ಅಹವಾಲು ಹೇಳಿಕೊಳ್ಳಲು ಬಂದ ಮಹಿಳೆಯ ಮೇಲೆ ದರ್ಪ ತೋರಿದ ಘಟನೆ ಮಹಾದೇವಪುರದ ಶಾಸಕ ಅರವಿಂದ ಲಿಂಬಾವಳಿ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ.ಆದರೆ ಶಾಸಕರಾದ ಅರವಿಂದ ಲಿಂಬಾವಳಿ ಅವರು ಹೇಳುವುದೆ ಬೇರೆ ಬಂದಿರುವ ಮಹಿಳೆ ಜಾಗೆ ಒತ್ತುವರಿ ಮಾಡಿದ್ದಾರೆ ಎಂದು ಅರವಿಂದ ಲಿಂಬಾವಳಿ ಹೇಳಿಕೆ ನೀಡಿದ್ದಾರೆ.
ಆದರೆ ಬೆಳ್ಳಿಗೆ ನಡೆದ ಘಟನೆ ಕುರಿತು ಮಾದ್ಯಮದವರೊಂದಿಗೆ ಮಾತನಾಡಿರುವ ಶಾಸಕ ಅರವಿಂದ ಲಿಂಬಾವಳಿಯವರು ಮಾತನಾಡುವ ವೇಗದಲ್ಲಿ ನಾನೇನು ರೇಪ್ ಮಾಡಿದ್ದಿನಾ? ಎಂದು ಕೇಳಿರುವುದು ರಾಜ್ಯದ ಜನರು ಕಿಡಿಕಾರುತ್ತಿದ್ದಾರೆ ಇಡಿ ಮಹಿಳಾ ಕುಲಕ್ಕೆ ಅವಮಾನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಆಮ್ ಆದ್ಮಿ ಪಾರ್ಟಿಯ ಕುಶಾಲ್ ಸ್ವಾಮಿ ನೇತೃತ್ವದಲ್ಲಿ ಮಹಿಳಾ ಆಯೋಗಕ್ಕೆ ದೂರು ನೀಡಿ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.
ದೇವನಹಳ್ಳಿಯಲ್ಲಿ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಎನಾಗಿದೆ ಎಂಬ ವರದಿ ಪಡೆದುಕೋಳ್ಳುತ್ತೆನೆ ಎಂದು ಹೇಳಿದ್ದಾರೆ.
- ದಾರವಾಡದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮೂರು ಬಾರಿ ಶಾಸಕರಾದವರು ಜನರ ಸಮಸ್ಯೆ ಬಗ್ಗೆ ಅವರಿಗೆ ಗೋತ್ತಿದೆ. ಅರವಿಂದ ಲಿಂಬಾವಳಿ ಆತರದ ಮನುಷ್ಯನಲ್ಲ ನೈಜ್ಯ ವಿಷಯ ತಿಳಿದು ಮಾತನಾಡುವೆ ಎಂದು ಹೇಳಿದ್ದಾರೆ.
ಕಾಂಗ್ರೇಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಪ್ರತಿಕ್ರಿಯಿಸಿದ ಅವರು ಬಿಜೆಪಿ ಶಾಸಕರಿಗೆ ಜನರ ಸಮಸ್ಯೆ ಕೇಳುವಷ್ಟು ಶಾಂತಿ, ಸಮಾದಾನ ಇಲ್ಲ ಅರವಿಂದ ಲಿಂಬಾವಳಿ ಶಾಸಕರಾಗಿರಲು ಯೋಗ್ಯರಲ್ಲ ಎಂದು ಹೇಳಿದ್ದಾರೆ.
ಪ್ರತ್ಯುತ್ತರವಾಗಿ ಅರವಿಂದ ಲಿಂಬಾವಳಿ ಟ್ವೀಟ್ ಮಾಡಿದ್ದು ಈ ಬಗ್ಗೆ ನಾನು ಕ್ಷಮೆ ಕೇಳಲು ಸಿದ್ದನಿದ್ದೇನೆ. ಆದರೆ ನಿಮ್ಮ ಪಕ್ಷದ ಿದೇ ಕಾರ್ಯಕರ್ತೆ ರೂತ್ ಸಗಾಯ್ ಮೇರಿ ಎಷ್ಟೋ ವರ್ಷಗಳಿಂದ ರಾಜಕಾಲುವೆ ಒತ್ತುವರಿ ಮಾಡಿ, ಜನರಿಗೆ ಸಮಸ್ಯೆಯುಂಟು ಮಾಡಿದ್ದಾರಲ್ಲ, ಅದನ್ನು ಖಾಲಿ ಮಾಡಲು ಹೇಳಿ. ನಿಮ್ಮ ಕಾರ್ಯಕರ್ತೆಯ ಮೊಂಡುತನವನ್ನು ಇಲ್ಲಿಗೆ ನಿಲ್ಲಸಲು ಹೇಳಿ ಎಂದು ಟಾಂಗ್ ನೀಡಿದ್ದಾರೆ.
https://twitter.com/ArvindLBJP/status/1565986771477090304?t=MBvcQMX3PWoz3oVHFvF4aA&s=19
