ತಾಲ್ಲೂಕಿನ ಬಂದಾಳ ಗ್ರಾಮದ ಸಮೀಪವಿರುವ ಬಸವಣ್ಣ ದೇವಸ್ಥಾನದ ಹತ್ತಿರ ಹೋಮಗಾರ್ಡ್ ಶಿವಾನಂದ ಚೌದರಿ ಸಾ||ಬೂದಿಹಾಳ (42) ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸಿಂದಗಿ : ಆತ್ಮಹತ್ಯೆಗೂ ಮೋದಲು ವಿಡೀಯೊ ಚಿತ್ರಿಕರಣ ಮಾಡಿ ವಾಟ್ಸಪ್ ಸ್ಟೇಟಸ್ ಹಾಕಿದ ಮೃತ್ತ ಶಿವಾನಂದ ಚೌದರಿಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪ್ರೇಯಸಿಯೊಂದಿಗೆ ಇರುವ ಭಾವಚಿತ್ರಗಳು ಜಾಲತಾಣಗಳಲ್ಲಿವೆ.
ನನ್ನ ಮೂರು ಮಕ್ಕಳು ಪರದೇಶಿ ಯಾದರು ಚಿಂತೆ ಇಲ್ಲ ಅವಳಿಗೆ ಶೀಕ್ಷೆಕೊಡಿಸಿ. ಒಂದು ಬೆರಳಿಂದ ಇನ್ನೊಂದು ಬೆರಳಿಗೆ ಉಗುಳು ಹಚ್ಚುತ್ತಾಳೆ ತುಂಬಾ ಚಾಲಾಕಿ ಹೆಣ್ಣು, ಅವಳಿಗಾಗಿ ನಾನು ಮನೆಯವರ ಮಾತು ಕೇಳಲಿಲ್ಲಾ ನನ್ನ ಸಾವಿಗೆ ಅವಳೆ ಕಾರಣ ನಾನು ನೀಡಿರುವ ಹಣ ನನ್ನ ಮಕ್ಕಳಿಗೆ ತಲುಪಿಸಿ ನ್ಯಾಯಕೋಡಿಸಿ. ಅವಳಿಗೆ ಶೀಕ್ಷಗೆ ಗುರಿಮಾಡಿ ಊರಿನಲ್ಲಿ ಇನ್ನಷ್ಟು ಜನರು ಹಾಳಾಗೋದು ತಪ್ಪುತ್ತೆ ಎಂದು ಹೇಳಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ್ತನಿಗೆ ಇಬ್ಬರು ಪುತ್ರರು ಹಾಗೂ ಒಬ್ಬ ಸುಪತ್ರಿ ಹಾಗೂ ಕುಟುಂಬವನ್ನು ಅಗಲಿದ್ದಾರೆ. ಸಿಂದಗಿ ಪೊಲೀಸ್ ಠಾಣಾ ಸಿಬ್ಬಂಧಿಗಳು ಸ್ಥಳಕ್ಕೆ ಬೇಟಿ ನೀಡಿ ತನಿಖೆ ನಡೆಸಿದ್ದಾರೆ.
