Home News ಕುಸಿದುಬಿದ್ದ ಗಜಾನನ ಮಂಟಪ ಯಾವುದೇ ಅಹಿತಕರ ಘಟನೆ ಇಲ್ಲ

ಕುಸಿದುಬಿದ್ದ ಗಜಾನನ ಮಂಟಪ ಯಾವುದೇ ಅಹಿತಕರ ಘಟನೆ ಇಲ್ಲ

by vegadhut@gmail.com.
0 comments

ಸಿಂದಗಿ :  ಪ್ರತಿ ವರ್ಷದಂತೆ ಈ ವರ್ಷವು ಸಿಂದಗಿ ನಗರದ ವಿವೇಕಾನಂದ ಗಜಾನನ ಯುವಕ ಮಂಡಳಿ ವತಿಯಿಂದ ಪ್ರತಿಷ್ಠಾಪನೆ ಮಾಡಲಾಗಿತ್ತು.  ದುರಾದೃಷ್ಠವಶಾತ್ ಇಂದು ಸಾಯಂಕಾಲ ಏಳು ಮೂವತ್ತರ ಸುಮಾರಿಗೆ ಗೋಲ್ಢನ್ ಟೆಂಪಲ್ ತದ್ಧರೂಪದಲ್ಲಿ ಹಾಕಿರುವ ಮಂಟಪ ಅತಿಯಾದ ಭಕ್ತರು  ದರ್ಶನ ಪಡೆಯುವ ಸಲುವಾಗಿ ಮೇಲೆರಿರುವುದರಿಂದ ದೀಡಿರನ್ನೆ ಕುಸಿದು ಬಿದ್ದಿರುವ  ಘಟನೆ ನಡೆದಿದೆ. ಸುಮಾರು ನೂರು ಭಕ್ತಾಧಿಗಳು ದರ್ಶನಕ್ಕೆ ಮಂಟಪದ ಮೇಲಿದ್ದರು ಎಂದು ಅಂದಾಜಿಸಲಾಗಿದೆ. ಚಿಕ್ಕ ಮಕ್ಕಳು, ಮಹಿಳೆಯರು ಹೆಚ್ಚು ಸಂಖ್ಯೆಯಲ್ಲಿದು ಅದೃಷ್ಟಾವಶತ್  ಯಾವುದೇ ದುರ್ಘಟನೆ ಸಂಭವಿಸಿಲ್ಲ. ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಸಾರ್ವಕರ್ ಬಗ್ಗೆ ಪುಸ್ತಕ  ಹಂಚಲು ಬಂದ ವಿಜಯಪುರ  ಯುವ ಬ್ರಿಗೇಡ್  ಜಿಲ್ಲಾ ಅಧ್ಯಕ್ಷ  ರಾಜು ಪಾಟೀಲ  ಮತ್ತು ಅವರ ತಂಡದವರು ಘಟನೆಯಲ್ಲಿ ಸಿಲುಕಿದವರ ರಕ್ಷಣೆಗೆ ಹರಸಾಹಸ ಪಟ್ಟರು. ಸುತ್ತಮುತ್ತಲಿರುವ ಎಲ್ಲ ಜನರು   ಏಕಕಾಲದಲ್ಲಿ ಬಿದ್ದಿರುವ ಮಂಟಪ ಎತ್ತುತ್ತಿರುವ  ದೃಶ್ಯ ಭಾವ್ಯಕತೆಗೆ ಸಾಕ್ಷೀಯಾಯಿತು.

ವಿಷಯ ತಿಳಿದ ಕೂಡಲೆ ಶಾಸಕ ರಮೇಶ ಭೂಸನೂರ ಸ್ಥಳಕ್ಕೆ ಬೇಟಿ ನೀಡಿ  ಪರಿಶಿಲನೆ ನಡೆಸಿದರು. ಆರಕ್ಷಕ ವೃತ್ತ ನಿರೀಕ್ಷಕರಾದ ರವಿ ವಕ್ಕುಂದ ಅವರು ಮಾಹಿತಿ ನೀಡಿದರು.

banner

ಕಾಂಗ್ರೇಸ್ ಮುಖಂಡ ಅಶೋಕ ಮನಗೂಳಿ ಬೇಟಿ ನೀಡಿ  ವಿವೇಕಾನಂದ  ಗಜಾನನ ಯುವಕ ಮಂಡಳಿಯ  ಉಪಾಧ್ಯಕ್ಷರಾದ ಶಿವಾನಂದ ನಿಗಡಿ ಅವರೊಂದಿಗೆ ಚರ್ಚಿಸಿದರು.

ಪ್ರತಿವರ್ಷ 7 ದಿನಗಳ ಕಾಲ ಪ್ರತಿಷ್ಠಾಪನೆ ಮಾಡವ ಪರಂಪರೆ ನಡೆದುಕೊಂಡು  ಬಂದಿತ್ತು ಈ ಅಹಿತಕರ ಘಟನೆಯಿಂದ ಮಂಡಳಿಯು ಚರ್ಚೆಮಾಡಿ ಮುಂದಿನ ನಿರ್ದಾರ ತೆಗೆದು ಕೋಳ್ಳುವುದಾಗಿ  ಗಜಾನನ ಯುವಕ ಮಂಡಳಿ ಅಧ್ಯಕ್ಷ ಗಂಗಾಧರ ರುಕುಂಪುರ ಹೇಳಿದ್ದಾರೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news