Home News ಜಿಲ್ಲಾಡಳಿತದಿಂದ ಸ್ವಚ್ಛಮೇವ ಜಯತೆ ಸಂದೇಶ

ಜಿಲ್ಲಾಡಳಿತದಿಂದ ಸ್ವಚ್ಛಮೇವ ಜಯತೆ ಸಂದೇಶ

by vegadhut@gmail.com.
0 comments

ಗಾಂಧಿ ಜಯಂತಿ ಹಿನ್ನೆಲೆ: ಜಿಲ್ಲಾಧಿಕಾರಿಗಳು, ಜಿಪಂ ಸಿಇಓ  ಸಮ್ಮುಖದಲ್ಲಿ ಅಧಿಕಾರಿಗಳಿಂದ ಶ್ರಮದಾನ ವಿಶೇಷ ಕಾರ್ಯಕ್ರಮ
ವಿಜಯಪುರ : ಅಕ್ಟೋಬರ್ 2 ಗಾಂಧೀ ಜಯಂತಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಅಕ್ಟೋಬರ್ 1ರಂದು ನಗರದ ಶಿವಗಿರಿಯ ಮಹಾತ್ಮ ಗಾಂಧೀಜಿ ಕಾಲೊನಿಯಲ್ಲಿ ವಿಶೇಷ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಹುಲ್ ಶಿಂಧೆ, ಅಪರ ಜಿಲ್ಲಾಧಿಕಾರಿಗಳಾದ ರಮೇಶ ಕಳಸದ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಕೇಂದ್ರ ಕಾರಾಗೃಹದ ಅಧೀಕ್ಷಕರಾದ ಡಾ.ಐ.ಜೆ.ಮ್ಯಾಗೇರಿ, ಜಂಟಿ ಕೃಷಿ ನಿರ್ದೇಶಕರಾದ ರೂಪಾ ಎಲ್., ತಹಸೀಲ್ದಾರ ಸಿದ್ದರಾಯ ಬೋಸಗಿ ಸೇರಿದಂತೆ ಇನ್ನೀತರರು ಪೊರಕೆ, ಗುದ್ದಲಿ, ಸಲಿಕೆ, ಪಿಕಾಸಿ, ಪುಟ್ಟಿ ಹಿಡಿದು ಶ್ರಮದಾನದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.
ಜಿಲ್ಲಾಧಿಕಾರಿಗಳ ಕರೆಯ ಮೇರೆಗೆ ಬೆಳಂಬೆಳಗ್ಗೆಯೇ ಮಹಾತ್ಮಗಾಂಧೀಜಿ ಕಾಲೋನಿಗೆ ಆಗಮಿಸಿದ್ದ ಮಹಾನಗರ ಪಾಲಿಕೆಯ ಆಯುಕ್ತರಾದ ವಿಜಯಕುಮಾರ ಮೆಕ್ಕಳಕೆ, ನಗರಾವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ರಾಜಶೇಖರ ಡಂಬಳ, ಪಾಲಿಕೆಯ ಉಪ ಆಯುಕ್ತರಾದ ಮಹಾವೀರ ಬೋರಣ್ಣನವರ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಟೆ, ಯೋಜನಾ ನಿರ್ದೇಶಕರಾದ ಸಿ ಬಿ ದೇವರಮನಿ, ವಿವಿಧ ಇಲಾಖೆಗಳ ಅಧಿಕಾರಿಗಳಾದ ರಾಮನಗೌಡ ಕನ್ನೊಳ್ಳಿ, ಸಿದ್ದರಾಮ ಮಾರಿಹಾಳ, ಈರಪ್ಪ ಅಲ್ಲಾಪುರೆ, ಮಲ್ಲಿಕಾರ್ಜುನ ಭಜಂತ್ರಿ, ಎಸ್.ಎನ್.ಬಗಲಿ, ಎಂ.ಎಸ್.ಬರಗಿಮಠ, ಎನ್.ಎಸ್.ಲಕ್ಕನ್ನವರ, ಬಾಬು ಚಾಂದಕವಟೆ, ಗುರುಪಾದಯ್ಯ ಹಿರೇಮಠ, ಮಹಿಳಾ ಅಧಿಕಾರಿಗಳಾದ ಸಾವಿತ್ರಿ ದಳವಾಯಿ, ರೇಣುಕಾ ಸಾತರ್ಲೆ, ಅನುಮಪ ಹರಪಳೆಕರ ಸೇರಿದಂತೆ ಇನ್ನೂ ಅನೇಕ ಇಲಾಖೆಗಳ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಮತ್ತು ಸಿಇಓ ಅವರ ಸಮ್ಮುಖದಲ್ಲಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾದರು. ಪ್ರತಿ ನಿತ್ಯ ವಿವಿಧ ಕಡತಗಳ ವಿಲೇವಾರಿಯಲ್ಲಿ ಮುಳುಗಿರುತ್ತಿದ್ದ ಅಧಿಕಾರಿಗಳು ಶ್ರಮದಾನದ ಅಂಗವಾಗಿ ಸರಳ ವಸ್ತçಧಾರಿಗಳಾಗಿ ಕಾಲೋನಿಗೆ ಸ್ವಚ್ಚತಾ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಚೆಂದಗೊಳಿಸಿದರು: ಕಾಲೋನಿಯ ಎಲ್ಲೆಂದರಲ್ಲಿ ಬೆಳೆದಿದ್ದ ಗಿಡ-ಗಂಟಿಗಳನ್ನು ಅಧಿಕಾರಿಗಳು ಕುಡಗೋಲು, ಕೊಡಲಿಯಿಂದ ಕತ್ತರಿಸಿ ಬಯಲುಗೊಳಿಸಿದರು. ವಿವಿಧ ತರಹದ ಕಸ ತೆಗೆದು ವಿಲೇ ಮಾಡಿದರು. ಮಹಾನಗರ ಪಾಲಿಕೆಯ ಕಸ ಹೊತ್ತೊಯ್ಯುವ ವಾಹನಗಳು ಅಲ್ಲಿನ ಕಸವನ್ನು ಬೇರೆಡೆ ಸಾಗಿಸಿದವು. ಜೆಸಿಬಿ ಮತ್ತು ಟ್ರಾಕ್ಟರ್ ಇನ್ನೀತರ ವಾಹನಗಳನ್ನು ಸ್ವಚ್ಚತಾ ಕಾರ್ಯಕ್ಕೆ ಬಳಸಲಾಯಿತು. ಸ್ವಚ್ಚತಾ ಕಾರ್ಯವನ್ನು ಅಚ್ಚುಕಟ್ಟಾಗಿ ನಡೆಸಿ ಕಾಲೋನಿಯ ಬೀದಿಗಳು, ಉದ್ಯಾನ ಆವರಣವನ್ನು ಚೆಂದಗೊಳಿಸಿದರು.
ಸಾರ್ವಜನಿಕರು ಸಹ ಭಾಗಿ: ಜಿಲ್ಲಾಧಿಕಾರಿಗಳು ಮತ್ತು ಸಿಇಓ ಹಾಗೂ ಇನ್ನೀತರ ಅಧಿಕಾರಿಗಳು ಪೊರಕೆ ಬುಟ್ಟೆ ಹಿಡಿದು ಸ್ವಚ್ಚತಾ ಕಾರ್ಯದಲ್ಲಿ ಭಾಗಿಯಾಗಿದ್ದನ್ನು ಕಂಡ ಅಲ್ಲಿನ ನಿವಾಸಿಗಳು ಮತ್ತು ಯುವಕರು, ಮಹಿಳೆಚಿiÀÄರು ಸ್ವಚ್ಚತಾ ಕಾರ್ಯದಲ್ಲಿ ಸ್ವಯಂ ಪ್ರೇರಣೆಯಿಂದ ಭಾಗಿಯಾದರು.
ಸಾರ್ವಜನಿಕರಲ್ಲಿ ಮನವಿ: ಶ್ರಮದಾನದ ಬಳಿಕ ಶಿವ ದೇವಾಲಯದ ಆವರಣದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಕಾಲೊನಿಯ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ನಿತ್ಯ ಜೀವನದಲ್ಲಿ ದೈವ ಭಕ್ತಿಯಷ್ಟೇ ಸ್ವಚ್ಛತೆ ಕೂಡ ಮುಖ್ಯವಾಗಿದೆ ಎಂಬುದು ಗಾಂಧೀಜಿಯವರ ವಿಚಾರಧಾರೆಯಾಗಿತ್ತು. ಗಾಂಧೀಜಿಯವರು ವೈಯಕ್ತಿಕ ಸ್ವಚ್ಛತೆ, ಪರಿಸರದ ಶುಚಿತ್ವ ಮತ್ತು ಮನಸಿನ ಸ್ವಚ್ಛತೆಯ ಬಗ್ಗೆ ತಿಳಿಸಿದ್ದಾರೆ. ಇಂತಹ ಮಹಾತ್ಮನ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ಶಿಂಧೆ ಅವರು ಮಾತನಾಡಿ, ಸ್ವಚ್ಚತಾ ಕಾರ್ಯ ಬರೀ ಪಾಲಿಕೆಯ ಕೆಲಸವಲ್ಲ; ಸಾರ್ವಜನಿಕರು ಪ್ರತಿ ದಿನ ತಮ್ಮ ತಮ್ಮ ಮನೆಯ ಸುತ್ತಲು ಶುಚಿತ್ವ ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದರು.

ಸಂಘ-ಸಂಸ್ಥೆಗಳ ಪ್ರಮುಖರು ಭಾಗಿ: ಗಾಂಧೀಜಿ ಜಯಂತಿ ಹಿನ್ನೆಲೆಯಲ್ಲಿ ವಿಶೇಷ ಸ್ವಚ್ಚತಾ ಕಾರ್ಯ ನಿರ್ಣಯ ತೆಗೆದುಕೊಂಡ ವಿಜಯಪುರ ಜಿಲ್ಲಾಡಳಿತದ ಕಾರ್ಯವನ್ನು ಮೆಚ್ಚಿ ಸ್ಥಳಕ್ಕೆ ಆಗಮಿಸಿದ್ದ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳಾದ ದೇವೇಂದ್ರ ಮೇರೆಕರ, ಭೀಮರಾಯ ಜಿಗಜಿಣಗಿ, ಗಿರೀಶ ಕುಲಕರ್ಣಿ ಹಾಗೂ ಇತರರು ಸಹ ಅಧಿಕಾರಿಗಳೊಂದಿಗೆ ಸ್ವಚ್ಚತಾ ಕಾರ್ಯದಲ್ಲಿ ಭಾಗಿಯಾದರು.
ಉಪಹಾರ ವ್ಯವಸ್ಥೆ: ಬೆಳಗ್ಗೆ 6 ಗಂಟೆಯಿAದ 9.30ರವರೆಗೆ ಸತತ ಮೂರೂವರೆ ಗಂಟೆಗಳ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳು, ಸಿಬ್ಬಂದಿ ಮತ್ತು ಅಲ್ಲಿನ ನಿವಾಸಿಗಳಿಗು ಸಹ ಉಪಹಾರ-ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.
ನಿವಾಸಿಗಳಿಂದ ಮನವಿ: ಮಹಾತ್ಮ ಗಾಂಧೀಜಿ ಕಾಲೊನಿಗೆ ಕುಡಿಯುವ ನೀರು, ಆಸ್ಪತ್ರೆ, ವಿದ್ಯುತ್, ಅಂಗನವಾಡಿ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಲು ಅಲ್ಲಿನ ನಿವಾಸಿಗಳು ಇದೆ ವೇಳೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news