಯಂಪುರೇ ಪುರಸಭೆ ಸದಸ್ಯರುಗಳಾದ ಬಾಷಾಸಾಬ ತಾಂಬೋಳಿ, ಗೋಲ್ಲಾಳಪ್ಪ ಬಂಕಲಗಿ, ಹಣಮಂತ ಸುಣಗಾರ, ರಾಜಣ್ಣಿ ನಾರಾಯಣಕರ, ಸಂದೀಪ್ ಚೌರ, ಶ್ರೀಶೈಲ ಬಿರಗೊಂಡ ಮುಖಂಡರಾದ ಅಯ್ಯುಬ ಸುಂಬಡ, ಶರಣಪ್ಪ ಸುಲ್ಪಿ, ರವಿ ನಾಯ್ಕೊಡಿ, ಬಸವರಾಜ ಸಜ್ಜನ, ನಿಖಿಲ್ ಪಾಟೀಲ್, ಮೈಹಿಬೂಬ ವಾಲಿಕಾರ, ರಜಾಕ ಮುಜಾವರ ವೇದಿಕೆ ಮೇಲೆ ಹಾಜರಿದ್ದರು ಹಾಗೂ ಹಲವು ಮುಖಂಡರು ಸೇರಿದಂತೆ ನೂರಾರು ಹಿಂದೂ-ಮುಸ್ಲಿಂ ಬಾಂಧವರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಇಸ್ಮಾಯಿಲ ಶೇಖ್ ನಿರೂಪಿಸಿ ವಂದಿಸಿದರು.
