Home News ನಿವೃತ್ತ ಶಿಕ್ಷಕ ನಿಧನ, ದೇಹದಾನ ಮಾಡಿ ಆದರ್ಶ ಮೆರೆದ ಶಿಕ್ಷಕ- ಎಸ್.ಡಿ.ಅಲ್ಲಾಪೂರ.

ನಿವೃತ್ತ ಶಿಕ್ಷಕ ನಿಧನ, ದೇಹದಾನ ಮಾಡಿ ಆದರ್ಶ ಮೆರೆದ ಶಿಕ್ಷಕ- ಎಸ್.ಡಿ.ಅಲ್ಲಾಪೂರ.

by vegadhut@gmail.com.
0 comments

ಸಿಂದಗಿ: ಪಟ್ಟಣದ ಅಲ್ಲಾಪೂರ ಮನೆತನದ ಹಿರಿಯ ಜೀವ ಎಸ್.ಡಿ.ಅಲ್ಲಾಪೂರ(೮೯) ಅವರು ವಯೋ ಸಹಜದಿಂದ ರವಿವಾರ ನಿಧನರಾಗಿದ್ದಾರೆ. ಮೃತರು ಪತ್ನಿ, ಲಿಂಬೆ ಅಬಿವೃದ್ಧಿ ಮಂಡಳಿ ಮಾಜಿ ಆದ್ಯಕ್ಷ ಅಶೋಕ ಅಲ್ಲಾಪೂರ ಸೇರಿದಂತೆ ೩ ಜನಗಂಡು ಹಾಗೂ ಓರ್ವ ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಮೃತರು ಪಟ್ಟಣದ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಪ್ರೌಢ ಶಾಲೆಯಲ್ಲಿ ಸುಮಾರು ೩೫ ವರ್ಷಗಳ ಕಾಲ ಶಿಕ್ಷಕರಾಗಿ ಮುಖ್ಯೋಪಾಧ್ಯಯರಾಗಿ ಸೇವೆ ಸಲ್ಲಿಸಿದ್ದಾರೆ. ಮೃತರು ವಿಜಯಪುರದ ಬಿಎಲ್‌ಡಿಇ ಆಸ್ಪತ್ರೆಗೆ ದೇಹವನ್ನು ದಾನ ಮಾಡುವ ಮೂಲಕ ಸಾವಿನ ನಂತರವೂ ಸಮಾಜ ಸೇವೆ ಮಾಡಿ ಆದರ್ಶ ಮೆರದಿದ್ದಾರೆ.

ಸಂತಾಪ- ನಿವೃತ್ತ ಶಿಕ್ಷಕ ಎಸ್.ಡಿ.ಅಲ್ಲಾಪೂರ ಅವರ ನಿಧನಕ್ಕೆ ಸ್ಥಳಿಯ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಊರಿನ ಹಿರಿಯ ಮಠದ ಪೂಜ್ಯ ಶ್ರೀ ಶಿವಾನಂದ ಶಿವಾಚಾರ್ಯರು, ಮನಗೂಳಿಯ ಪೂಜ್ಯ ಶ್ರೀ ಅಭಿನವ ಸಂಗನಬಸವ ಶಿವಾಚಾರ್ಯರು, ಆಸಂಗಿಹಾಳದ ಪೂಜ್ಯರು, ಗೋಲಗೇರಿಯ ಶ್ರೀಗಳು, ಕನ್ನೋಳ್ಳಿಯ ಶ್ರೀ ಸಿದ್ದಲಿಂಗ ಶಿವಾಚಾರ್ಯರು, ಯಡ್ರಾಮಿಯ ಪೂಜ್ಯ ಶ್ರೀ ಸಿದ್ದಲಿಂಗ ಶಿವಾಚಾರ್ಯರು ಮತ್ತು ಶಾಸಕ ರಮೇಶ ಭೂಸನೂರ, ಸಂಸದ ರಮೇಶ ಜಿಗಜಿಣಗಿ ಶಾಸಕ ಬಸನಗೌಡ ಪಾಟೀಲ (ಯತ್ನಾಳ) ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಅಧ್ಯಕ್ಷ ಅಶೋಕ ಮನಗೂಳಿ ಹಾಗೂ ನಿರ್ದೇಶಕ ಮಂಡಳಿ ಮತ್ತು ಬೋಧಕ, ಬೋಧಕೇತರ ಸಿಬ್ಬಂದಿ, ಪುರಸಭೆಯ ಅಧ್ಯಕ್ಷ ಡಾ ಶಾಂತವೀರ ಮನಗೂಳಿ, ಮಾಜಿ ವಿಪ ಸದಸ್ಯ ಅರುಣ ಶಹಾಪೂರ, ಬಿಜೆಪಿ ಮುಖಂಡ ಉಮೇಶ ಕಾರಜೋಳ, ಕಾಂಗ್ರೆಸ್ ಮುಖಂಡ ಎಸ್.ಎಮ್.ಪಾಟೀಲ ಗಣಿಹಾರ, ಸಹಕಾರಿ ಧುರೀಣ ಶಿವಪ್ಪಗೌಡ ಬಿರಾದಾರ, ಬಿಜೆಪಿ ಮುಖಂಡ ಶಂಭುಲಿಂಗ ಕಕ್ಕಳಮೇಲಿ, ಮುತ್ತು ಶಾಬಾದಿ, ಜೆಡಿಎಸ್ ಮುಖಂಡ ಶಿವಾನಂದ ಪಾಟೀಲ ಸೋಮಜ್ಯಾಳ, ಕಸಾಪ ಅಧ್ಯಕ್ಷ ರಾಜಶೇಖರ ಕೂಚಬಾಳ, ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ಶಾಬಾದಿ, ನಿವೃತ್ತ ಪ್ರಾಚಾರ್ಯ ಎ.ಎಸ್.ಬಿರಾದಾರ, ಹಿರಿಯ ಸಾಹಿತಿ ಡಾ.ಚನ್ನಪ್ಪ ಕಟ್ಟಿ, ಡಾ.ಎಂ.ಎಮ.ಪಟಶೆಟ್ಟಿ, ಎಂ.ಎಸ್.ಹೈಯಾಳಕರ, ಎಮ್.ಎಮ್.ಹಂಗರಗಿ, ಸೋಮನಗೌಡ ಬಿರಾದಾರ, ಪೂಜ್ಯ ಶ್ರೀ ಚೆನ್ನವೀರ ಶಿವಾಚಾರ್ಯ ರೈತ ಉತ್ಪಾದಕರ ಸಂಸ್ಥೆ, ನಗರ ಸುಧಾರಣಾ ವೇದಿಕೆ, ಶ್ರೀಗುರು ಡವಲರ‍್ಸ್, ತಾಲೂಕಿನ ರೈತ ಬಳಗ ಸೇರಿದಂತೆ ವಿವಿಧ ಸಂಘಟನೆಗಳ ಮತ್ತು ಶಾಲಾ ಕಾಲೇಜುಗಳ ಮುಖ್ಯಸ್ಥರು ಸಂತಾಪ ವ್ಯಕ್ತ ಪಡಿಸಿದ್ದಾರೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news